ಅಭಿ-ಅವಿವಾ ಜೋಡಿಗೆ ಚಾಲೆಂಜಿಂಗ್‌ ಸ್ಟಾರ್‌ ಕೊಟ್ಟ ಗಿಫ್ಟ್‌ ಏನು ಗೊತ್ತಾ..?

Challenging Star Darshan : ರೆಬೆಲ್‌ಸ್ಟಾರ್‌ ಅಂಬರೀಶ್‌ ಕುಟುಂಬಕ್ಕೆ ಚಾಲೆಂಜಿಂಗ್‌ ಸ್ಟಾರ್‌ ದರ್ಶಬನ್‌ ಬಹಳ ಹತ್ತಿರವಾದವರು. ಅಂಬರೀಶ್‌ ಅವರು ಇದ್ದಾಗಿನಿಂದಲೂ ರೆಬೆಲ್‌ ಕುಟುಂಬದೊಂದಿಗೆ ಹೆಚ್ಚು ಆತ್ಮೀಯವಾಗಿದ್ದವರು ದರ್ಶನ್‌. ಈ ಮಾತನ್ನು ಅವರೇ ಸಾಕಷ್ಟು ಸಲ ಹೇಳಿಕೊಂಡಿದ್ದಾರೆ.   

Written by - Savita M B | Last Updated : Jun 10, 2023, 08:46 AM IST
  • ಅಭಿಷೇಕ್‌ ಅಂಬರೀಶ್‌ ಅವರು ಅವಿವಾ ಬಿದ್ದಪ್ಪ ಅವರ ಜೊತೆ ಸಪ್ತಪದಿ ತುಳಿದರು.
  • ಈ ಶುಭಕಾರ್ಯಕ್ಕೆ ದರ್ಶನ್‌ ಆಗಮಿಸಿ ನವದಂಪತಿಗಳಿಗೆ ಶುಭ ಹಾರೈಸಿದರು.
  • ಮದುವೆಗೆ ಆಗಮಿಸಿದ ಅವರು ಹೊಸ ಜೋಡಿಗೆ ಯಾವ ಗಿಫ್ಟ್‌ ನೀಡಿದ್ದಾರೆ? ಇಲ್ಲಿದೆ ನೋಡಿ
ಅಭಿ-ಅವಿವಾ ಜೋಡಿಗೆ ಚಾಲೆಂಜಿಂಗ್‌ ಸ್ಟಾರ್‌ ಕೊಟ್ಟ ಗಿಫ್ಟ್‌ ಏನು ಗೊತ್ತಾ..? title=

Abhishek Ambareesh Marriage : ಅಭಿಷೇಕ್‌ ಅಂಬರೀಶ್‌ ಅವರು ಅವಿವಾ ಬಿದ್ದಪ್ಪ ಅವರ ಜೊತೆ ಸಪ್ತಪದಿ ತುಳಿದರು. ಈ ಶುಭಕಾರ್ಯಕ್ಕೆ ದರ್ಶನ್‌ ಆಗಮಿಸಿ ನವದಂಪತಿಗಳಿಗೆ ಶುಭ ಹಾರೈಸಿದರು. ಮದುವೆಗೆ ಆಗಮಿಸಿದ ಅವರು ಹೊಸ ಜೋಡಿಗೆ ಯಾವ ಗಿಫ್ಟ್‌ ನೀಡಿದ್ದಾರೆ ಅನ್ನೋದು ಯಾರಿಗೂ ತಿಳಿದಿಲ್ಲ. ಹಾಗಾದರೆ ಆ ಗಿಫ್ಟ್‌ ಏನು? ಅದರ ಬೆಲೆ ಏನು ಅನ್ನೊ ಮಾಹಿತಿ ಇಲ್ಲಿದೆ ನೋಡಿ.

ಅಭಿಷೇಕ್‌ ಅಂಬರೀಶ್‌ ಅವರ ಮದುವೆ ಸಮಾರಂಭದಂದು ದರ್ಶನ್‌ ಬರಲು ಸಾಧ್ಯವಾಗಿರಲಿಲ್ಲ. ಆದರೆ ಅವರ ಪತ್ನಿ ಅವರು ಹಾಜರಿದ್ದರು. ಜೂನ್‌ 7ರಂದು ನಡೆದ ಆರತಕ್ಷತೆಗೆ  ಚಾಲೆಂಜಿಂಗ್‌ ಸ್ಟಾರ್‌ ಗ್ರ್ಯಾಂಡ್‌ ಎಂಟ್ರಿ ನೀಡಿದ್ದರು. 

ಇದನ್ನೂ ಓದಿ-ತಮಿಳು ನಟ ಜಯಂರವಿ ಹೊಸ ಸಿನಿಮಾ ಅನೌನ್ಸ್...'ಇರೈವನ್'ಗೆ ಲೇಡಿ ಸೂಪರ್ ಸ್ಟಾರ್ ನಯನ್ ತಾರಾ ನಾಯಕಿ

ವೇದಿಕೆಗೆ ಹೋಗಿ ಅಭಿಷೇಕ್‌ ಅಂಬರೀಶ್‌ ಹಾಗೂ ಅವಿವಾ ಅವರಿಗೆ ಶುಭ ಕೋರಿ, ಪೋಟೋಗೆ ಪೋಸ್‌ ಕೊಟ್ಟು, ಸುಮಲತಾ ಹಾಗೂ ಅಭಿಷೇಕ್‌ ಅಂಬರೀಶ್‌ ಅವರ ಕೆನ್ನೆ ಮುಟ್ಟಿ ಸಂತೋಷವನ್ನು ವ್ಯಕ್ತಪಡಿಸಿದ್ದರು. ಇದೇ ವೇಳೆ ನವ ಜೋಡಿಗೆ ಉಡುಗೊರೆಯನ್ನು ನೀಡಿದ್ದರು. 

ಅಭಿಷೇಕ್‌ ಹಾಗೂ ಅವಿವಾ ರಿಸೆಪ್ಷನ್‌ಗೆ ಆಗಮಿಸಿದ ದರ್ಶನ್‌ ನವಜೋಡಿಗೆ ದುಬಾರಿ ಗಿಫ್ಟ್‌ವೊಂದನ್ನು ನೀಡಿದ್ದಾರೆ. ಅದರಲ್ಲೂ ರೆಬೆಲ್‌ ಸ್ಟಾರ್‌ ಮನೆಗೆ ಸೊಸೆಯಾಗಿ ಬಂದಿರೋ ಅವಿವಾ ಅವರಿಗೆ ದುಬಾರಿ ಬೆಲೆಯ ಡೈಮಂಡ್‌ ನೆಕ್ಲೆಸ್‌ನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಕೆಲವು ಮೂಲಗಳು ತಿಳಿಸಿವೆ. ಅಭಿಷೇಕ್‌ ಅವಿವಾ ಕಪಲ್‌ಗೆ ಡಿ ಬಾಸ್‌ ಕೊಟ್ಟಿರೋ ಗಿಫ್ಟ್‌ನಲ್ಲಿ ಬಿಳಿ ಹಾಗೂ ಗುಲಾಬಿ ಬಣ್ಣದ ಡೈಮಂಡ್‌ ಇದೆ ಎನ್ನಲಾಗುತ್ತಿದೆ. ರೆಬೆಲ್‌ ಸೊಸೆಗಂತಲೇ ದರ್ಶನ್‌ ಈ ದುಬಾರಿ ಗಿಫ್ಟ್‌ ನೀಡಿದ್ದಾರೆ ಎನ್ನಲಾಗಿದೆ.

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಆ ದುಬಾರಿ ಗಿಫ್ಟ್‌ ಬೆಲೆ ಎಷ್ಟು ಅಂತ ಯೋಚನೆ ಮಾಡ್ತಾ ಇದ್ದೀರಾ? ಬರೋಬ್ಬರಿ 30 ಲಕ್ಷದಿಂದ 40 ಲಕ್ಷ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ. ಇದು ಅಂಬಿ ಕುಟುಂಬದ ಆಪ್ತರಿಂದ ದೊರಕಿದ ಮಾಹಿತಿ. ಈ ಬಗ್ಗೆ ಯಾರೀ ಹೇಳಿಕೆಯನ್ನು ನೀಡಿಲ್ಲ. 

ಇದನ್ನೂ ಓದಿ-Photo Gallery: ಹಾಡುಗಳ ಮೂಲಕ ಕಲಾರಸಿಕರ ಮನ ಗೆದ್ದ "ರೋಡ್ ಕಿಂಗ್"

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News