ನವದೆಹಲಿ: ಕಿರುತೆರೆ ನಟಿ ಪ್ರೇಕ್ಷಾ ಮೆಹ್ತಾ ಸೋಮವಾರ ತಡರಾತ್ರಿ ಇಂದೋರ್‌ನ ಭಜರಂಗ್ ನಗರದಲ್ಲಿರುವ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರೇಕ್ಷಾ ಮುಂಬೈನಲ್ಲಿ ವಾಸಿಸುತ್ತಿದ್ದರು. ಲಾಕ್‌ಡೌನ್ ಪ್ರಾರಂಭವಾಗುವ ಮೊದಲು ಅವಳು ತನ್ನ ಮನೆಗೆ ಮರಲಿದ್ದಳು, ಕಿರುತೆರೆಯಲ್ಲಿ ಮೂಡಿ ಬರುವ 'ಕ್ರೈಂ ಪೆಟ್ರೋಲ್'ನ ಹಲವಾರು ಎಪಿಸೋಡ್ ಗಳಲ್ಲಿ ಪ್ರಕ್ಷಾ ನಟಿಸಿದ್ದಾರೆ.


COMMERCIAL BREAK
SCROLL TO CONTINUE READING

ಅಭಿಜೀತ್ ವಾಡ್ಕರ್, ಸಂತೋಷ್ ರೆಗೆ ಮತ್ತು ನಾಗೇಂದ್ರ ಸಿಂಗ್ ರಾಥೋಡ್ ಅವರ 'ಡ್ರಾಮಾ ಫ್ಯಾಕ್ಟರಿ' ನಾಟಕ ಗುಂಪಿನೊಂದಿಗೆ ಪ್ರೇಕ್ಷಾ ತನ್ನ ರಂಗಭೂಮಿಯ ಕರಿಯರ್ ಆರಂಭಿಸಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ.  ಮಾಂಟೋ ಬರೆದ 'ಖೋಲ್ ದೋ' ನಾಟಕದಲ್ಲಿ ಅವರು ತಮ್ಮ ಮೊದಲ ಸ್ಟೇಜ್ ಪರ್ಫಾರ್ಮೆನ್ಸ್ ನೀಡಿದ್ದರು. ಅವರು 'ಖೂಬ್ಸೂರತ್ ಬಹು', 'ಬೂಂದೇ' 'ರಾಕ್ಷಸ್', 'ಪ್ರತಿಬಿಂಬ', ಪಾರ್ಟ್ನರ್' 'ಹಾಂ', 'ಥ್ರಿಲ್' ಹಾಗೂ 'ಅಧೂರಿ ಮಹಿಳಾ' ಗಳಂತಹ ಮುಂತಾದ ನಾಟಕಗಳಲ್ಲಿ ಕೆಲಸ ಮಾಡಿದ್ದರು.


ಅಭಿನಯಕ್ಕಾಗಿ ಅವರಿಗೆ ಮೂರು ರಾಷ್ಟ್ರೀಯ ನಾಟ್ಯ ಮಹೋತ್ಸವದಲ್ಲಿ ಮೊದಲ ಬಹುಮಾನ ಕೂಡ ಲಭಿಸಿದ್ದವು. ಏಕಾಂಗಿ ನಾಟಕ 'ಸಡಕ್ ಕೆ ಕಿನಾರೆ' ನಾಟಕದಲ್ಲಿನ ನಟನೆಗೆ ಅವರಿಗೆ ಅವಾರ್ಡ್ ಕೂಡ ಲಭಿಸಿದೆ. ಅಭಿನಯಿಸುವ ಅವರ ಮಹತ್ವಾಕಾಂಕ್ಷೆಯೇ ಇಂದು ಪ್ರೇಕ್ಷಾ ಅವರ ಪ್ರಾಣ ತೆಗೆದಿದೆ. ಪ್ರೇಕ್ಷಾ ಆತ್ಮಹತ್ಯೆಯ ಕುರಿತು ಹೇಳಿಕೆ ನೀಡಿರುವ ಅವಳ ಕುಟುಂಬ ಸದಸ್ಯರು ಲಾಕ್ ಡೌನ್ ಹಿನ್ನೆಲೆ ಕೆಲಸ ಸ್ಥಗಿತಗೊಂಡ ಕಾರಣ ಪ್ರೇಕ್ಷಾ ಸಾಕಷ್ಟು ಒತ್ತಡದಲ್ಲಿದ್ದರು ಎಂದು ಹೇಳಿದ್ದಾರೆ.


ಆತ್ಮಹತ್ಯೆಗೂ ಮೊದಲು ಪ್ರೆಕ್ಷಾ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಸ್ಟೇಟಸ್ ಅಪ್ಡೇಟ್ ಮಾಡಿದ್ದಾಳೆ. ತನ್ನ ಸ್ಟೇಟಸ್ ನಲ್ಲಿ ನಟಿ ಅವತಾರ್ ಶಿಂಗ್ ಪಾಷಾ ಅವರ ಕವಿತೆ 'ಸಬ್ ಸೆ ಬುರಾ ಹೋತಾ ಹೈ ಸಪ್ನೋ ಕಾ ಮರ್ ಜಾನಾ'ದ ಸಾಲುಗಳನ್ನು ಬರೆದುಕೊಂಡಿದ್ದಾಳೆ. WhatsApp ಮೇಲೆ ಇದು ಪ್ರೇಕ್ಷಾ ಸೆಟ್ ಮಾಡಿದ್ದ ಕೊನೆಯ ಸ್ಟೇಟಸ್ ಆಗಿತ್ತು. ಆದರೆ, ಪ್ರೇಕ್ಷಾ ಆತ್ಮಹತ್ಯೆಯ ಹಿಂದಿರುವ ಕಾರಣಗಳ ತನಿಖೆಯಲ್ಲಿ ಇದೀಗ ಪೊಲೀಸರು ತೊಡಗಿದ್ದಾರೆ.