The Legend Of Hanuman : ಭಾರತೀಯ ಸಿನಿ ಜಗತ್ತಿನಲ್ಲಿ 'ಹನುಮಾನ್' ಸಿನಿಮಾ ಸಖತ್‌ ಸದ್ದು ಮಾಡುತ್ತಿದೆ. ಕನ್ನಡದಲ್ಲಿಯೂ ತೆರೆಕಂಡ ಈ ಸಿನಿಮಾಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ನಿರ್ದೇಶಕ ಪ್ರಶಾಂತ್ ವರ್ಮ ಹಾಗೂ ನಟ ತೇಜ ಸಜ್ಜಾ ಕಾಂಬಿನೇಷನ್‌ ವರ್ಕೌಟ್‌ ಆಗಿದ್ದು, ತೆಲುಗು ರಾಜ್ಯಗಳು, ತಮಿಳುನಾಡು, ಕೇರಳ ಮತ್ತು ಕರ್ನಾಟಕ ಹಾಗೂ ಹಿಂದಿಯಲ್ಲಿಯೂ ಉತ್ತಮ ಪ್ರದರ್ಶನ ಕಾಣುತ್ತಿದೆ.


COMMERCIAL BREAK
SCROLL TO CONTINUE READING

ಸೂಪರ್‌ ಸ್ಟಾರ್‌ ಮಹೇಶ್ ಬಾಬು ಹಾಗೂ ಹ್ಯಾಟ್ರಿಕ್‌ ಡೈರೆಕ್ಟರ್‌ ತ್ರಿವಿಕ್ರಮ್ ಅವರ ‘ಗುಂಟೂರ್ ಖಾರ’ ಸಿನಿಮಾಗೆ ʼಹನುಮಾನ್‌ʼ ಭಾರೀ ಪೈಪೋಟಿ ನೀಡುತ್ತಿದೆ. ಗುಂಟೂರ್‌ ಖಾರ ಸಿನಿಮಾದ ಕ್ರೇಜ್‌ ದಿನದಿಂದ ದಿನಕ್ಕೆ ತಗ್ಗುತ್ತಿದೆ. ಹನುಮಾನ್‌ ಕ್ರೇಜ್‌ ಹೆಚ್ಚಾಗುತ್ತಿದೆ. ಅಲ್ಲದೆ, ಸಂಕ್ರಾತಿ ಪ್ರಯುಕ್ತ ಇನ್ನೂ ಈ ಸಿನಿಮಾ ಹೌಸ್‌ ಫುಲ್‌ ಕಾಣುವ ಸಾಧ್ಯತೆ ಇದೆ. ಇದರ ನಡುವೆ ಒಟಿಟಿಯಲ್ಲಿಯೂ ಸಹ ಹನುಮಾನ್‌ ಹವಾ ಜೋರಾಗಿದೆ..  


ಇದನ್ನೂ ಓದಿ:ಕುಡಿಯೋಕೆ ನೀರಿಲ್ಲ, ಬಾತ್ರೂಮ್‌ಗೆ ದಾರಿಯಿಲ್ಲ..! ಏರೋಬ್ರಿಡ್ಜ್‌ನಲ್ಲಿ ನಟಿ ರಾಧಿಕಾ ಲಾಕ್


ಹೌದು.. ಯುವ ನಿರ್ದೇಶಕ ಪ್ರಶಾಂತ್ ವರ್ಮಾ ತಮ್ಮ ವಿಭಿನ್ನ ಕಥೆ ಮತ್ತು ಸಿನಿ ಶೈಲಿ ಮೂಲಕ ತೆಲುಗು ಸಿನಿರಂಗದಲ್ಲಿ ಈಗಾಗಲೇ ಹೆಸರು ಮಾಡಿದ್ದಾರೆ. ಇದಲ್ಲದೆ, ಅವರು ಇದುವರೆಗೆ ನಿರ್ದೇಶಿಸಿದ ಎರಡು ಚಿತ್ರಗಳು ಸಹ ಪ್ರೇಕ್ಷಕರನ್ನು ಆಕರ್ಷಿಸಿವೆ. ಇದೀಗ ಅವರ ‘ಹನುಮಾನ್‌’ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಮಿಂಚುವ ಸಾಧ್ಯತೆ ಇದೆ.


ಈ ಕಡೆ ತೇಜ ಸಜ್ಜಾ ಹನುಮಾನ್‌ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದ್ದರೆ ಇನ್ನೊಂದೆಡೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ 'ದಿ ಲೆಜೆಂಡ್ ಆಫ್ ಹನುಮಾನ್ ಸೀಸನ್ 3' ಎಂಬ ಅನಿಮೇಟೆಡ್ ಸರಣಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸರಣಿಯ ಮೊದಲ ಸೀಸನ್ 29ನೇ ಜನವರಿ 2021 ರಂದು ತೆರೆಗೆ ಬಂದಿತ್ತು. ಶರದ್ ದೇವರಾಜನ್, ಜೀವಿನ್ ಜಿ ಕಾಂಗ್ ಮತ್ತು ಚರುವಿ ಅಗರ್ವಾಲ್ ಜಂಟಿಯಾಗಿ ಈ ಸರಣಿಯನ್ನು ನಿರ್ದೇಶಿಸಿದ್ದಾರೆ.


ಇದನ್ನೂ ಓದಿ:ಜೀವನಕ್ಕಾಗಿ ಆದಿವಾಸಿಗಳ ಹೋರಾಟದ ಕಥೆ 'ಅಡವಿ'


ಎರಡನೇ ಸೀಸನ್‌ಗೆ ಸಿಕ್ಕ ಅಗಾಧ ಪ್ರತಿಕ್ರಿಯೆಯನ್ನು ನೋಡಿದ ನಂತರ ಮೊದಲ ಸೀಸನ್‌ನ ಬಿಡುಗಡೆಯನ್ನು ಅಧಿಕೃತವಾಗಿ ಘೋಷಿಸಿದರು. 'ಹನುಮಾನ್' ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ದಿನವೇ, 'ದಿ ಲೆಜೆಂಡ್ ಆಫ್ ಹನುಮಾನ್ ಸೀಸನ್ 3' OTT ನಲ್ಲಿ ಬಿಡುಗಡೆಯಾಯಿತು. ಅನಿಮೇಷನ್ ಸೀರೀಸ್ ಆಗಿದ್ದರೂ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಇಷ್ಟವಾಗುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.