ನವದೆಹಲಿ : ಈ ಸಮಯದಲ್ಲಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ (Katrina vicky wedding)  ಮದುವೆಯ ಸುದ್ದಿ ಬಾಲಿವುಡ್‌ನಲ್ಲಿ ಬಹಳ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮದ ಸುದ್ದಿಗಳ ಪ್ರಕಾರ, ಈ ಜೋಡಿಯ ಮದುವೆಯ ದಿನಾಂಕ ಹೊರ ಬಿದ್ದಿದೆ.  


COMMERCIAL BREAK
SCROLL TO CONTINUE READING

ಮದುವೆಗೆ ಹೊಸ ದಿನಾಂಕ :
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆ  (Katrina vicky wedding) ಯಾವಾಗ ನಡೆಯಲಿದೆ ಎನ್ನುವುದು ಬಯಲಾಗಿದೆ. ವರದಿಯ ಪ್ರಕಾರ ವಿಕ್ಕಿ ಮತ್ತು ಕತ್ರಿನಾ ಡಿಸೆಂಬರ್ 9 ರಂದು ರಾಜಸ್ಥಾನದ ಸವಾಯಿ ಮಾಧೋಪುರದ ರೆಸಾರ್ಟ್ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ವಿವಾಹವಾಗಲಿದ್ದಾರೆ. 


ಇದನ್ನೂ ಓದಿ : Anil Kapoor Unwell?: ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾರೆಯೇ Anil Kapoor? ಜರ್ಮನಿಯಿಂದ ಹಂಚಿಕೊಂಡ ವಿಡಿಯೋದಲ್ಲಿ ಹೇಳಿದ್ದೇನು?


ಸುದ್ದಿಯನ್ನು ನಿರಾಕರಿಸಿದ್ದ ವಿಕ್ಕಿ ಸಹೋದರಿ : 
ಆದರೆ, ವಿಕ್ಕಿಯ ಸಹೋದರಿ ಕತ್ರಿನಾ (Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal) ವಿವಾಹ ನಡೆಯುತ್ತಿಲ್ಲ ಎಂದು ಹೇಳಿಕೆ ನೀಡಿದ್ದರು. ವಿಕ್ಕಿ ಕೌಶಲ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಇವರಿಬ್ಬರ ಮದುವೆಯ  ಹೋದ ದಿನಾಂಕ (Katrina Kaif And Vicky Kaushal wedding date) ಕೂಡಾ ಬಹಿರಂಗವಾಗಿದೆ. ಮೂಲಗಳ ವರದಿಗಳ ಪ್ರಕಾರ, ಇಬ್ಬರೂ ಹಿಂದೂ ಸಂಪ್ರದಾಯದಂತೆ ವಿವಾಹವಾಗಲಿದ್ದು, ಕುಟುಂಬ ಸದಸ್ಯರು ಮತ್ತು ನಿಕಟವರ್ತಿಗಳು ಮಾತ್ರ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಆದರೆ, ಈ ಮದುವೆಗೆ ಸಂಬಂಧಿಸಿದಂತೆ ಇಬ್ಬರ ಕುಟುಂಬ ವರ್ಗದಿಂದ ಯಾವುದೇ ಹೇಳಿಕೆ ಬಂದಿಲ್ಲ. ಅಲ್ಲದೆ ಕತ್ರಿನಾ ಅಥವಾ ವಿಕ್ಕಿ ಕೂಡಾ ಮದುವೆಯ ಬಗ್ಗೆ ಇಲ್ಲಿವರೆಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ. 


ಪಾಲ್ಗೊಳ್ಳಲಿದ್ದಾರೆ 200 ಅತಿಥಿಗಳು  :
ವರದಿಯ ಪ್ರಕಾರ, ವಿಕ್ಕಿ ಮತ್ತು ಕತ್ರಿನಾ ಸವಾಯಿ ಮಾಧೋಪುರದ ರೆಸಾರ್ಟ್‌ನಲ್ಲಿರುವ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ಸಪ್ತಪದಿ ತುಳಿಯಲಿದ್ದಾರೆ.  ಕತ್ರಿನಾ ಕೈಫ್ ಅವರ ಆಪ್ತ ಮೂಲಗಳು ಹೇಳುವಂತೆ ಲವ್ ಬರ್ಡ್ಸ್ ಹಿಂದೂ ಸಂಪ್ರದಾಯದಂತೆ ಮದುವೆಯಾಗಲಿದ್ದಾರೆ. ಡಿಸೆಂಬರ್ 7, 8 ರಂದು ಕ್ರಮವಾಗಿ ಸಂಗೀತ ಮತ್ತು ಮೆಹಂದಿ ಕಾರ್ಯಕ್ರಮಗಳು ನಡೆಯಲಿವೆ. ಕತ್ರಿನಾ ಮತ್ತು ವಿಕ್ಕಿ ಮದುವೆಗೆ ಬರುವ ಎಲ್ಲಾ ಅತಿಥಿಗಳ ವಸತಿಗಾಗಿ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಮಾಡುವೆ ಸಮಾರಂಭದಲ್ಲಿ ಸುಮಾರು 200 ಮಂದಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. 


ಇದನ್ನೂ ಓದಿ : '83' ಸಿನೆಮಾ ಬಿಡುಗಡೆ ದಿನಾಂಕ ಘೋಷಿಸಿದ ಚಿತ್ರ ತಂಡ, ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆ ಹೆಚ್ಚಿಸಿದ ಟೀಸರ್​


ಮದುವೆಯ ದಿನದಂದು, ವಧು ಮತ್ತು ವರರು ಪ್ರಸಿದ್ಧ ವಿನ್ಯಾಸಕಾರ ಸಬ್ಯಸಾಚಿ ಮುಖರ್ಜಿ ಅವರ ಡಿಸೈನರ್ ಡ್ರೆಸ್‌ ಅನ್ನು ಧರಿಸಲಿದ್ದಾರೆ. ಕತ್ರಿನಾ ತಮ್ಮ ಸಂಗೀತ ಸಮಾರಂಭದಲ್ಲಿ ಮನೀಶ್ ಮಲ್ಹೋತ್ರಾ  ವಿನ್ಯಾಸಗೊಳಿಸಿದ ಉಡುಪಿನಲ್ಲಿ ಕಂಗೊಳಿಸಲಿದ್ದಾರೆ. ಬಾಲಿವುಡ್ ಲೈಫ್ ವರದಿ ಪ್ರಕಾರ, ಕತ್ರಿನಾ ಮತ್ತು ವಿಕ್ಕಿ ಕೌಶಲ್ ರಾಜಸ್ಥಾನದಲ್ಲಿ ಮದುವೆಯ ವಿಧಿ ವಿಧಾನಗಳ ಮೊದಲು ಮುಂಬೈನಲ್ಲಿ ಮದುವೆಯಾಗಲಿದ್ದಾರೆ. ಮುಂದಿನ ವಾರ ಮುಂಬೈನಲ್ಲಿ ವಿಕ್ಕಿ ಮತ್ತು ಕತ್ರಿನಾ ಕೋರ್ಟ್ ಮ್ಯಾರೇಜ್ (Court marriage) ಮಾಡಲಿದ್ದಾರೆ ಎಂದು ನಟಿಯ ಆಪ್ತ ಮೂಲಗಳು ತಿಳಿಸಿವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.