'83' ಸಿನೆಮಾ ಬಿಡುಗಡೆ ದಿನಾಂಕ ಘೋಷಿಸಿದ ಚಿತ್ರ ತಂಡ, ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆ ಹೆಚ್ಚಿಸಿದ ಟೀಸರ್​

'83' ಸಿನಿಮಾದ ಅಧಿಕೃತ ಟೀಸರ್ ಇಂದು ಬಿಡುಗಡೆಯಾಗಿದೆ. ನವೆಂಬರ್​ 30 ರಂದು ಟ್ರೇಲರ್​ ಬಿಡುಗಡೆ ಆಗಲಿದ್ದು, ಟೀಸರ್ ಮೂಲಕ  ರಿಲೀಸ್ ದಿನಾಂಕವನ್ನು ಹೇಳಲಾಗಿದೆ.   

Written by - Zee Kannada News Desk | Last Updated : Nov 26, 2021, 04:02 PM IST
  • '83' ಸಿನಿಮಾ ಅಧಿಕೃತ ಟೀಸರ್ ಅನಾವರಣ
  • ಕುತೂಹಲ ಹೆಚ್ಚಿಸಿದ ಚಿತ್ರ '83'
  • ಐದು ಭಾಷೆಗಳಲ್ಲಿ ತೆರೆ ಕಾಣಲಿರುವ ಚಿತ್ರ
'83' ಸಿನೆಮಾ ಬಿಡುಗಡೆ ದಿನಾಂಕ ಘೋಷಿಸಿದ ಚಿತ್ರ ತಂಡ, ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆ ಹೆಚ್ಚಿಸಿದ ಟೀಸರ್​ title=
'83' ಸಿನಿಮಾ ಅಧಿಕೃತ ಟೀಸರ್ ಅನಾವರಣ (file photo)

ಮುಂಬೈ : '83' ಸಿನಿಮಾ ನಿರ್ಮಾಪಕರು ಅಂತಿಮವಾಗಿ ಚಿತ್ರದ ಮೊದಲ ಅಧಿಕೃತ ಟೀಸರ್ ಅನ್ನು ಅನಾವರಣಗೊಳಿಸಿದ್ದಾರೆ. '83' ಸಿನಿಮಾವು ಭಾರತದ ಐತಿಹಾಸಿಕ 1983 ಕ್ರಿಕೆಟ್ ವಿಶ್ವಕಪ್ ಗೆಲುವಿನ ಸುತ್ತ ಸುತ್ತುತ್ತದೆ. ಈ ಚಿತ್ರದಲ್ಲಿ ರಣವೀರ್ ಸಿಂಗ್ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ಕುರಿತು ಹೇಳುವುದಾದರೆ,  (83 Movie Teaser)​ ಭಾರತವು ವೆಸ್ಟ್ ಇಂಡೀಸ್ ಅನ್ನು ಸೋಲಿಸಿದ ಲಾರ್ಡ್ಸ್‌ನಲ್ಲಿ ನಡೆದ ಐತಿಹಾಸಿಕ ಪಂದ್ಯದ ಕ್ಷಣದ ಮರುಸೃಷ್ಟಿಯಾಗಿದೆ. 

ಈ ಸಿನಿಮಾಗಾಗಿ ಕ್ರಿಕೆಟ್​ ಪ್ರೇಮಿಗಳು ಮತ್ತು ಸಿನಿಪ್ರಿಯರು ಬಹಳ ತಿಂಗಳುಗಳಿಂದ ಕಾದಿದ್ದರು. ಆದರೆ ಕೊರೊನಾ ವೈರಸ್​ (Coronavirus) ಹಾವಳಿಯಿಂದಾಗಿ ಪದೇ ಪದೇ ರಿಲೀಸ್​ ದಿನಾಂಕ ಮುಂದೂಡಲ್ಪಡುತ್ತಿತ್ತು.  ಈಗ ಅಂತಿಮವಾಗಿ '83' ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ರಿಲೀಸ್ ದಿನಾಂಕ (83 Movie release date) ಘೋಷಿಸಿದೆ. 

 
 
 
 

 
 
 
 
 
 
 
 
 
 
 

A post shared by Ranveer Singh (@ranveersingh)

 

ಇದನ್ನೂ ಓದಿ : Priyanka Chopra: ಪತಿ ನಿಕ್ ಜೊತೆ ಮೋಹಕ ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ

ಖ್ಯಾತ ನಿರ್ದೇಶಕ ಕಬೀರ್​ ಖಾನ್​ ನಿರ್ದೇಶನದ ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ (Deepika Padukone) ಕಪಿಲ್​ ದೇವ್​  ಪತ್ನಿ ರೋಮಿ ಭಾಟಿಯಾ ಪಾತ್ರದಲ್ಲಿ ನಟಿಸಿದ್ದಾರೆ. ತಿಹಾರ್​ ರಾಜ್​ ಭಾಸಿನ್​, ಸಾಖಿಬ್​ ಸಲೀಮ್​, ಅಮೃತಾ ಪುರಿ, ಪಂಕಜ್​ ತ್ರಿಪಾಠಿ, ಚಿರಾಗ್​ ಪಾಟಿಲ್​, ಸಾಹಿಲ್​ ಕಟ್ಟರ್​ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. 

ಈ  ಬಗ್ಗೆ ಪೋಸ್ಟ್ ಮಾಡಿರುವ ರಣವೀರ್ ಸಿಂಗ್ (Ranveer Singh), "ಭಾರತದ ದೊಡ್ಡ ಗೆಲುವಿನ ಹಿಂದಿರುವ ಕಥೆಯನ್ನು ವಿವರಿಸುವ '83' ಸಿನಿಮಾ ಡಿ.24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ತೆರೆಕಾಣಲಿದೆ. ನವೆಂಬರ್​ 30 ರಂದು ಟ್ರೇಲರ್​ ಬಿಡುಗಡೆ ಆಗಲಿದೆ" ಎಂದು ಬರೆದುಕೊಂಡಿದ್ದಾರೆ.

 

ಇದನ್ನೂ ಓದಿ : Katrina Vicky Wedding: ವಿಕ್ಕಿ-ಕತ್ರೀನಾ ಮದುವೆ ಆಗುವುದಿಲ್ಲವೇ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News