ರಿಷಬ್‌ ಅನ್ನೋ ಹೆಸರಿನಲ್ಲಿದೇಯಾ ಅದೃಷ್ಟ...

ಸಂಖ್ಯಾಶಾಸ್ತ್ರದ ಪ್ರಕಾರ ಪ್ರಶಾಂತ್ ಶೆಟ್ಟಿ ಹೆಸರು ಬದಲಿಸಿದರೆ ಮಾಡುವ ಕೆಲಸದಲ್ಲಿ ಏನಾದರೂ ಬದಲಾವಣೆ ಆಗಬಹುದು ಎಂದು ತಂದೆಯವರ ಸಲಹೆಯಂತೆ ರಿಷಬ್ ಶೆಟ್ಟಿ ಎಂದು ಮರುನಾಮಕರಣ ಮಾಡಿಕೊಂಡರಂತೆ.

Written by - Zee Kannada News Desk | Last Updated : Feb 13, 2023, 03:21 PM IST
  • ಪ್ರಶಾಂತ್‌ ಅಲಿಯಾಸ್‌ ರಿಶಬ್‌ ಶೆಟ್ಟಿ ಅವರ ಆರಂಭಿಕ ಜೀವನ
    ಹೆಸರು ಬದಲಿಸಿದ ಮೇಲೆ ಅದೃಷ್ಟ
  • `ರಿಕ್ಕಿ' ಚಿತ್ರದಿಂದ ಸಿನಿಮಾ ನಿರ್ದೇಶನಕ್ಕೆ ಇಳಿದ ರಿಷಬ್ ಮುಂದೆ ಕಿರಿಕ್ ಪಾರ್ಟಿ ಅಂತಹ ಸೂಪರ್ ಹಿಟ್ ಚಿತ್ರವನ್ನು ಕೊಟ್ಟರು.
ರಿಷಬ್‌ ಅನ್ನೋ ಹೆಸರಿನಲ್ಲಿದೇಯಾ ಅದೃಷ್ಟ...  title=

ಪ್ರಶಾಂತ್‌ ಅಲಿಯಾಸ್‌ ರಿಶಬ್‌ ಶೆಟ್ಟಿ ಅವರ ಆರಂಭಿಕ ಜೀವನ :
ಎಲ್ಲರಿಗೂ ತಿಳಿದಿರುವಂತೆ ರಿಷಬ್ ಶೆಟ್ಟಿ ಅವರ ಹೆಸರು ಹುಟ್ಟಿದಾಗ ಮನೆಯಲ್ಲಿ ಇಟ್ಟ ಹೆಸರು ಪ್ರಶಾಂತ್ ಶೆಟ್ಟಿ.ರಿಷಬ್ ಶೆಟ್ಟಿ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕೊಡಚಾದ್ರಿ ಬೆಟ್ಟದ ಪಕ್ಕ ಕೆರಾಡಿ ಊರಿನಳ್ಳಿ ಜನಿಸಿದರು. ಕುಟುಂಬದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿ ಏನೂ ಇರಲಿಲ್ಲ. ಬಡ್ಡಿ ಕಟ್ಟಲು ಪರದಾಡಬೇಕಿದ್ದ ದುಸ್ಥಿತಿ ಕಂಡವರು. ತರ್ಲೆ, ತಲೆ ಹರಟೆ ಮಾಡಿಕೊಂಡು ಬೆಳೆದ ರಿಷಬ್ ಶೆಟ್ಟಿಗೆ ಡಾ.ರಾಜ್‌ಕುಮಾರ್ ಮೊದಲ ಸ್ಫೂರ್ತಿ. ಇವರು ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕ, ನಟ ಮತ್ತು ನಿರ್ಮಾಪಕ. ತಮ್ಮ ವಿಭಿನ್ನ ಚಿತ್ರಗಳು ಮತ್ತು ಭಿನ್ನ ಚಿತ್ರ ನಿರ್ಮಾಣ ಶೈಲಿಯಿಂದ ಪ್ರಸಿದ್ಧರಾಗಿದ್ದಾರೆ. ಕುಂದಾಪುರದಲ್ಲಿ ಜನಿಸಿದ ಇವರು ಬೆಂಗಳೂರಿನ ಸರಕಾರಿ ಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಚಿತ್ರ ನಿರ್ದೇಶನದಲ್ಲಿ ಡಿಪ್ಲೋಮಾ ಹೊಂದಿದ್ದಾರೆ. ನಂತರ ಕೆಲಕಾಲ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಇವರು ಹಾಗೇ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ .ರಂಗಭೂಮಿ ಹಿನ್ನಲೆಯಿಂದ ಬಂದ ಇವರು ಯಕ್ಷಗಾನ ಕಲೆಯಲ್ಲೂ ಪರಿಣಿತಿ ಪಡೆದಿದ್ದಾರೆ.`ರಿಕ್ಕಿ' ಚಿತ್ರದಿಂದ ಚಿತ್ರ ನಿರ್ದೇಶನಕ್ಕೆ ಇಳಿದ ಇವರು ಮುಂದೆ `ಕಿರಿಕ್ ಪಾರ್ಟಿ'ಯಂತಹ ಸೂಪರ್ ಹಿಟ್ ಚಿತ್ರವನ್ನು ಕೊಟ್ಟರು. ಕೇರಳದ ಕಾಸರಗೋಡುವಿನಲ್ಲಿ ಕನ್ನಡ ಶಾಲೆಗಳ ಪರಿಸ್ಥಿತಿ ಕುರಿತು ಇವರು ನಿರ್ದೇಶಿಸಿದ ಚಿತ್ರ `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು' ಚಿತ್ರ ಪ್ರೇಕ್ಷಕ ಮತ್ತು ವಿಮರ್ಶಕರಿಂದ ವ್ಯಾಪಕ ಮನ್ನಣೆ ಪಡೆಯಿತು.

ಇದನ್ನೂ ಓದಿ-ಒಂದಲ್ಲ ಎರಡಲ್ಲ.. ನಾಲ್ಕು ಮದುವೆಯಾಗಿದ್ದರು ಈ ಬಾಲಿವುಡ್‌ ಸ್ಟಾರ್‌.!

ಹೆಸರು ಬದಲಿಸಿದ ಮೇಲೆ ಅದೃಷ್ಟ
ಸಂಖ್ಯಾಶಾಸ್ತ್ರದ ಪ್ರಕಾರ ಪ್ರಶಾಂತ್ ಶೆಟ್ಟಿ ಹೆಸರು ಬದಲಿಸಿದರೆ ಮಾಡುವ ಕೆಲಸದಲ್ಲಿ ಏನಾದರೂ ಬದಲಾವಣೆ ಆಗಬಹುದು ಎಂಬ ಭಾವನೆ ಬಂದ ಮೇಲೆ, ತಂದೆಯವರ ಸಲಹೆಯಂತೆ ರಿಷಬ್ ಶೆಟ್ಟಿ ಎಂದು ಮರುನಾಮಕರಣ ಮಾಡಿಕೊಂಡರಂತೆ. ಅದಾದ ಮೇಲೆ ನಿರ್ದೇಶಕ ಅರವಿಂದ್ ಕೌಶಿಕ್ ಪರಿಚಯ ಆಯ್ತು. ಅದೇ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ಪರಿಚಯವೂ ಆಯಿತು. ಸ್ವಲ್ಪ ದಿನಗಳ ಬಳಿಕ ತುಘ್ಲಕ್ ಸಿನಿಮಾ ಶುರುವಾಯಿತು.

`ರಿಕ್ಕಿ' ಚಿತ್ರದಿಂದ ಸಿನಿಮಾ ನಿರ್ದೇಶನಕ್ಕೆ ಇಳಿದ ರಿಷಬ್ ಮುಂದೆ ಕಿರಿಕ್ ಪಾರ್ಟಿ ಅಂತಹ  ಸೂಪರ್ ಹಿಟ್ ಚಿತ್ರವನ್ನು ಕೊಟ್ಟರು. ರಿಷಬ್ ನಿರ್ದೇಶಿಸಿ, ನಿರ್ಮಿಸಿದ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾಗೆ ಅತ್ಯುತ್ತಮ ಮಕ್ಕಳ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ರಿಷಬ್ ಶೆಟ್ಟಿ ಪವನ್ ಕುಮಾರ್ ನಿರ್ದೇಶನದ ಲೂಸಿಯಾ ಸಿನಿಮಾದಲ್ಲಿ ಪೊಲೀಸ್ ಆಫೀಸರ್ ಆಗಿ ಒಂದು ಸಣ್ಣ ಪಾತ್ರ ನಿರ್ವಹಿಸಿದ್ದರು.  ನಂತರ ರಿಷಬ್ ಶೆಟ್ಟಿ ನಿರ್ದೇಶನದ  'ಉಳಿದವರು ಕಂಡಂತೆ' ಚಿತ್ರದಲ್ಲಿ ರಿಷಬ್ ಪ್ರಮುಖ ಪಾತ್ರ ನಿರ್ವಹಿಸಿದರು. ನಂತರ  ಬೆಲ್ ಬಾಟಮ್, ಹೋಮ್‌ಸ್ಟೇ, ಹೀರೋ, ಹರಿಕಥೆ ಅಲ್ಲ ಗಿರಿಕಥೆ, ಕಾಂತಾರ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶಿಸಿ, ಬಂಡವಾಳ ಹಾಕಿದ್ದ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು'. ಇದಕ್ಕೆ ಅತ್ಯುತ್ತಮ ಮಕ್ಕಳ ಸಿನಿಮಾ ವಿಭಾಗದಲ್ಲಿ ರಿಷಬ್ ಶೆಟ್ಟಿ ಅವರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. 150 ದಿನಗಳ ಕಾಲ ಪ್ರದರ್ಶನಗೊಂಡಿದ್ದ ಕಿರಿಕ್ ಪಾರ್ಟಿ ಸಿನಿಮಾಗೆ ಅತ್ಯುತ್ತಮ ನಿರ್ದೇಶಕನಾಗಿ ಫಿಲ್ಮ್ ಫೇರ್ ಪ್ರಶಸ್ತಿ ಲಭಿಸಿತ್ತು.  

ಇದನ್ನೂ ಓದಿ-ಕಿಯಾರಾ ಅಡ್ವಾಣಿ-ಸಿದ್ಧಾರ್ಥ್ ಮಲ್ಹೋತ್ರಾ  ಆರತಕ್ಷತೆಯಲ್ಲಿ ಭೂಮಿ ಪೆಡ್ನೇಕರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News