Ragini Dwivedi : ರಾಗಿಣಿ ಕನ್ನಡ ಮಾತ್ರವಲ್ಲದೇ ಸೌತ್ ಮತ್ತು ಬಾಲಿವುಡ್‌ನಲ್ಲಿ ಕೂಡ ನಟಿಸುತ್ತಿದ್ದಾರೆ. ಹೊಸ ಬಗೆಯ ಪಾತ್ರಗಳ ಮೂಲಕ ನಟಿ ಬರುತ್ತಿದ್ದಾರೆ. ಕೆಂಪೇಗೌಡ, ವೀರ ಮದಕರಿ, ಕಳ್ಳ ಮಳ್ಳ ಸುಳ್ಳ ಸಿನಿಮಾಗಳಿಂದ ಹೆಚ್ಚು ಗಮನ ಸೆಳೆದಿದ್ದ ನಟಿ ಜೀವನದಲ್ಲಿ ಆದ ಕಹಿ ಘಟನೆಯಿಂದ ಹೊರಬಂದು ಕಂಪ್ಲೀಟ್ ಆಗಿ ಸಿನಿಮಾ ಮತ್ತು ಜನಸೇವೆ ಬಗ್ಗೆ ಹೆಚ್ಚು ಗಮನಹರಿಸಿದ್ದಾರೆ. ಯಾವತ್ತೂ ನೆಗೆಟಿವ್ ವಿಚಾರಕ್ಕೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳಬಾರದು. ಅದು ನಮ್ಮನ್ನ ಕುಗ್ಗಿಸುತ್ತೆ. ನಗುತ್ತಲೇ ಎಲ್ಲವನ್ನೂ ಎದುರಿಸಬೇಕು ಅಂತಾರೆ ನಟಿ ರಾಗಿಣಿ.
ನನ್ನ ಮೇಲೆ ಇಲ್ಲ ಸಲ್ಲದ ಆರೋಪವನ್ನ ಬೇಕು ಅಂತಲೇ ಮಾಡಿದ್ರು.ಅದು ನಂಗೆ ಫ್ಯಾಮಿಲಿಗೆ ದೊಡ್ಡ ಮಟ್ಟದಲ್ಲಿ ನೋವಾದ್ರೂ ನನ್ನ ತಾಯಿತಂದೆಗೆ ನಾನು ಏನು ಅಂತ ಗೊತ್ತಿದ್ದ ಕಾರಣ ಎಲ್ಲವೂ ಈಗ ಮರೆತಿದ್ದೇವೆ.ಒಳ್ಳೆ ಹುಡುಗ ಸಿಕ್ರೆ ಆದಷ್ಟು ಬೇಗ ಮದುವೆ ಆಗ್ತಿನಿ ಅಂತ ಜೀ ಕನ್ನಡ ನ್ಯೂಸ್ ಜೊತೆ ಮಾತನಾಡೋ ವೇಳೆ ಹೇಳುಕೊಂಡಿದ್ದಾರೆ ತುಪ್ಪದ ಬೆಡಗಿ ರಾಗಿಣಿ. ಯಾವುದಕ್ಕೂ ಯಾವತ್ತೂ ಕೇರ್ ಮಾಡಬಾರದು.ಹೆಣ್ಣುಮಕ್ಕಳು ಸ್ಟ್ರಾಂಗ್ ಇರಬೇಕು ಅಂತ ಮಹಿಳೆಯರಿಗೆ ಒಳ್ಳೆ ಮೆಸ್ಸೇಜ್ ತಲುಪಿಸಿದ್ದಾರೆ ರಾಗಿಣಿ.
ಇದನ್ನೂ ಓದಿ : ಸೈಫ್ ಜೊತೆ ಮದುವೆ ಬಳಿಕ ಕರೀನಾ ಇಸ್ಲಾಂಗೆ ಮತಾಂತರಗೊಂಡಿದ್ದಾರಾ?
ರಾಗಿಣಿ ಕೈಯಲ್ಲಿ ಈಗ ಒಟ್ಟು ಏಳು ಸಿನಿಮಾಗಳಿವೆ. ಇನ್ನೊಂದಿಷ್ಟು ಚಿತ್ರಗಳು ಮಾತುಕತೆಯ ಹಂತದಲ್ಲಿದೆ. ಈ ವರ್ಷ ರಾಗಿಣಿ ಅಭಿಮಾನಿಗಳಿಗೆ ಸಿನಿಮಾಗಳ ಮೂಲಕ ಹಬ್ಬವೋ ಹಬ್ಬ.ಸ್ಯಾಂಡಲ್‌ವುಡ್‌ನ ಸಖತ್ ಗ್ಲಾಮರಸ್ ನಟಿಯರ ಪೈಕಿ ರಾಗಿಣಿ ದ್ವಿವೇದಿ ಕೂಡ ಒಬ್ಬರು.
ಅಂದ್ಹಾಗೆ, ‘ವೀರ ಮದಕರಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ರಾಗಿಣಿ ದ್ವಿವೇದಿ, ‘ಶಂಕರ್ ಐಪಿಎಸ್’, ‘ಕೆಂಪೇಗೌಡ’, ‘ಕಳ್ಳ ಮಳ್ಳ ಸುಳ್ಳ’, ‘ಶಿವ’, ‘ರಾಗಿಣಿ ಐಪಿಎಸ್’, ‘ಕಿಚ್ಚು’, ‘ಅಧ್ಯಕ್ಷ ಇನ್ ಅಮೇರಿಕಾ’ ಸೇರಿದಂತೆ 25 ಸಿನಿಮಾಗಳಲ್ಲಿ ಮಿಂಚಿದ್ದಾರೆ. ಸದ್ಯ ರಾಗಿಣಿ ದ್ವಿವೇದಿ ಕೈಯಲ್ಲಿ ‘ಗಾಂಧಿಗಿರಿ’, ‘ಸಾರಿ ಕರ್ಮ ರಿಟರ್ನ್ಸ್’, ‘ಬಿಂಗೊ’ ಎಂಬ ಚಿತ್ರಗಳಿವೆ.ರಾಗಿಣಿ ಸುಮಾರು 25 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಕೆಲ ಹಿಂದಿ,ಮಲಯಾಳಂ.ತೆಲಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ : BBK ನನಗೆ ಮೋಸ ಮಾಡಿದೆ, Bigg Boss ವೀಕೆಂಡ್ ಕಾರ್ಯಕ್ರಮದಲ್ಲಿ ನಿರೂಪಕ ಇರಬಾರದು : ಆರ್ಯವರ್ಧನ್ ಗುರೂಜಿ
ರಾಗಿಣಿ 1990 ರಲ್ಲಿ ಬೆಂಗಳೂರಿನಲ್ಲಿ ಪಂಜಾಬಿ ಕುಟುಂಬದಲ್ಲಿ ಜನಿಸಿದರು.ಇವರ ತಂದೆ ಸೈನ್ಯದ ಜನರಲ್ ಆಗಿದ್ದರು. 2008 ರಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೆ ಇಳಿದ ರಾಗಿಣಿ ಹೈದಾರಾಬಾದಿನಲ್ಲಿ ಜರುಗಿದ ಫೆಮಿನಾ ಮಿಸ್ ಇಂಡಿಯಾ ಸ್ಫರ್ಧೆಯಲ್ಲಿ ಭಾಗವಹಿಸಿ ರನ್ನರ್-ಅಪ್ ಆದರು.2009 ರಲ್ಲಿ ಮುಂಬೈನಲ್ಲಿ ಜರುಗಿದ ಫೆಮಿನಾ ಮಿಸ್ ಬ್ಯೂಟಿಪುಲ್ ಹೇರ್ ಸ್ಫರ್ಧೆ ಗೆದ್ದರು.ನಂತರ ಕನ್ನಡದ ಬಹುತೇಕ ನಟರೊಂದಿಗೆ ತೆರೆಹಂಚಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.