ʼನಾಟು ನಾಟುʼ ಹಾಡಿಗೆ ಸ್ಟೇಪ್ ಹಾಕಿ RRR ತಂಡಕ್ಕೆ ಶುಭ ಕೋರಿದ ಟೈಗರ್..! ವಿಡಿಯೋ ನೋಡಿ
ಎಮ್‌ಎಮ್ ಕೀರವಾಣಿ ಸಂಯೋಜನೆಯ ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡು ಇತಿಹಾಸ ಸೃಷ್ಟಿಸಿದೆ. ಈ ಹಾಡಿಗೆ ಜನವರಿ 10 ರಂದು ಅತ್ಯುತ್ತಮ ಮೂಲ ಗೀತೆಗಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಲಭಿಸಿದೆ. ಪಿಎಂ ನರೇಂದ್ರ ಮೋದಿ ಸೇರಿದಂತೆ ಶಾರುಖ್ ಖಾನ್, ಚಿರಂಜೀವಿ, ಆಲಿಯಾ ಭಟ್ ಮತ್ತು ಎಆರ್ ರೆಹಮಾನ್ ರಾಜಮೌಳಿ ತಂಡವನ್ನು ಅಭಿನಂದಿಸಿದ್ದರು. ಇದೀಗ ಟೈಗರ್ ಶ್ರಾಫ್ ಅವರು ಈ ಅದ್ಭುತ ಸಾಧನೆಗೆ ಪರಿಪೂರ್ಣ ನೃತ್ಯ ಗೌರವ ಸೂಚಿಸಿದ್ದಾರೆ.
Tiger Shroff Naatu Naatu : ಎಮ್‌ಎಮ್ ಕೀರವಾಣಿ ಸಂಯೋಜನೆಯ ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡು ಇತಿಹಾಸ ಸೃಷ್ಟಿಸಿದೆ. ಈ ಹಾಡಿಗೆ ಜನವರಿ 10 ರಂದು ಅತ್ಯುತ್ತಮ ಮೂಲ ಗೀತೆಗಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಲಭಿಸಿದೆ. ಪಿಎಂ ನರೇಂದ್ರ ಮೋದಿ ಸೇರಿದಂತೆ ಶಾರುಖ್ ಖಾನ್, ಚಿರಂಜೀವಿ, ಆಲಿಯಾ ಭಟ್ ಮತ್ತು ಎಆರ್ ರೆಹಮಾನ್ ರಾಜಮೌಳಿ ತಂಡವನ್ನು ಅಭಿನಂದಿಸಿದ್ದರು. ಇದೀಗ ಟೈಗರ್ ಶ್ರಾಫ್ ಅವರು ಈ ಅದ್ಭುತ ಸಾಧನೆಗೆ ಪರಿಪೂರ್ಣ ನೃತ್ಯ ಗೌರವ ಸೂಚಿಸಿದ್ದಾರೆ.
ಟೈಗರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿ ಆರ್‌ಆರ್‌ಆರ್ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಟೋಪಿಯಿಂದ ಬೂಟುಗಳವರೆಗೆ ಸಂಪೂರ್ಣ ಕಪ್ಪು ಡ್ರೇಸ್ ಧರಿಸಿ ನಾಟು ನಾಟುಗೆ ಸಖತ್ ಸ್ಟೇಪ್ ಹಾಕಿದ್ದಾರೆ. ಈ ವಿಡಿಯೋವನ್ನು ಅನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ʼಇದು ನಮ್ಮ ವಿಜಯದ ನೃತ್ಯ, ಭಾರತೀಯ ಚಿತ್ರರಂಗಕ್ಕೆ ದೊಡ್ಡ ಗೆಲುವು! RRR ಇಡೀ ತಂಡಕ್ಕೆ ಅಭಿನಂದನೆಗಳು ಅಂತ ಶೀರ್ಷಿಕೆ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Veera simha reddy : ಬಾಲಯ್ಯ ʼವೀರ ಸಿಂಹ ರೆಡ್ಡಿʼ ಸಿನಿಮಾ ರಿಲೀಸ್.. ದುನಿಯಾ ವಿಜಯ್ ಅಬ್ಬರ ಹೇಗಿತ್ತು ಗೊತ್ತಾ..?
ಅಲ್ಲದೆ, ಕರಣ್ ಜೋಹರ್ ಟೈಗರ್ ಡಾನ್ಸ್ ವಿಡಿಯೋವನ್ನು ಹಂಚಿಕೊಂಡು ʼವಾವ್ ಟೈಗರ್ ಜಾಕಿಶ್ರಾಫ್!! ಇದು ಭಾರತೀಯ ಚಿತ್ರರಂಗಕ್ಕೆ ಐತಿಹಾಸಿಕ ಘಳಿಗೆ. ಸಾಂಪ್ರದಾಯಿಕ ಗೀತೆಗೆ ಮಹೋನ್ನತ ಗೌರವ ಸಿಕ್ಕಿದೆ! ಇದನ್ನು ಪ್ರೀತಿಸಿ !!" ಅಂತ ಮೂರು ಹಾರ್ಟ್ ಎಮೋಜಿಗಳನ್ನು ಹಾಕಿ ಸ್ಟೇಟಸ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 2019 ರಲ್ಲಿ ಧರ್ಮ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಜೋಹರ್ ನಿರ್ಮಿಸಿದ ಸ್ಟೂಡೆಂಟ್ ಆಫ್ ದಿ ಇಯರ್ 2 ನಲ್ಲಿ ಟೈಗರ್ ನಟಿಸಿದ್ದರು.
ಇನ್ನು ಆರ್‌ಆರ್‌ಆರ್ ಸಿನಿಮಾ ಜಾಗತಿಕ ಬಾಕ್ಸ್ ಆಫೀಸ್‍ನಲ್ಲಿ 1,200 ಕೋಟಿ ರೂ.ಗಿಂತಲೂ ಹೆಚ್ಚು ಗಳಿಸಿದೆ. ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿ ವಿಭಾಗದಲ್ಲಿ ಎಸ್.ಎಸ್.ರಾಜಮೌಳಿ ಅತ್ಯುತ್ತಮ ನಿರ್ದೇಶಕ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇದಲ್ಲದೆ ಈ ಸಿನಿಮಾ ಆಸ್ಕರ್ ಪ್ರಶಸ್ತಿ ರೇಸ್‌ನಲ್ಲಿದ್ದು, ಕನಿಷ್ಠ ಒಂದಾದರೂ ವಿಭಾಗದಲ್ಲಿ ನಾಮನಿರ್ದೇಶನಗೊಳ್ಳುವ ನಿರೀಕ್ಷೆಯಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.