ಬೆಂಗಳೂರು: ಸ್ಯಾಂಡಲ್ ವುಡ್ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ತಂದೆ ಮತ್ತು ತಾಯಿಯ ಹೆಸರಿನ ಮೇಲೆ ಸಕ್ಸಸ್ ಕಂಡವರಲ್ಲ.‌ ಇವತ್ತು ನಾವು - ನೀವು ನೋಡ್ತಿರೋ ಸೃಜನ್ ಕಷ್ಟಪಟ್ಟು ಬೆಳೆದು ಬಂದವರು. ಅಪ್ಪ ಲೋಕೇಶ್, ಅಮ್ಮ ಗಿರಿಜಾ ಲೋಕೇಶ್ ಸ್ಯಾಂಡಲ್ ವುಡ್ ನ ಜನಪ್ರಿಯ ಕಲಾವಿದರಾಗಿದ್ದರೂ ಸೃಜನ್ ಗೆ ಇಂಡಸ್ಟ್ರಿಯಲ್ಲಿ ರೆಡ್ ಕಾರ್ಪೆಟ್ ವೆಲ್ಕಮ್ ಸಿಕ್ಕಿಲ್ಲ. ಅವರು ತಮ್ಮ ಸ್ವ ಪ್ರಯತ್ನದಿಂದ ಮೇಲೆ ಬಂದವರು.‌


COMMERCIAL BREAK
SCROLL TO CONTINUE READING

ಸೃಜನ್ (Srujan Lokesh) ಇದ್ದಿದ್ರಲ್ಲೇ ತೃಪ್ತಿ ಪಡೋ ಜಾಯಮಾನದವರಾಗಿದ್ರು.ಒಂದು ರೀತಿ‌ ಶುದ್ಧ ಸೋಮಾರಿ ಆಗಿದ್ರಂತೆ. ಆದರೆ, ಅವರು ಈ ಮಟ್ಟಕ್ಕೆ ಬೆಳೆಯಲು ಆ ಒಬ್ಬ ವ್ಯಕ್ತಿಯ ಮಾತು  ಮತ್ತು ಪ್ರೀತಿಯ ಬೈಗುಳ , ಪ್ರೋತ್ಸಾಹವೇ ಕಾರಣ. 
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೃಜನ್ ಅವರ ಆತ್ಮೀಯ ಗೆಳೆಯರಾಗಿದ್ದರೂ ಒಂದೇ ಒಂದು ರೂ ಹಣ ನೀಡಿರಲಿಲ್ಲವಂತೆ! ದರ್ಶನ್ ಹಣ ಸಹಾಯ ಮಾಡ್ದೆ ಇದ್ದುದು ನಿಜಾನಾ? ಸೃಜನ್ ಸಕ್ಸಸ್ ನ ಹಿಂದಿನ ಶಕ್ತಿಯಾರು ಅನ್ನೋ ಕುತೂಹಲ ನಿಮ್ಗೆ ಇದ್ಯಾ? ಆ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್..


ಇದನ್ನೂ ಓದಿ: Sudeep and Darshan : ಮತ್ತೆ ಒಂದಾಗಲಿದ್ದಾರೆ ಸುದೀಪ್ ಮತ್ತು ದರ್ಶನ್..!


ಯೆಸ್ ಸೃಜನ್ ಲೋಕೇಶ್ ಬೆಳೆದು ಬಂದ ಹಾದಿ‌ ನಿಜಕ್ಕೂ ಕಲ್ಲು ಮುಳ್ಳಿನ ಹಾದಿ...ಎಷ್ಟೇ ಕಷ್ಟ ಪಟ್ಟರೂ ಸಕ್ಸಸ್ ಸಿಕ್ಕಿರಲಿಲ್ಲ.‌ ಅಲ್ಲದೆ  ಒಂದು ರೀತಿ ಸೋಮಾರಿ, ಅಲ್ಪ ತೃಪ್ತರಾಗಿದ್ದ ಸೃಜನ್ ತಿಂಗಳಿಗೆ 20 ರಿಂದ 30 ಸಾವಿರ ರೂ ಸಿಕ್ಕರೆ ಸಾಕು ಅನ್ನೋ ಮನಸ್ಥಿತಿಯಲ್ಲಿದ್ದವರು.ಇವರನ್ನು ಬದಲು ಮಾಡಿದ್ದು ಗೆಳೆಯ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan). ಈ ಬಗ್ಗೆ ಸ್ವತಃ ಸೃಜನ್ನೇ ಒಂದು ಕಡೆ ಹೇಳಿಕೊಂಡಿದ್ದಾರೆ. Golden Star Ganesh: ‘ಬಾನದಾರಿಯಲ್ಲಿ’ ಪಯಣಿಸಲು ಸಜ್ಜಾದ ಗೋಲ್ಡನ್ ಸ್ಟಾರ್ ಗಣೇಶ್!


ನಾನು ತುಂಬಾ ಸೋಮಾರಿಯಾಗಿದ್ದೆ. ಎಷ್ಟು ದುಡೀತೀನಾ ಅಷ್ಟೇ ಸಾಕು ಅಂತಿದ್ದವನು. 20 ರಿಂದ 30 ಸಾವಿರ ರೂ ತಿಂಗಳಿಗೆ ಬಂದ್ರೆ ರಾಜನ ಥರ ಇರ್ತಿದ್ದೆ. ಆದರೆ ಉಗಿದು ಬೈದು, ಕತ್ ಹಿಡಿದು ಮುಚ್ಕೊಂಡ್ ನೀನು ಈ ಕೆಲಸ ಮಾಡು ಅಂತ ಬೈದು ಕರ್ಕೊಂಡ್ ಬಂದಿದ್ದು ಗೆಳೆಯ ದರ್ಶನ್ . ನಿನ್ನಲ್ಲಿ ಏನಿದೆ ಅಂತ ಫಸ್ಟ್ ನೀನು ಡಿಸೈಡ್ ಮಾಡು..ಆಮೇಲೆ‌ ಜನ ಡಿಸೈಡ್ ಮಾಡುತ್ತಾರೆ ಎಂದು ಬುದ್ಧಿ ಮಾತುಗಳನ್ನೇಳಿ ದರ್ಶನ್ ತನ್ನನ್ನು ಟ್ರ್ಯಾಕ್ ಗೆ ತಂದಿದ್ದರೆಂಬುದನ್ನು ಸ್ವತಃ ಸೃಜನ್ನೇ ಹೇಳಿದ್ದರು.‌


ಸ್ನೇಹಿತರೇ ನಿಮ್ಗೆ ಈಗ ಸೃಜನ್ ಈ ಮಟ್ಟಕ್ಕೆ ಬೆಳೆಯಲು ಬೆನ್ನು ತಟ್ಟಿ,  ಬುದ್ಧಿ ಹೇಳಿ ಪ್ರೋತ್ಸಾಹಿಸಿದವರು ಯಾರು ಅಂತ ಗೊತ್ತಾಯ್ತು. ದರ್ಶನ್ ಇಷ್ಟೆಲ್ಲಾ ಕ್ಲೋಸ್ ಇದ್ರೂ ಹಣ ನೀಡಿಲ್ವಾ ಅನ್ನೋ ಪ್ರಶ್ನೆ ಸಹಜ ಅಲ್ವೇ? ಹೌದು ಗೆಳೆತನದಲ್ಲಿ ಹಣ ಅಡ್ಡ ಬರಬಾರದು. ಈ ಮಾತನ್ನು ದರ್ಶನ್ - ಸೃಜನ್ ಪಾಲಿಸಿದ್ದಾರೆ. ದರ್ಶನ್ ಮತ್ತು ಸೃಜನ್ ನಡುವೆ ಒಂದೇ ಒಂದು ರೂಪಾಯಿ ಹಣದ ವ್ಯವಹಾರ ನಡೆದಿಲ್ವಂತೆ.‌ಎನಿವೇ ಇವರಿಬ್ಬರ ಸ್ನೇಹ ಹೀಗೆ ಗಟ್ಟಿಯಾಗಿರಲಿ. ದರ್ಶನ್ ಮತ್ತು ಸೃಜನ್ ಗೆ ಮತ್ತಷ್ಟು ಯಶಸ್ಸು ಸಿಗಲೆಂದು ಆಶಿಸೋಣ...


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.