ʼದಿ ಕೇರಳ ಸ್ಟೋರಿʼ ನಟಿ ಹೊಟ್ಟೆಗೆ ಶಸ್ತ್ರ ಚಿಕಿತ್ಸೆ..! ಆಗಿದ್ದೇನು ಗೊತ್ತಾ..?
The Kerala Story Yogita Bihani : ಯೋಗಿತಾ ಬಿಹಾನಿ ದಿ ಕೇರಳ ಸ್ಟೋರಿ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಈಕೆ ವಿಕ್ರಮ್ ವೇದಾ ಚಿತ್ರದಲ್ಲಿ ಚಂದಾ ಪಾತ್ರದಲ್ಲಿ ಕಾಣಿಸಿಕೊಂಡು ಸಿನಿ ಪ್ರೇಕ್ಷಕರ ಮನ ಗೆದ್ದಿದ್ದರು. ಸದ್ಯ ಯೋಗಿತಾ ತನ್ನ ಹೊಟ್ಟೆಯ ಮೇಲಿರುವ ಗಾಯದ ಗುರುತಿನ ಕುರಿತ ಕಥೆ ಹಂಚಿಕೊಂಡಿದ್ದಾರೆ.
Yogita Bihani : ಯೋಗಿತಾ ಬಿಹಾನಿ ಬಾಲಿವುಡ್‌ನ ಅತ್ಯಂತ ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ಇತ್ತೀಚೆಗೆ ಯೋಗಿತಾ ದಿ ಕೇರಳ ಸ್ಟೋರಿಯಲ್ಲಿ ಕಾಣಿಸಿಕೊಂಡಿದ್ದರು. ಕೇವಲ ಒಂದೆರಡು ವರ್ಷಗಳ ಹಿಂದೆ ಸಿನಿರಂಗಕ್ಕೆ ಕಾಲಿಟ್ಟರೂ ಸಹ ತಮ್ಮ ನಟನಾ ಕೌಶಲ್ಯದ ಮೂಲಕ ಟಾಪ್ ನಟಿಯಾಗಿ ಹೊರಹೊಮ್ಮಿದ್ದಾರೆ.
ನಟನೆಯಷ್ಟೇ ಅಲ್ಲ ಯೋಗಿತಾ ಬಿಹಾನಿ ಫ್ಯಾಷನಿಸ್ಟ್ ಸಹ ಆಗಿದ್ದಾರೆ. ಈ ಕುರಿತು ನೀವು ತಿಳಿಯಬೇಕು ಅಂದ್ರೆ ಅವರ ಇನ್‌ಸ್ಟಾಗ್ರಾಮ್ ಅಕೌಂಟ್‌ಗೆ ಭೇಟಿ ನೀಡಬೇಕು. ಅಲ್ಲಿ ನೀವು ಸುಂದರಿಯ ಹಲವಾರು ಸುಂದರವಾದ ಪೋಸ್ಟ್‌ಗಳನ್ನು ಕಾಣಬಹುದು. ಆಗಾಗ ಫೋಟೋಶೂಟ್ ಮಾಡಿಸುವ ಬೆಡಗಿ ಫ್ಯಾನ್ಸ್‌ಗಳಿಗಾಗಿ ಚಿತ್ರಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.
ಇದನ್ನೂ ಓದಿ: "ರೇವ್ ಪಾರ್ಟಿ" ಚಿತ್ರೀಕರಣ ಮುಕ್ತಾಯ; ಆಗಸ್ಟ್ ನಲ್ಲಿ ಬಿಡುಗಡೆ
ಇತ್ತೀಚೆಗೆ ಯೋಗಿತಾ ತನ್ನ ಜೀವನದಲ್ಲಿ ನಡೆದ ಘಟನೆಯೊಂದರ ಕುರಿತು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಯೋಗಿತಾ ತನ್ನ ಹೊಟ್ಟೆಯ ಮೇಲಿನ ಗಾಯದ ಹಿಂದಿನ ಕಥೆಯನ್ನು ಹೇಳಿದ್ದಾರೆ. ಸುಮಾರು 8 ವರ್ಷಗಳ ಹಿಂದೆ ಜಠರಗರುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಗಿ ತಿಳಿಸಿದ್ದಾರೆ.
ಅಲ್ಲದೆ ಸರಿಯಾಗಿ ಸೊಂಟದ ಮೇಲೆ ಗಾಯವಾದ ಹಿನ್ನೆಲೆ ಸೌಂದರ್ಯ ಅಪೂರ್ಣವಾಯಿತು ಎನ್ನುವ ಮಾತನ್ನು ನಟಿ ತಿರಸ್ಕರಿಸುತ್ತಾರೆ. ಅಲ್ಲದೆ, ಆ ಗಾಯವು ತಮ್ಮನ್ನು ಇನ್ನೂ ಬಲಶಾಲಿಯಾಗಿ, ಹೋರಾಟಗಾರಳನ್ನಾಗಿ ಮಾಡಿತು ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಅಭಿ-ಅವಿವಾ ಜೋಡಿಗೆ ಚಾಲೆಂಜಿಂಗ್ ಸ್ಟಾರ್ ಕೊಟ್ಟ ಗಿಫ್ಟ್ ಏನು ಗೊತ್ತಾ..?
ಯೋಗಿತಾ ಬಿಹಾನಿ ಇತ್ತೀಚೆಗೆ ಕೇರಳ ಸ್ಟೋರಿಯಲ್ಲಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ 200 ಕೋಟಿಗೂ ಹೆಚ್ಚು ಕಲೇಕ್ಷನ್ ಮಾಡಿದೆ. ಈ ಸಿನಿಮಾದಲ್ಲಿ ಅದಾ ಶರ್ಮಾ, ಸಿದ್ಧಿ ಇದ್ನಾನಿ ಮತ್ತು ಸೋನಿಯಾ ಬಾಲಾನಿ ನಟಿಸಿದ್ದಾರೆ. ನಿಮಾ ಮ್ಯಾಥ್ಯೂಸ್ ಪಾತ್ರದಲ್ಲಿ ಯೋಗಿತಾ ಅಭಿನಯಿಸಿದ್ದಾರೆ.
ಯೋಗಿತಾ ಬಿಹಾನಿ ಅನಿಲ್ ಕಪೂರ್ ಮತ್ತು ಅನುರಾಗ್ ಕಶ್ಯಪ್ ಅಭಿನಯದ ಎಕೆ ವರ್ಸಸ್ ಎಕೆ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಟ ಹೃತಿಕ್ ರೋಷನ್ ಮತ್ತು ಸೈಫ್ ಅಲಿ ಖಾನ್ ನಟನೆಯ ವಿಕ್ರಮ್ ವೇದಾ ಸಿನಿಮಾದಲ್ಲೂ ಬಿಹಾನಿ ಕಾಣಿಸಿಕೊಂಡಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.