ಬೆಂಗಳೂರು: ಇತ್ತಿಚೇಗೆ ಸಾಲಾಗಿ ಸಾಲಾಗಿ ಪೌರಾಣಿಕ ಸಿನಿಮಾಗಳು ಬರುತ್ತಿವೆ. ರಾಮಾಯಣ ಆಧಾರಿತವಾದ ‘ಆದಿಪುರುಷ ಸಿನಿಮಾ ಬಿಡುಗಡೆಯಾಗಿ ಎಲ್ಲೆಡೆ ಅದೇ ಸಿನಿಮಾ ಸುದ್ದಿಯಲ್ಲಿದೆ.  ಅದರ ಬೆನ್ನಲೇ ಇದೀಗ ‘ಹನುಮಾನ್​’ ಸಿನಿಮಾ ತೆರೆಯ ಮೇಲೆ ಬರಲು ಸಜ್ಜಾಗಿದೆ. 


COMMERCIAL BREAK
SCROLL TO CONTINUE READING

ಮಹಾಭಾರತ, ರಾಮಾಯಣ ಮುಂತಾದ ಕಥೆಗಳನ್ನು ಆಧರಿಸಿ ಹಲವು ಧಾರಾವಾಹಿಗಳು ಆಗಿ ಮೂಡುತ್ತಿದ್ದವು. ಆದರೆ ಕೆಲವು ವರ್ಷಗಳಿಂದ ಸಿನಿಮಾ ಆಗಿ ತೆರೆ ಮೂಡುತ್ತಿವೆ. ಪ್ರಶಾಂತ್​ ವರ್ಮಾ ಅವರು ನಿರ್ದೇಶನದ ‘ಹನುಮಾನ್​’ ಚಿತ್ರ 2022ರ ನವೆಂಬರ್​ ತಿಂಗಳಲ್ಲಿ ಈ ಸಿನಿಮಾದ ಟೀಸರ್​ ಬಿಡುಗಡೆಯಾಗಿತ್ತು.


ಇದನ್ನೂ ಓದಿ: Anand' Movie: ಶಿವಣ್ಣ& ಸುಧಾರಾಣಿ ನಟನೆಯ ʼಆನಂದ್‌ʼ ಚಿತ್ರಕ್ಕೆ 37 ವರ್ಷ ಸಂಭ್ರಮ; ಇಲ್ಲಿವೆ ಅಪರೂಪದ ಫೋಟೋಸ್


ಆದರೆ ಕೆಲವು ಕಾರಣಗಳಿಂದ ಚಿತ್ರ ಬಿಡುಗಡೆಯಾಗಿರಲಿಲ್ಲ. ಈಗಾಗಲೇ ರಾಮಾಯಣ ಆಧಾರಿತವಾಗಿರುವ ‘ಆದಿಪುರುಷ​’ ಸಿನಿಮಾ ಕುರಿತು ಒಂದಷ್ಟು ಟೀಕೆಗಳು ಶುರುವಾಗಿವೆ. ಭಾರಿ ವಿರೋಧ ನಡುವೆಯೂ ಆ ಸಿನಿಮಾ 200ಕ್ಕೂ ಅಧಿಕ ಕೋಟಿ ಗಳಿಸಿದೆ. 


ಇನ್ನು ಚಿತ್ರದಲ್ಲಿ ತೇಜ ಸಜ್ಜಾ  ಹೀರೋ, ಅಮೃತಾ ಅಯ್ಯರ್​, ವರಲಕ್ಷ್ಮಿ ಶರತ್​ಕುಮಾರ್​, ವಿನಯ್ ರೈ, ರಾಜ್​ ದೀಪಕ್​ ಶೆಟ್ಟಿ, ವೆನ್ನೆಲಾ ಕಿಶೋರ್​ ಮುಂತಾದವರು ಕೂಡ ‘ಹನುಮಾನ್​’ ಚಿತ್ರದಲ್ಲಿ ನಟಿಸುತ್ತಿದ್ದಾರೆ.


ಇದನ್ನೂ ಓದಿ: Father's Day: ಫಾದರ್ಸ್ ಡೇ ಗೆ ವಿಭಿನ್ನ ಪೋಸ್ಟ್‌ ಹಂಚಿಕೊಂಡ ನಟಿ ರಾಧಿಕಾ ಪಂಡಿತ್!


ಇದು ಪ್ಯಾನ್​ ಇಂಡಿಯಾ ಸಿನಿಮಾ ಆಗಿದ್ದು ತೆಲುಗು, ತಮಿಳು, ಹಿಂದಿ, ಕನ್ನಡ ಹಾಗೂ ಮಲಯಾಳಂನಲ್ಲಿ ಬಿಡುಗಡೆ ಆಗಲಿದೆ. ಹನುಮಾನ್​’ ಚಿತ್ರ ಆಂಜನೇಯನ ಭಕ್ತರಲ್ಲಿ ಬಹಳಷ್ಟು ನೀರಿಕ್ಷೆ ಮೂಡಿಸಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.