‘ಆರಾಮ್ ಅರವಿಂದ್ ಸ್ವಾಮಿ’ಯಾದ ಅನೀಶ್ ತೇಜೇಶ್ವರ್: ಹುಟ್ಟುಹಬ್ಬಕ್ಕೆ ಸ್ಪೆಷಲ್ ವೀಡಿಯೋ ರಿಲೀಸ್

ಇಂದು ಅನೀಶ್ ತೇಜೇಶ್ವರ್ ಹುಟ್ಟುಹಬ್ಬ. ಇದೇ ಸಂದರ್ಭದಲ್ಲಿ ಆರಾಮ್ ಅರವಿಂದ್ ಸ್ವಾಮಿ ಚಿತ್ರತಂಡ ಸ್ಪೆಷಲ್ ವೀಡಿಯೋ ಬಿಡುಗಡೆ ಮಾಡಿದೆ. ಈ ಮೂಲಕ ಸಿನಿಮಾ ಎಷ್ಟು ಡಿಫ್ರೆಂಟ್ ಆಗಿರಲಿದೆ ಎನ್ನೋದನ್ನು ಕೂಡ ಹೇಳಲಾಗಿದೆ. ಆರಾಮ್ ಅರವಿಂದ್ ಸ್ವಾಮಿ ರೋಮ್ಯಾಂಟಿಕ್ ಕಾಮಿಡಿ ಸಬ್ಜೆಕ್ಟ್ ಸಿನಿಮಾ. ‘ನಮ್ ಗಣಿ ಬಿಕಾಂ ಪಾಸ್’, ‘ಗಜಾನನ ಆಂಡ್ ಗ್ಯಾಂಗ್’ ಸಿನಿಮಾ ಖ್ಯಾತಿಯ ನಿರ್ದೇಶಕ ಅಭಿಷೇಕ್ ಶೆಟ್ಟಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

Written by - Bhavishya Shetty | Last Updated : Jan 12, 2023, 02:11 PM IST
    • ‘ಆರಾಮ್ ಅರವಿಂದ್ ಸ್ವಾಮಿ’ ಆಗಿ ತೆರೆ ಮೇಲೆ ಹೊಸ ಅವತಾರದಲ್ಲಿ ಬರಲು ಸಜ್ಜಾಗಿರುವ ಅನೀಶ್
    • ಅನೀಶ್ ಗೆ ಚಿತ್ರತಂಡ ಸ್ಪೆಷಲ್ ವೀಡಿಯೋ ಬಿಡುಗಡೆ ಮಾಡಿ ಹುಟ್ಟು ಹಬ್ಬದ ಶುಭಕೋರಿದೆ
    • ಆರಾಮ್ ಅರವಿಂದ್ ಸ್ವಾಮಿ ಚಿತ್ರತಂಡ ಸ್ಪೆಷಲ್ ವೀಡಿಯೋ ಬಿಡುಗಡೆ
‘ಆರಾಮ್ ಅರವಿಂದ್ ಸ್ವಾಮಿ’ಯಾದ ಅನೀಶ್ ತೇಜೇಶ್ವರ್: ಹುಟ್ಟುಹಬ್ಬಕ್ಕೆ ಸ್ಪೆಷಲ್ ವೀಡಿಯೋ ರಿಲೀಸ್ title=
Aaram Arvind Swamy Movie

ಅಕಿರ, ವಾಸು ನಾನ್ ಪಕ್ಕಾ ಕಮರ್ಶಿಯಲ್ ಸಿನಿಮಾ ಖ್ಯಾತಿಯ ಸ್ಯಾಂಡಲ್ ವುಡ್ ಭರವಸೆಯ ನಟ ಕಂ ನಿರ್ದೇಶಕ ಅನೀಶ್ ತೇಜೇಶ್ವರ್. ಕಮರ್ಶಿಯಲ್ ಸಿನಿಮಾ ಹೀರೋ ಆಗಿ ಮಿಂಚಿರುವ ಅನೀಶ್ ರೋಮ್ಯಾಂಟಿಕ್ ಹೀರೋ ಆಗಿ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಸದ್ಯ ‘ಆರಾಮ್ ಅರವಿಂದ್ ಸ್ವಾಮಿ’ ಆಗಿ ತೆರೆ ಮೇಲೆ ಹೊಸ ಅವತಾರದಲ್ಲಿ ಬರಲು ಸಜ್ಜಾಗಿರುವ ಅನೀಶ್ ಗೆ ಚಿತ್ರತಂಡ ಸ್ಪೆಷಲ್ ವೀಡಿಯೋ ಬಿಡುಗಡೆ ಮಾಡಿ ಹುಟ್ಟು ಹಬ್ಬದ ಶುಭಕೋರಿದೆ.

ಇದನ್ನೂ ಓದಿ: Haripriya Vasishta simha : ಸಿಂಹಪ್ರಿಯಾ ಮದುವೆ ಡೇಟ್‌ ಅನೌಸ್ಸ್‌.. 26 ರಂದು ಅದ್ಧೂರಿ ಮದುವೆ..!

ಇಂದು ಅನೀಶ್ ತೇಜೇಶ್ವರ್ ಹುಟ್ಟುಹಬ್ಬ. ಇದೇ ಸಂದರ್ಭದಲ್ಲಿ ಆರಾಮ್ ಅರವಿಂದ್ ಸ್ವಾಮಿ ಚಿತ್ರತಂಡ ಸ್ಪೆಷಲ್ ವೀಡಿಯೋ ಬಿಡುಗಡೆ ಮಾಡಿದೆ. ಈ ಮೂಲಕ ಸಿನಿಮಾ ಎಷ್ಟು ಡಿಫ್ರೆಂಟ್ ಆಗಿರಲಿದೆ ಎನ್ನೋದನ್ನು ಕೂಡ ಹೇಳಲಾಗಿದೆ. ಆರಾಮ್ ಅರವಿಂದ್ ಸ್ವಾಮಿ ರೋಮ್ಯಾಂಟಿಕ್ ಕಾಮಿಡಿ ಸಬ್ಜೆಕ್ಟ್ ಸಿನಿಮಾ. ‘ನಮ್ ಗಣಿ ಬಿಕಾಂ ಪಾಸ್’, ‘ಗಜಾನನ ಆಂಡ್ ಗ್ಯಾಂಗ್’ ಸಿನಿಮಾ ಖ್ಯಾತಿಯ ನಿರ್ದೇಶಕ ಅಭಿಷೇಕ್ ಶೆಟ್ಟಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹೊಡಿ ಬಡಿ ಸಿನಿಮಾಗಳ ಮೂಲಕ ಕಮರ್ಶಿಯಲ್ ಹೀರೋ ಆಗಿ ಮಿಂಚಿದ್ದ ಅನೀಶ್ ಇದೇ ಮೊದಲ ಬಾರಿ ಕಮರ್ಶಿಯಲ್ ಹೀರೋ ಇಮೇಜ್ ನಿಂದ ಹೊರ ಬಂದು ಹೊಸ ಸಬ್ಜೆಕ್ಟ್ ಇರುವ ಚಿತ್ರ ಆಯ್ಕೆ ಮಾಡಿಕೊಂಡು ನಯಾ ಅವತಾರದಲ್ಲಿ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ. ಬಿಡುಗಡೆಯಾಗಿರುವ ವೀಡಿಯೋ ಕೂಡ ಅನೀಶ್ ಹಿಂದಿನ ಸಿನಿಮಾಗಳಿಗಿಂತ ಈ ಚಿತ್ರ ಕಂಪ್ಲೀಟ್ ಡಿಫ್ರೆಂಟ್ ಆಗಿರಲಿದೆ ಎನ್ನೋದನ್ನು ಸಾರಿ ಹೇಳುತ್ತಿದೆ.

ಇದನ್ನೂ ಓದಿ: ಲಂಡನ್ ನಲ್ಲಿ ಹಿಂದಿ ಸಿನಿಮಾದ ಶೂಟಿಂಗ್ ಮುಗಿಸಿಕೊಂಡು ಬಂದ ತುಪ್ಪದ ಬೆಡಗಿ ರಾಗಿಣಿ

ಆರಾಮ್ ಅರವಿಂದ್ ಸ್ವಾಮಿ ಚಿತ್ರೀಕರಣ ಆರಂಭವಾಗಿ ಮೊದಲ ಹಂತದ ಚಿತ್ರೀಕರಣವನ್ನು ಚಿತ್ರತಂಡ ಕಂಪ್ಲೀಟ್ ಮಾಡಿದೆ. ಚಿತ್ರದಲ್ಲಿ ನಾಯಕಿಯಾಗಿ ಲವ್ ಮಾಕ್ಟೈಲ್ ಖ್ಯಾತಿಯ ಮಿಲನ ನಾಗರಾಜ್ ನಟಿಸುತ್ತಿದ್ದಾರೆ. ಸದ್ಯದಲ್ಲೇ ಇಬ್ಬರ ಲುಕ್ ರಿವೀಲ್ ಮಾಡೋದ್ರ ಮೂಲಕ ಸಿನಿಮಾ ಬಗ್ಗೆ ಚಿತ್ರತಂಡ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದೆ. ಅಕಿರ ಸಿನಿಮಾ ಖ್ಯಾತಿಯ ಶ್ರೀಕಾಂತ್ ಪ್ರಸನ್ನ, ಗುಳ್ಟು ಸಿನಿಮಾ ಖ್ಯಾತಿಯ ಪ್ರಶಾಂತ್ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News