ಶುಭ ಪೂಂಜಾಗೆ ದೇಹದ ತೂಕ 17 KG ಇಳಿಸೋ ಟಾರ್ಗೆಟ್..
ಶುಭಪೂಂಜಾ... ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಜನಮನ ಗೆದ್ದ ನಟಿ. ಯಾಕಿಂಗೆ ಆಡ್ತಾರೋ ಈ ಹುಡುಗರು ಅಂತ ಕುಣಿದು ಕುಪ್ಪಳಿಸಿ ಭರ್ಜರಿ ಮನರಂಜನೆ ನೀಡಿದ ಶುಭ ಪೂಂಜಾ ಈಗ ಫ್ಯಾಮಿಲಿ ಜೊತೆ ಫುಲ್ ಬ್ಯುಸಿ ಆಗಿದ್ದಾರೆ ಪಕ್ಕಾ ಗೃಹಿಣಿಯಂತೆ ಟೈಮ್ ಟೈಮ್ಗೆ ಪತಿರಾಯನಿಗೆ ಬೇಕಾಗಿರೋ ತರ ವೆರೈಟಿ ವೆರೈಟಿ ಫುಡ್ ಗಳನ್ನ ಮಾಡಿಕೊಡುತ್ತಾ ಹಾಯಾಗಿ ಇದ್ದಾರೆ.
ಶುಭಪೂಂಜಾ... ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಜನಮನ ಗೆದ್ದ ನಟಿ. ಯಾಕಿಂಗೆ ಆಡ್ತಾರೋ ಈ ಹುಡುಗರು ಅಂತ ಕುಣಿದು ಕುಪ್ಪಳಿಸಿ ಭರ್ಜರಿ ಮನರಂಜನೆ ನೀಡಿದ ಶುಭ ಪೂಂಜಾ ಈಗ ಫ್ಯಾಮಿಲಿ ಜೊತೆ ಫುಲ್ ಬ್ಯುಸಿ ಆಗಿದ್ದಾರೆ ಪಕ್ಕಾ ಗೃಹಿಣಿಯಂತೆ ಟೈಮ್ ಟೈಮ್ಗೆ ಪತಿರಾಯನಿಗೆ ಬೇಕಾಗಿರೋ ತರ ವೆರೈಟಿ ವೆರೈಟಿ ಫುಡ್ ಗಳನ್ನ ಮಾಡಿಕೊಡುತ್ತಾ ಹಾಯಾಗಿ ಇದ್ದಾರೆ. ಇದರ ಬೆನ್ನಲ್ಲೇ ದೇಹದ ತೂಕವನ್ನ ಇಳಿಸಿಕೊಳ್ಳಲು ಭರ್ಜರಿಯಾಗಿ ಸಿದ್ಧತೆ ಮಾಡಿಕೊಂಡಿದ್ದಾರೆ.
ಹೌ̧ದು ಮದುವೆಯಾದ ಬಳಿಕ ಟ್ರಿಪ್ ಅಂತ ಬ್ಯುಸಿಯಾಗಿದ್ದ ಶುಭ ಪೂಂಜಾ ಯಾವುದೇ ರೀತಿಯ ಡಯಟ್ ಮಾಡದೇ ತೂಕ ಹೆಚ್ಚಿಸಿಕೊಂಡಿದ್ದರು. ಇದೀಗ ಸುಮಾರು 17 ಕೆಜಿ ಇಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ.ಹೆಲ್ತಿ ಫುಡ್ ಗಳನ್ನ ಮಾತ್ರ ಸೇವಿಸುತ್ತಿದ್ದಾರೆ.ಜಂಕ್ ಫುಡ್ ಕಂಪ್ಲೀಟ್ ದೂರಇಟ್ಟು ಮನೆಯಲ್ಲೇ ಫ್ರೆಶ್ ಫುಡ್ ತಯಾರಿಸಿ ಸೇವಿಸುತ್ತಿದ್ದಾರೆ.
ಇದನ್ನೂ ಓದಿ-ರಿಷಬ್ ಅನ್ನೋ ಹೆಸರಿನಲ್ಲಿದೇಯಾ ಅದೃಷ್ಟ...
ಜೊತೆಗೆ ನಿತ್ಯ ಒಂದು ಗಂಟೆಗಳ ಕಾಲ ವರ್ಕೌಟ್,ಯೋಗ ಅಂತ ಮಾಡುತ್ತಿದ್ದಾರೆ. ಈಗ ಸದ್ಯ 7 Kg ಇಳಿಸಿದ್ದಾರೆ ಅನ್ನೋದನ್ನ ಸ್ವತಃ ಜೀ ಕನ್ನಡ ನ್ಯೂಸ್ ಜೊತೆ ಮಾತನಾಡೋ ವೇಳೆ ಶುಭ ಪೂಂಜಾ ಹೇಳಿಕೊಂಡಿದ್ದಾರೆ. ಸಾಕಷ್ಟು ಸಿನಿಮಾ ಆಫರ್ ಗಳು ಇದ್ದರೂ ಕೂಡ ಬೋಲ್ಡ್ ಪಾತ್ರಗಳನ್ನ ನಾನು ಇನ್ನೂ ಮುಂದೆ ಮಾಡಲ್ಲ. ಮಕ್ಕಳು ಮಹಿಳೆಯರು ಮತ್ತು ಫ್ಯಾಮಿಲಿ ಕುಳಿತು ನೋಡೋ ಸಿನಿಮಾಗಳನ್ನ ಮಾತ್ರ ನಾನು ಮುಂದಿನ ದಿನಗಳಲ್ಲಿ ಮಾಡುತ್ತೀನಿ ಅಂತ ಹೇಳಿಕೊಂಡಿದ್ದಾರೆ. ಕಿಯಾರಾ ಅಡ್ವಾಣಿ-ಸಿದ್ಧಾರ್ಥ್ ಮಲ್ಹೋತ್ರಾ ಆರತಕ್ಷತೆಯಲ್ಲಿ ಭೂಮಿ ಪೆಡ್ನೇಕರ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.