James Movie Review : ದೇಶಭಕ್ತಿ ಸಾರಿದ 'ಜೇಮ್ಸ್‌'..! ಪವರ್‌ ಸ್ಟಾರ್ ಸಿನಿಮಾ ಹೇಗಿದೆ..?‌

'ಜೇಮ್ಸ್‌'‌ ಸಿನಿಮಾ ಸಾಕಷ್ಟು ವಿಶೇಷತೆಗಳ ಜೊತೆಗೆ ಜಗತ್ತಿನಾದ್ಯಂತ ರಿಲೀಸ್‌ ಆಗಿದೆ. ಹಾಗಾದ್ರೆ ಸಿನಿಮಾ ನೋಡಿದ ಪ್ರೇಕ್ಷಕರು ಹೇಳಿದ್ದೇನು..? 'ಜೇಮ್ಸ್‌'‌ ಮೇಕಿಂಗ್‌ ಹೇಗಿದೆ..? ಅನ್ನೋದರ ಕಂಪ್ಲೀಟ್‌ ಡೀಟೇಲ್ಸ್‌ ಇಲ್ಲಿದೆ.

Written by - Malathesha M | Last Updated : Mar 17, 2022, 03:18 PM IST
  • 'ಜೇಮ್ಸ್‌'‌ ಕನ್ನಡಿಗರ ಹೆಮ್ಮೆ ಎನ್ನಬಹುದು
  • ಸಿನಿಮಾ ನೋಡಿದ ಪ್ರೇಕ್ಷಕರು ಹೇಳಿದ್ದೇನು..?
  • ಶಿವಣ್ಣನ ಅಬ್ಬರ!
James Movie Review : ದೇಶಭಕ್ತಿ ಸಾರಿದ 'ಜೇಮ್ಸ್‌'..! ಪವರ್‌ ಸ್ಟಾರ್ ಸಿನಿಮಾ ಹೇಗಿದೆ..?‌ title=

ಬೆಂಗಳೂರು : 'ಜೇಮ್ಸ್‌'‌ ಕೇವಲ ಸಿನಿಮಾ ಮಾತ್ರವಲ್ಲ, 'ಜೇಮ್ಸ್‌'‌ ಕನ್ನಡಿಗರ ಹೆಮ್ಮೆ ಎನ್ನಬಹುದು. ಯಾಕಂದ್ರೆ 'ಜೇಮ್ಸ್‌'‌ ಸಿನಿಮಾ ಸಾಕಷ್ಟು ವಿಶೇಷತೆಗಳ ಜೊತೆಗೆ ಜಗತ್ತಿನಾದ್ಯಂತ ರಿಲೀಸ್‌ ಆಗಿದೆ. ಹಾಗಾದ್ರೆ ಸಿನಿಮಾ ನೋಡಿದ ಪ್ರೇಕ್ಷಕರು ಹೇಳಿದ್ದೇನು..? 'ಜೇಮ್ಸ್‌'‌ ಮೇಕಿಂಗ್‌ ಹೇಗಿದೆ..? ಅನ್ನೋದರ ಕಂಪ್ಲೀಟ್‌ ಡೀಟೇಲ್ಸ್‌ ಇಲ್ಲಿದೆ.

ದೇಶ ಕಾಯುವ ಯೋಧನೊಬ್ಬನ ಸುತ್ತಲೂ ಸುತ್ತುವ ಕಥೆಗೆ ಅಪ್ಪು ಹೀರೋ. ಹೀಗೆ ಕೊನೆಯ ಸಿನಿಮಾದಲ್ಲಿ ಸೈನಿಕನಾಗಿ ಎಂಟ್ರಿ ಕೊಡುವ ಪವರ್‌ ಸ್ಟಾರ್‌ ಡಾ. ಪುನೀತ್‌ ರಾಜ್‌ಕುಮಾರ್‌(Dr.Puneeth Rajkumar) ಎಲ್ಲೆಲ್ಲೂ ಸಂಚಲನ ಸೃಷ್ಟಿಸುತ್ತಾರೆ. ಒಂದು ಕಡೆ ಡ್ರಗ್ಸ್‌ ದಂಧೆಯ ಕುರಿತು ಸಾಮಾಜಿಕ ಸಂದೇಶ ಸಾರಿದ್ದರೆ, ಮತ್ತೊಂದು ಕಡೆ ಕೌಟುಂಬಿಕ ಪ್ರಧಾನ ಕಥೆಯಾಗಿಯೂ 'ಜೇಮ್ಸ್‌'‌ ಬ್ಲಾಕ್‌ ಬಸ್ಟರ್‌ ಹಿಟ್‌ ಆಗಿದೆ. ಈ ಮೂಲಕ ಹೊಸದೊಂದು ದಾಖಲೆ ಸೃಷ್ಟಿಮಾಡಿದೆ 'ಜೇಮ್ಸ್‌'‌ ಚಿತ್ರ.

ಇದನ್ನೂ ಓದಿ : James: ದೊಡ್ಮನೆ ಕುಟುಂಬದಿಂದ ಹಲವು ಕಾರ್ಯ: "ಜೇಮ್ಸ್" ಸಿನಿಮಾ ಅಲ್ಲ, ಎಮೋಷನ್‌ ಎಂದ ರಾಘಣ್ಣ

ಶಿವಣ್ಣನ ಅಬ್ಬರ!

ಮುಖ್ಯವಾಗಿ ನಟ ಶಿವಣ್ಣ(Shiva Rajkumar) ಹಾಗೂ ರಾಘಣ್ಣ ಕೂಡ 'ಜೇಮ್ಸ್‌'‌ ಸಿನಿಮಾದಲ್ಲಿ ನಟಿಸುವ ಮೂಲಕ, ದೊಡ್ಮನೆಯ ಕನಸು ನನಸಾಗಿದೆ. 'ಜೇಮ್ಸ್‌'‌ ಚಿತ್ರದಲ್ಲಿ ದೊಡ್ಡಣ್ಣನಾಗಿ ಎಂಟ್ರಿ ಕೊಡುವ ನಟ ಶಿವಣ್ಣ ಅಭಿಮಾನಿಗಳ ಎದೆಯಲ್ಲಿ ಅಭಿಮಾನದ ಹೊಳೆಯನ್ನೇ ಹರಿಸುತ್ತಾರೆ. ನಟ ಶಿವಣ್ಣ ಸ್ಕ್ರೀನ್‌ಗೆ ಎಂಟ್ರಿ ಕೊಡುತ್ತಿದ್ದಂತೆ ಅಭಿಮಾನಿಗಳ ಘೋಷಣೆ ಮುಗಿಲು ಮುಟ್ಟಿರುತ್ತದೆ.

ಪ್ರತಿ ಹಂತದಲ್ಲೂ ಅಪ್ಪು ಸ್ಕ್ರೀನ್‌ ಮೇಲೆ ಬಂದಾಗ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಗೌರವ ಸಲ್ಲಿಸುತ್ತಾರೆ. ಪ್ರತಿಯೊಂದು ಥಿಯೇಟರ್‌ನಲ್ಲೂ 'ಜೇಮ್ಸ್‌'‌ ಸಿನಿಮಾ(James Movie) ಆರಂಭದಿಂದ ಹಿಡಿದು, ಸಿನಿಮಾ ಕ್ಲೈಮ್ಯಾಕ್ಸ್‌ ತನಕ ಅಭಿಮಾನಿಗಳು ಸಂಭ್ರಮಿಸುತ್ತಾರೆ. ಅದರಲ್ಲೂ ಅದ್ಭುತ ಎನಿಸುವ ಫೈಟ್‌ ಸೀನ್‌ಗಳು ಹಾಗೂ ಅಪ್ಪು ಡಾನ್ಸ್‌ ಸಿನಿಮಾಗೆ ದೊಡ್ಡ ಮೆರಗು ನೀಡುತ್ತದೆ. ಫಸ್ಟ್‌ ಡೇ ಫಸ್ಟ್‌ ಶೋ ನೋಡಿದ ಅಭಿಮಾನಿಗಳುಯ ಅಪ್ಪು ಕೊನೆಯ ಸಿನಿಮಾ ಬಗ್ಗೆ ಎದೆಯುಬ್ಬಿಸಿ ಮಾತನಾಡಿದರು. ಕನ್ನಡಿಗರ ಸಿನಿಮಾ ಈ ರೀತಿ ಜಗತ್ತಿನಾದ್ಯಂತ ಸದ್ದು ಮಾಡುತ್ತಿರುವುದು ಮತ್ತಷ್ಟು ಸಂಭ್ರಮಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ 'ಜೇಮ್ಸ್' ನಾಯಕಿ ಪ್ರಿಯಾ ಆನಂದ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News