KGF 2 Twitter Review: 'ಕೆಜಿಎಫ್ 2' ಸಿನಿಮಾ ಬಗ್ಗೆ ಏನನ್ನುತ್ತೆ ಟ್ವಿಟರ್‌ ರಿವೀವ್‌?

KGF 2 Twitter Review: ಕೆಜಿಎಫ್ ಚಾಪ್ಟರ್ 1ರ ಬಳಿಕ 'ಕೆಜಿಎಫ್ ಚಾಪ್ಟರ್ 2' ಬಗ್ಗೆ ಸಹಜವಾಗಿಯೇ ನಿರೀಕ್ಷೆ ಡಬಲ್‌ ಆಗಿತ್ತು. ಗರುಡನ ಕೊಲೆ.. ನರಾಚಿ ಲೋಕ.. ರಾಕಿಭಾಯ್‌ ಲುಕ್‌ನಿಂದಾಗಿ ಈ ಸಿನಿಮಾ ಹೈಪ್ ಪಡೆದುಕೊಂಡಿದೆ. ಕೆಜಿಎಫ್ 2  ವಿಶ್ವದೆಲ್ಲೆಡೆ ಹೊಸ ಟ್ರೆಂಡ್‌ ಕ್ರಿಯೇಟ್‌ ಮಾಡಿತ್ತು. ಸಿನಿಮಾ ರಿಲೀಸ್‌ಗೂ ಮುನ್ನವೇ ಮುಂಗಡವಾಗಿ ಟಿಕೆಟ್‌ ಕಾದಿರಿಸಿ ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಿದ ಜನ ಇದೀಗ ಟ್ವಿಟರ್‌ನಲ್ಲಿ ರಿವೀವ್‌ ನೀಡಿದ್ದಾರೆ.

Written by - Chetana Devarmani | Last Updated : Apr 14, 2022, 09:16 AM IST
  • ಭಾರತದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಕೆಜಿಎಫ್ 2
  • ಮಧ್ಯರಾತ್ರಿಯಿಂದಲೇ ಸಿನಿಮಾ ವೀಕ್ಷಿಸುತ್ತಿರುವ ಅಭಿಮಾನಿಗಳು
  • 'ಕೆಜಿಎಫ್ 2' ಸಿನಿಮಾ ಬಗ್ಗೆ ಏನನ್ನುತ್ತೆ ಟ್ವಿಟರ್‌ ರಿವೀವ್‌?
KGF 2 Twitter Review: 'ಕೆಜಿಎಫ್ 2' ಸಿನಿಮಾ ಬಗ್ಗೆ ಏನನ್ನುತ್ತೆ ಟ್ವಿಟರ್‌ ರಿವೀವ್‌? title=
ಕೆಜಿಎಫ್ 2

ಭಾರತದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಕೆಜಿಎಫ್ 2 ಇಂದು ಅದ್ಧೂರಿಯಾಗಿ ಎಂಟ್ರಿಕೊಟ್ಟಿದೆ. ಮಧ್ಯರಾತ್ರಿಯಿಂದಲೇ ಜನ ಸಿನಿಮಾ ವೀಕ್ಷಿಸುತ್ತಿದ್ದಾರೆ. ಇದೊಂದು ಸಿನಿಮಾಗಾಗಿ ಕಾದು ಕಳೆದ 4 ವರ್ಷಗಳಿಂದ ಶಬರಿಯಂತೆ ಕಾದು ಕೂತಿದ್ದ ಅಭಿಮಾನಿಗಳಿಗೆ ಇಂದು ಕೊನೆಗೂ ಕೆಜಿಎಫ್‌2 ನೋಡುವ ಭಾಗ್ಯ ದೊರೆತಿದೆ. 

ಕೆಜಿಎಫ್ ಚಾಪ್ಟರ್ 1ರ ಬಳಿಕ 'ಕೆಜಿಎಫ್ ಚಾಪ್ಟರ್ 2' ಬಗ್ಗೆ ಸಹಜವಾಗಿಯೇ ನಿರೀಕ್ಷೆ ಡಬಲ್‌ ಆಗಿತ್ತು. ಗರುಡನ ಕೊಲೆ.. ನರಾಚಿ ಲೋಕ.. ರಾಕಿಭಾಯ್‌ ಲುಕ್‌ನಿಂದಾಗಿ ಈ ಸಿನಿಮಾ ಹೈಪ್ ಪಡೆದುಕೊಂಡಿದೆ. ಕೆಜಿಎಫ್ 2  ವಿಶ್ವದೆಲ್ಲೆಡೆ ಹೊಸ ಟ್ರೆಂಡ್‌ ಕ್ರಿಯೇಟ್‌ ಮಾಡಿತ್ತು. ಸಿನಿಮಾ ರಿಲೀಸ್‌ಗೂ ಮುನ್ನವೇ ಮುಂಗಡವಾಗಿ ಟಿಕೆಟ್‌ ಕಾದಿರಿಸಿ ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಿದ ಜನ ಇದೀಗ ಟ್ವಿಟರ್‌ನಲ್ಲಿ ರಿವೀವ್‌ ನೀಡಿದ್ದಾರೆ. 

ಇದನ್ನೂ ಓದಿ: ಕೆಜಿಎಫ್‌-2'ಗೆ ಶುಭಕೋರಿದ ಅಣ್ಣಾವ್ರ ಪುತ್ರ..! ಏನ್‌ ಹೇಳಿದ್ರು ದೊಡ್ಮನೆ ಕುಡಿ ರಾಘಣ್ಣ..?

ಮಧ್ಯರಾತ್ರಿಯಿಂದಲೇ ಕೆಜಿಎಫ್ 2 ಸಿನಿಮಾದ ಬಗ್ಗೆ ಟ್ವಿಟರ್‌ನಲ್ಲಿ  ನೆಟ್ಟಿಗರು ವಿಮರ್ಶೆ ನೀಡುತ್ತಿದ್ದಾರೆ. ಫಸ್ಟ್‌ ಹಾಫ್ ಈಗ ತಾನೇ ಮುಗೀತು. ಹೀರೊ ಇಂಟ್ರುಡಕ್ಷನ್ ಅದ್ಭುತವಾಗಿದೆ. ಆದರೆ, ಸಿಕ್ಕಾಪಟ್ಟೆ ಬಿಲ್ಡಪ್ ಇದೆ. ವಾವ್ಹ್ ಎಂಥಾ ಸಿನಿಮಾ. ಇಂಟರ್‌ವಲ್ ಅಂತೂ ಬೆಂಕಿ ಹತ್ತಿಸುವಂತಿದೆ ಎಂದು ನೆಟ್ಟಿಗರೊಬ್ಬರು ಟ್ವೀಟ್‌ ಮಾಡಿದ್ದಾರೆ. 

 

 

#KGF2 ಇಂದು ತಮಿಳುನಾಡಿನಾದ್ಯಂತ 350+ ಸ್ಕ್ರೀನ್‌ಗಳಲ್ಲಿ ತೆರೆಕಂಡಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಪ್ರದರ್ಶನಗಳನ್ನು ನೀಡಲಾಗುವುದು. ರಾಕಿಭಾಯ್‌ಗೆ ಎಂಟ್ರಿಗೆ ಜನ ಇಂತಹ ಪ್ರತಿಕ್ರಿಯೆ ನೀಡಿರುವುದನ್ನು ನೋಡಿ ಸಂತೋಷವಾಯಿತು ಎಂದು ಮತ್ತೋರ್ವ ನೆಟ್ಟಿಗ ಹೇಳಿದ್ದಾರೆ. 

 

 

ಇದನ್ನೇ ಯೋಗ್ಯವಾದ ಸೀಕ್ವೆಲ್ ಎಂದು ಕರೆಯುತ್ತೀರಿ!!! #KGF2 ಅದ್ಭುತ ದೃಶ್ಯಗಳು, ಖಡಕ್‌ ಡೈಲಾಗ್‌ಗಳು ಮತ್ತು ಬಲವಾದ ಭಾವನೆಗಳಿಂದ ತುಂಬಿದೆ. ಇದೊಂದು ಬ್ಲಾಕ್‌ಬಸ್ಟರ್ ಮೂವಿ ಎಂದು ಟ್ವಿಟರ್‌ ಯೂಸರ್‌ ಒಬ್ಬರು ಪೋಸ್ಟ್‌ ಮಾಡಿದ್ದಾರೆ. 

ಇದನ್ನೂ ಓದಿ: KGF 2 Box Office:ಬಾಕ್ಸ್ ಆಫೀಸಿನಲ್ಲಿ ಇದು ವರೆಗೆ ಕೆಜಿಎಫ್2 ಕಲೆ ಹಾಕಿದ್ದೆಷ್ಟು?

ಈ ಸಿನಿಮಾದ ಬಗ್ಗೆ ಕೆಟ್ಟದಾಗಿ ಹೇಳುವುದಕ್ಕೆ ಸಾಧ್ಯವೇ ಇಲ್ಲ. ಯಾಕೆಂದರೆ, ಇಲ್ಲಿವರೆಗೂ ಸಿನಿಮಾ ಸೂಪರ್ ಆಗಿದೆ. ಅದ್ಭುತವಾದ ಸಿನಿಮಾ. ಈ ಚಿತ್ರ ತಾಯಿ ಪ್ಲ್ಯಾಶ್ ಬ್ಯಾಕ್‌ನಿಂದ ಆರಂಭ ಆಗುತ್ತದೆ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಕೆಜಿಎಫ್ 2 ಸಿನಿಮಾ ಫಸ್ಟ್ ಹಾಫ್ ಅಂತೂ ಸಿಕ್ಕಾಪಟ್ಟೆ ಸಖತ್‌ ಆಗಿದೆ ಎಂದರೆ, ಮತ್ತೆ ಹಲವರಿಗೆ ರವಿ ಬಸ್ರೂರು ಹಿನ್ನೆಲೆ ಸಂಗೀತ ಮನ ಮುಟ್ಟಿದೆ.

ಈ ಎಲ್ಲ ಪಾಸಿಟಿವ್‌ ಟ್ವೀಟ್‌ಗಳ ಮಧ್ಯೆ ಟ್ವಿಟರ್‌ನಲ್ಲಿ ಕೆಜಿಎಫ್ 2 ಸಿನಿಮಾ ಬಗ್ಗೆ ನೆಗೆಟಿವ್ ಕಮೆಂಟ್ ಕೂಡ ಬಂದಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News