ನಟ ಪ್ರಭಾಸ್ಗೆ ಕೂಡಿಬಂದ ಕಂಕಣ ಭಾಗ್ಯ: ಬಾಹುಬಲಿ ಕೈಹಿಡಿಯೋ ದೇವಸೇನಾ ಇವರೇ!
ಪ್ರಭಾಸ್ ಎಲ್ಲೇ ಹೋದರೂ ಸಹ ಅವರ ಮದುವೆ ಬಗ್ಗೆ ಪ್ರಸ್ತಾಪವಾಗುತ್ತಿತ್ತು. ಆದರೆ ಇದೀಗ ಇವೆಲ್ಲಾ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಸದ್ಯದಲ್ಲೇ ಪ್ರಭಾಸ್ ಮದುವೆ ಆಗಲಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ಹೇಳಿಕೊಂಡಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ಛಾಪು ಮೂಡಿಸಿರುವ ಕಲಾವಿದ ನಟ ಪ್ರಭಾಸ್ ಮದುವೆ ವಿಚಾರ ಹಲವು ವರ್ಷಗಳಿಂದ ಭಾರೀ ಚರ್ಚೆಗೀಡಾಗಿತ್ತು. ಕನ್ನಡತಿ, ತೆಲುಗು ನಟ ಅನುಷ್ಕಾ ಶೆಟ್ಟಿ ಸೇರಿದಂತೆ ಅನೇಕ ನಟಿಯರ ಜೊತೆ ಪ್ರಭಾಸ್ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ ಇದೀಗ ಅವರಿಗೆ ಕಂಕಣ ಬಲ ಕೂಡಿ ಬಂದಿದ್ದು, ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ.
ಇದನ್ನೂ ಓದಿ: ರೈಲು ಅಪಘಾತ ತಪ್ಪಿಸಲು ಹೊಸ ಯೋಜನೆ: 1000 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗ್ತಿದೆ ʼಕವಚ್ʼ
ಪ್ರಭಾಸ್ ಎಲ್ಲೇ ಹೋದರೂ ಸಹ ಅವರ ಮದುವೆ ಬಗ್ಗೆ ಪ್ರಸ್ತಾಪವಾಗುತ್ತಿತ್ತು. ಆದರೆ ಇದೀಗ ಇವೆಲ್ಲಾ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಸದ್ಯದಲ್ಲೇ ಪ್ರಭಾಸ್ ಮದುವೆ ಆಗಲಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ಹೇಳಿಕೊಂಡಿದ್ದಾರೆ.
ಪ್ರಭಾಸ್ ಪೋಷಕರು ಈಗಾಗಲೇ ಹುಡುಗಿಯನ್ನು ನೋಡಿದ್ದಾರೆ. ಆದರೆ ಆಕೆ ಸಿನಿಮಾ ರಂಗಕ್ಕೆ ಸೇರಿದವರು ಅಲ್ಲ ಎಂಬ ಮಾತೂ ಕೇಳಿ ಬರುತ್ತಿದೆ. ಇನ್ನು ಪೋಷಕರು ನೋಡಿರುವ ಹುಡುಗಿಯನ್ನೇ ನಟ ಮದುವೆಯಾಗುತ್ತಿದ್ದಾರೆ. ಸಿನಿಮಾ ರಂಗಕ್ಕೆ ಸಂಬಂಧಪಡದ ಹುಡುಗಿ ನಟ ಪ್ರಭಾಸ್ ಕೈಹಿಡಿಯಲಿದ್ದಾರೆ ಎಂಬ ವದಂತಿ ಎಲ್ಲೆಡೆ ಹರಿದಾಡುತ್ತಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್‌ನಲ್ಲಿ ಓಪನರ್ ರೋಹಿತ್ ಜೊತೆ ಈ ಸ್ಫೋಟಕ ಬ್ಯಾಟ್ಸ್‌ಮನ್ ಎಂಟ್ರಿ!
ಪ್ರಭಾಸ್ ಹೆಸರಿನ ಜೊತೆ ಅನೇಕ ನಟಿಯರ ಹೆಸರು ತಳುಕುಹಾಕುತ್ತಿತ್ತು. ಮುಖ್ಯವಾಗು ನಟಿ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಮದುವೆ ಆಗಲಿದ್ದಾರೆ ಎಂಬ ಗಾಸಿಪ್ ಚಿತ್ರರಂಗ ಸೇರಿ, ಅಭಿಮಾನಿಗಳಲ್ಲಿ ಹರಿದಾಡುತ್ತಿತ್ತು. ಇದೀಗ ಆ ಎಲ್ಲಾ ಸುದ್ದಿಗೆ ಫುಲ್‌ಸ್ಟಾಪ್ ಬೀಳುವ ಲಕ್ಷಣಗಳು ಕಾಣುತ್ತಿದೆ. ಸಿನಿಮಾರಂಗದವರನ್ನೇ ಮದುವೆಯಾಗುತ್ತಾರೆ ಎಂಬೆಲ್ಲಾ ಸುದ್ದಿ ಇನ್ನು ಒಂದು ವರ್ಷದೊಳಗೆ ಕೊನೆಯಾಗಲಿದೆ ಎನ್ನಬಹುದು. ಏಕೆಂದರೆ ಪ್ರಭಾಸ್ ಈ ವರ್ಷದೊಳಗೆ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪ್ರಭಾಸ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸ್ಪಷ್ಟನೆ ನೀಡಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.