ಕೆಜಿಎಫ್ 2 ಪ್ಯಾನ್ ಇಂಡಿಯಾ ಸಿನಿಮಾ. ಭಾರತ ಸೇರಿದಂತೆ ವಿಶ್ವಾದ್ಯಂತ ಈ ಸಿನಿಮಾ ರಿಲೀಸ್‌ ಆಗಿದೆ. ಇದರ ಜೊತೆ ಇಂದು ಮತ್ತೊಂದು ವಿಶೇಷ ಎಂದರೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ. ದೇಶ ಸ್ವತಂತ್ರವಾದಾಗ ವಿಶ್ವಕ್ಕೆ ಮಾದರಿ ಆಗಬಲ್ಲ ಸಂವಿಧಾನವನ್ನು ರಚಿಸಿದವರು ಅಂಬೇಡ್ಕರ್‌.  


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವೀರೇಶ್ ಥಿಯೇಟರ್​ನಲ್ಲಿ ಮಹಾ ಯಡವಟ್ಟು.. ಕೆಜಿಎಫ್ 2 ಬದಲು ಕೆಜಿಎಫ್ 1 ರಿಲೀಸ್!


ಅಂಬೇಡ್ಕರ್ ಅಂದು ಕೆಜಿಎಫ್​ಗೆ ಬಂದು ಬೌದ್ದ ದರ್ಮ ಪ್ರಚಾರಕರನ್ನು ಭೇಟಿ ಮಾಡಿಕೊಂಡು ಹೋಗಿದ್ದರಂತೆ. ಅಂಬೇಡ್ಕರ್ 1954 ರಲ್ಲಿ ಕೋಲಾರದ ಕೆಜಿಎಫ್ ಭೇಟಿ ನೀಡಿದ್ದರು. ಕೆಜಿಎಫ್​ ನಲ್ಲಿ ಮಾಡಲಾಗಿದ್ದ ಸೌತ್​ ಇಂಡಿಯಾ ಬುದ್ದಿಸ್ಟ್​ ಅಸೋಸಿಯೇಶನ್​​ಗೆ ವಿಸಿಟ್‌ ಕೊಟ್ಟಿದ್ದರಂತೆ. ಇದಕ್ಕಾಗಿಯೇ ಕೆಜಿಎಫ್‌ನಲ್ಲಿ ಜನರು ಅಂಬೇಡ್ಕರ್​ ಅವರನ್ನು ದೇವರಂತೆ ಆರಾಧಿಸುತ್ತಿದ್ದರು. ಹೀಗೆ ಅಂಬೇಡ್ಕರ್‌ ಅವರಿಗೂ ಕೆಜಿಎಫ್‌ ಗೂ ಒಂದು ನಂಟಿದೆ. 


ಇದನ್ನೂ ಓದಿ: KGF 2 Twitter Review: 'ಕೆಜಿಎಫ್ 2' ಸಿನಿಮಾ ಬಗ್ಗೆ ಏನನ್ನುತ್ತೆ ಟ್ವಿಟರ್‌ ರಿವೀವ್‌?


ಏಪ್ರಿಲ್‌ 14 ರಂದು ಅಂದರೆ ಅಂಬೇಡ್ಕರ್‌ ಜಯಂತಿಯ ದಿನ ಕೆಜಿಎಫ್‌2 ಸಿನಿಮಾ ರಿಲೀಸ್‌ ಮಾಡಲು ಇದು ಕೂಡ ಒಂದು ಕಾರಣವಾ? ಎಂಬ ಪ್ರಶ್ನೆ ಇದೀಗ ಅಭಿಮಾನಿಗಳಲ್ಲಿ ಮೂಡಿದೆ. ಕೆಜಿಎಫ್‌ ಎಂಬ ಸಿಡಿಲಬ್ಬರದ ಸಿನಿಮಾ ಕನ್ನಡ ಸಿನಿಮಾ ರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ದಿನ 2018ರ ಡಿಸೆಂಬರ್‌ 21. ಇದೀಗ ಕೆಜಿಎಫ್‌ 2 ಸಿನಿಮಾ ವಿಶ್ವದಾದ್ಯಂತ ತೆರೆಗೆ ಬಂದಿದೆ. ಮಧ್ಯರಾತ್ರಿ 1 ಗಂಟೆಯಿಂದ ಶೋಗಳು ಶುರುವಾಗಿದ್ದು, ನಿರಂತರವಾಗಿ ಪ್ರದರ್ಶನಗಳನ್ನು ಕಾಣುತ್ತಿವೆ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.