ಬೆಂಗಳೂರು : ಬಿಡುಗಡೆಗೂ ಮೊದಲೇ ವಿವಾದಕೀಡಾಗಿದ್ದ "ದಿ ಕಾಶ್ಮೀರ್ ಫೈಲ್ಸ್" (The Kashmir Files) ಸಿನಿಮಾದಲ್ಲಿ ಮೂವತ್ತು ವರ್ಷವಾದ್ರೂ ತಮ್ಮ ಹಕ್ಕಿಗಾಗಿ ಹೋರಾಡುತ್ತಿರುವ ಕಾಶ್ಮೀರಿ ಪಂಡಿತರು (Kashmiri Pandit)1990ರಲ್ಲಿ ಅನುಭವಿಸಿದ್ದೇನು ಅನ್ನೋದನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ.
ಈ ಸಿನಿಮಾ ಮಾಡಬೇಕು ಎಂದು ನಿರ್ಧಾರ ಮಾಡಿದಾಗಿನಿಂದ ಸಿನಿಮಾ (Cinema) ಚಿತ್ರೀಕರಣ ಮುಗಿಯುವವರೆಗೂ ನಿರ್ದೇಶಕ ಅಗ್ನಿಹೋತ್ರಿಯವರಿಗೆ ಸಾಕಷ್ಟು ಬೆದರಿಕೆ ಕರೆಗಳು ಬಂದ್ರು ಕೂಡ ಯಾವುದಕ್ಕೂ ಎದೆಗುಂದಲಿಲ್ಲ. ಸೆನ್ಸಾರ್ ರ್ಬೋರ್ಡ್‌ನಿಂದ ತುಂಬಾ ದೃಶ್ಯಗಳಿಗೆ ಕತ್ತರಿ ಬಿದ್ದರೂ ಕೂಡ ತಲೆ ಕೆಡಿಸಿಕೊಳ್ಳದೆ ಸಿನಿಮಾವನ್ನ ತೆರೆ ಮೇಲೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈ ಚಿತ್ರದಲ್ಲಿ ಅನಗತ್ಯವಾದ ವಿಷಯಗಳನ್ನಾಗಲಿ, ದೃಶ್ಯಗಳನ್ನಾಗಲಿ ತೋರಿಸಿಲ್ಲ. ಇತಿಹಾಸವಾಗಿರುವ ಕಾಶ್ಮೀರಿ ಪಂಡಿತರ (Kashmir Pandit) ಬದುಕನ್ನ ಅದ್ಭುತವಾಗಿ ತೋರಿಸಲಾಗಿದೆ.
ಇದನ್ನೂ ಓದಿ : Puneeth Rajkumar Birthday: ವಿಶ್ವವಿಖ್ಯಾತ ಹಂಪಿಯಲ್ಲಿ 'ಅಪ್ಪು ಹಬ್ಬ'
"ದಿ ಕಾಶ್ಮೀರ್ ಫೈಲ್ಸ್" (The Kashmir Files) ಸಿನಿಮಾ ಪುಷ್ಕರ್‌ನಾಥ್ ಪಂಡಿತ್ ಎಂಬ ಕಾಶ್ಮೀರಿ ಪಂಡಿತನ ಸುತ್ತ ಸುತ್ತುವ ಕಥೆಯಾಗಿದ್ದು, ಪುಷ್ಕರ್‌ನಾಥ್ ಪಂಡಿತ್ ಪಾತ್ರವನ್ನ ಸ್ವತಃ ಕಾಶ್ಮೀರಿ ಪಂಡಿತ್ ಆಗಿರುವ ನಟ ಅನುಪಮ್ ಖೇರ್ (Anupam Kher) ಮಾಡಿದ್ದಾರೆ. ಪಾತ್ರಕ್ಕೆ ಜೀವ ತುಂಬಿ ನ್ಯಾಯ ಒದಗಿಸಿದ್ದಾರೆ. ಇದು ಅನುಪಮ್ ಖೇರ್ ಅವರ ಕರಿಯರ್ ಬೆಸ್ಟ್ ಸಿನಿಮಾ ಅಂದ್ರೆ ತಪ್ಪಾಗಲ್ಲ. ಈಗಿನ ಮತ್ತು 1990ರಲ್ಲಿ ನಡೆದ ಘಟಾನಾವಳಿಗಳ ಮಧ್ಯೆ ನಡೆದ ಜೀನೋಸೈಡ್ ಕಥೆಯಲ್ಲಿ ಕರಾಳ ದಿನಗಳ ಅರಿವೇ ಇಲ್ಲದೆ ಬೆಳೆದ ಪುಷ್ಕರ್‌ನಾಥ್ ಪಂಡಿತ್ ಮೊಮ್ಮಗ ಕೃಷ್ಣ ಪಂಡಿತ್ ಹೇಗೆ ತನ್ನ ತಂದೆ, ತಾಯಿ ಮತ್ತು ಬಂಧುಗಳು ಪಾಕಿಸ್ತಾನಿ ಉಗ್ರರ (Pakistan Terrorist) ಅಟ್ಟಹಾಸಕ್ಕೆ ಬಲಿಯಾದ್ರು ಎಂದು ತಿಳಿಯುವುದೇ ಸಿನಿಮಾ ಕಥೆ. ಇದರ ಜೊತೆಗೆ 24 ಕಾಶ್ಮೀರಿ ಪಂಡಿತರನ್ನ ಕೊಲ್ಲುವ 2003ರ ನಾಡಿ ಮಾರ್ಗ ಹತ್ಯಾಕಾಂಡವನ್ನ ಮರು ಸೃಷ್ಠಿ ಮಾಡಿದ್ದಾರೆ. ನಮಗೆಲ್ಲರಿಗೂ ಬೇರೆ ದೇಶದಲ್ಲಿ ನಡೆದ ಹಿಟ್ಲರ್ ಜೀನೋಸೈಡ್ ಕುರಿತು ಗೊತ್ತಿದೆ. ಆದ್ರೆ ನಮ್ಮದೇ ದೇಶದ ಕಾಶ್ಮೀರದಲ್ಲಿ ನಡೆದ ನರಮೇಧ ಮತ್ತು ಕಾಶ್ಮೀರಿಗಳ ಬಗ್ಗೆ ಅಷ್ಟು ಡೀಟೈಲ್ ಆಗಿ ಗೊತ್ತಿರಲ್ಲ. ಇದನ್ನ ಎಳೆ ಎಳೆಯಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಅಗ್ನಿಹೋತ್ರಿ.
ಕಾಶ್ಮೀರ ಅಂದ್ರೆ ಜ್ಞಾನದ ಆಗರ. ಭಾರತದ ಸನಾತನ ಧರ್ಮ ಮತ್ತು ಸಂಸ್ಕೃತಿಯ ಭದ್ರ ಬುನಾದಿ ಈ ಕಾಶ್ಮೀರ. ಇಂತಹ ಪೂಣ್ಯ ಭೂಮಿಯನ್ನ ಹಾಳು ಮಾಡಿದರೆ ಈಡೀ ಭಾರತದ ಜ್ಞಾನ ಭಂಡಾರವನ್ನೇ ಹಾಳು ಮಾಡಿದಂತೆ. ಅಂತಲೇ ಕಾಶ್ಮೀರಾದ ಶ್ರೇಷ್ಠತೆಯನ್ನ ಹಾಳುಗೆಡವಲು ಧರ್ಮದ ಹೆಸರಿನಲ್ಲಿ ಶಪಥ ತೊಟ್ಟ ಪಾಕಿಸ್ತಾನದ ಕಣ್ಣಿಗೆ ಬೀಳೊದೇ ಕಾಶ್ಮೀರಿ ಪಂಡಿತರು. ಇದೇ ಕಾರಣಕ್ಕೆ ಕೇವಲ ಹತ್ತರಿಂದ ಹದಿನೈದು ದಿನಗಳ ಅಂತರದಲ್ಲಿ ಕಾಶ್ಮೀರ ಬಿಟ್ಟು ಐದು ಲಕ್ಷ ಮಂದಿ ಓಡಿ ಬಂದರು. ಅವರಲ್ಲಿ ದೊಡ್ಡ ದೊಡ್ಡ ಪಂಡಿತರಿದ್ದರು, ತರ್ಕ ಪ್ರವೀಣರಿದ್ದರು, ತತ್ವ ಶಾಸ್ತ್ರಜ್ಞರಿದ್ದರು, ಕಲೆ ಸಂಸ್ಕೃತಿ ಹೆಸರುಗಳಲ್ಲಿ ಊರಿಗೆ ಹೆಸರಾದವರು ಕೂಡ ಇದ್ರು. ಇನ್ನು ಇವರಿಗೆಲ್ಲಾ ಅವರದ್ದೇ ಆದ ಆಸ್ತಿ-ಪಾಸ್ತಿ, ತೋಟ, ಶಾಲೆ ಇನ್ನೂ ಹಲವು ಕೆಲಸ ಕಾರ್ಯಗಳಿದ್ದವು. ಆದರೆ ಎಲ್ಲವನ್ನ ಬಿಟ್ಟು ಉಟ್ಟ ಬಟ್ಟೆಯಲ್ಲಿ ಕಾಶ್ಮೀರ ತೊರೆಯಬೇಕಾಯಿತು. ಇದೆಲ್ಲಾ ಆದಾಗ ನಮ್ಮ ದೇಶ ಸ್ವತಂತ್ರವಾಗಿತ್ತು, ಸಂವಿಧಾನವಿತ್ತು, ಸುಭದ್ರ ಸರ್ಕಾರವಿತ್ತು. ನ್ಯಾಯಾಂಗ ಮತ್ತು ದೇಶದ ತುಂಬಾ ಸ್ವತಂತ್ರವಾಗಿ ಕೆಲಸ ಮಾಡುವ ಪತ್ರಿಕೆಗಳಿದ್ದವು. ಇನ್ನು ದೇಶದ ಶೇಕಡಾ 98ರಷ್ಟು ಭಾಗಕ್ಕೆ ರೇಡಿಯೋ ಪ್ರಸಾರವಾಗುತ್ತಿತ್ತು. ಎಂದಿನಂತೆ ವಿಶ್ವಸಂಸ್ಥೆ (WHO)ಮತ್ತು ಅಂತಾರಾಷ್ಟ್ರೀಯ ನ್ಯಾಯಾಲಯ ಇದೆಲ್ಲವು ಇತ್ತು. ಇಷ್ಟೆಲ್ಲಾ ಇದ್ರು ಕೂಡ ಕಾಶ್ಮೀರದ ಹಿಂದೂ ಪಂಡಿತರು (Kashmir Hindu Pandit)ಜೀವ ಕೈಯಲ್ಲಿ ಹಿಡಿದುಕೊಂಡು ಯಾಕೆ ಕಾಶ್ಮೀರ ಬಿಟ್ಟು ಓಡಿ ಬರಬೇಕಾಯಿತು ಅಂತ ಚಿತ್ರದಲ್ಲಿ ಬಹಳ ಅಚ್ಚುಕಟ್ಟಾಗಿ ತೋರಿಸಲಾಗಿದೆ.
ಇದನ್ನೂ ಓದಿ : James To Release Tomorrow: ಶಿವಣ್ಣ ಮಾಡಬೇಕಿದ್ದ ಸಿನಿಮಾ ಪವರ್ ಸ್ಟಾರ್ ಮಾಡಿದ್ದು ಏಕೆ ಗೊತ್ತಾ..?
ಹಾಗೇ ಈ ಸಿನಿಮಾದಲ್ಲಿ ತೋರಿಸಿರುವುದು ಕಟ್ಟು ಕಥೆಯಲ್ಲ ಇತಿಹಾಸದ ಪುಸ್ತಕಗಳಲ್ಲಿ ಇದರ ಬಗ್ಗೆ ಸ್ಪಷ್ಟವಾಗಿ ಬರೆದಿರುವ ಉಲ್ಲೇಖವಿದೆ. ಅದು ಯಾವ ಪುಸ್ತಕ, ಎಷ್ಟನೇ ಪುಟ ಎನ್ನುವುದನ್ನು ಚಿತ್ರದಲ್ಲಿ ಹೇಳಲಾಗಿದೆ. ಇನ್ನು ಕೇವಲ ಹಿಂದೂಗಳಷ್ಟೇ ಅಲ್ಲ, ಶೋಷಣೆಗೆ ಒಳಾಗಾದವರು, ಶೋಷಣೆ ಮಾಡಿದವರು ಹೀಗೆ ಎಲ್ಲರೂ ನೋಡಲೇಬೇಕಾದ ಸಿನಿಮಾ ಇದು. ಧರ್ಮದ ಅಮಲು ನತ್ತಿಗೆರಿದರೆ ಏನಾಗುತ್ತದೆ ಅನ್ನೋದನ್ನ ನಿರ್ದೇಶಕ ವಿವೇಕ್ ಅಗ್ನಿಹೊತ್ರಿ ಈ ಚಿತ್ರದಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.