ನವದೆಹಲಿ: ಬಾಲಿವುಡ್ ಖ್ಯಾತ ನಟ ಅನುಪಮ್ ಖೇರ್(Anupam Kher) ಮತ್ತು ಮಿಥುನ್ ಚಕ್ರವರ್ತಿ ಅಭಿನಯದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಬಾಕ್ಸ್ ಆಫೀಸ್‌(The Kashmir Files Box Office Collection)ನಲ್ಲಿ ಅದ್ಭುತಗಳನ್ನು ಸೃಷ್ಟಿಸುತ್ತಿದೆ. ಅನೇಕ ಚಿತ್ರಗಳು ತೆರೆ ಕಾಣಲು ತಯಾರಿ ನಡೆಸುತ್ತಿರುವಾಗಲೇ ಈ ಚಿತ್ರದ ಸ್ಕ್ರೀನ್ ಕೌಂಟ್ ಮತ್ತು ಬಾಕ್ಸ್ ಆಫೀಸ್ ನಲ್ಲಿ ಹಣದ ಮಳೆಯಾಗುತ್ತಿದೆ. 6ನೇ ದಿನವೂ ಗಳಿಕೆಯ ದಾಖಲೆಯನ್ನು ಮುರಿಯುವ ಮೂಲಕ ಚಿತ್ರವು ಅತಿಹೆಚ್ಚು ಹಣ ಕಲೆಕ್ಷನ್ ಮಾಡಿದೆ.  


COMMERCIAL BREAK
SCROLL TO CONTINUE READING

ಬಾಕ್ಸ್ ಆಫೀಸ್‌ ಧೂಳಿಪಟ!


ರಿಲೀಸ್ ಆದ 6ನೇ ದಿನವಾದ ಬುಧವಾರ ಈ ಚಿತ್ರವು ಬಾಕ್ಸ್ ಆಫೀಸ್(Box Office Collection)ನಲ್ಲಿ 19 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇದು ಒಂದೇ ದಿನದಲ್ಲಿ ಈ ಚಿತ್ರದ ಅತಿ ಹೆಚ್ಚು ಗಳಿಕೆಯಾಗಿದೆ. ಏಕೆಂದರೆ ಮಂಗಳವಾರ 18 ಕೋಟಿ ರೂ. ಗಳಿಸಿತ್ತು. ಸದ್ಯದಲ್ಲೇ ಈ ಚಿತ್ರ 100 ಕೋಟಿ ರೂ. ಕ್ಲಬ್ ಸೇರಲಿದೆ.


James Movie Review : ದೇಶಭಕ್ತಿ ಸಾರಿದ 'ಜೇಮ್ಸ್‌'..! ಪವರ್‌ ಸ್ಟಾರ್ ಸಿನಿಮಾ ಹೇಗಿದೆ..?‌


ಸಂತಸ ವ್ಯಕ್ತಪಡಿಸಿದ ಅನುಪಮ್ ಖೇರ್


ಹಿರಿಯ ನಟ ಅನುಪಮ್ ಖೇರ್(Anupam Kher) ಕೂಡ ಈ ಚಿತ್ರದ ಗಳಿಕೆಯ ಅಂಕಿಅಂಶಗಳ ಬಗ್ಗೆ ತುಂಬಾ ಸಂತೋಷಪಟ್ಟಿದ್ದಾರೆ. ಚಿತ್ರದ ಗಳಿಕೆಯ ಬಗ್ಗೆ ಟ್ವೀಟ್ ಮಾಡಿದ್ದು, ಈ ಸಿನಿಮಾದ ಯಶಸ್ಸನ್ನು ಸಿನಿಮಾ ಲೋಕದ ಗೆಲುವು ಎಂದು ಬಣ್ಣಿಸಿದ್ದಾರೆ. ಕೋವಿಡ್ ಅವಧಿಯ ನಂತರ ಚಿತ್ರವೊಂದಕ್ಕೆ ಈ ರೀತಿಯ ಯಶಸ್ಸು ಸಿಕ್ಕಿರುವುದು ಶುಭ ಸೂಚನೆ ಎಂದು ಅವರು ಹೇಳಿದ್ದಾರೆ.   


ಮುಂದುವರಿದ ‘ದಿ ಕಾಶ್ಮೀರ್ ಫೈಲ್ಸ್’ ಗಳಿಕೆಯ ಓಟ!


Taran Adarsh) ಟ್ವೀಟ್ ಮಾಡಿದ್ದು, ‘ದಿ ಕಾಶ್ಮೀರ್ ಫೈಲ್ಸ್’ ದೊಡ್ಡ ಅಲೆ ಸೃಷ್ಟಿಸಿದೆ... ಹಳೆಯ ದಾಖಲೆಗಳನ್ನು ಮುರಿದು ಬಾಕ್ಸ್ ಆಫೀಸ್  ನಲ್ಲಿ ಹೊಸ ದಾಖಲೆ ಬರೆದಿದೆ. ದಿನದಿಂದ ದಿನಕ್ಕೆ ಈ ಚಿತ್ರದ ಗಳಿಕೆಯು ಕಣ್ಣು ತೆರೆಸುವಂತಿವೆ. ಮಾಹಿತಿಯ ಪ್ರಕಾರ ಶುಕ್ರವಾರ 3.55 ಕೋಟಿ ರೂ., ಶನಿವಾರ 8.50 ಕೋಟಿ ರೂ., ಭಾನುವಾರ 15.10 ಕೋಟಿ ರೂ., ಸೋಮವಾರ 15.05 ಕೋಟಿ ರೂ. ಮಂಗಳವಾರ 18 ಕೋಟಿ ರೂ. ಮತ್ತು  ಬುಧವಾರ 19.05 ಕೋಟಿ ರೂ. ಒಟ್ಟು ಗಳಿಕೆ 79.25 ಕೋಟಿ ರೂ.ಗೆ ತಲುಪಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: Jaggesh Birthday:ಅಪ್ಪು ವಿಶ್​ ಮಾಡಿದ್ದ ವಿಡಿಯೋ ಮತ್ತೆ ವೈರಲ್.. ಭಾವುಕರಾದ ನಟ ಜಗ್ಗೇಶ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.