ಬೆಂಗಳೂರು : ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೆಸರಿನಲ್ಲಿ ನೇತ್ರದಾನದ ಅಭಿಯಾನ ಮಾಡಲಾಗುತ್ತಿದೆ. ಇಂದು ನಗರದ ನಾರಾಯಣ ನೇತ್ರಾಲಯದಿಂದ ಅಪ್ಪು ಸಮಾಧಿಯ ಬಳಿ ಲೋಗೋ ಲಾಂಚ್ ಮಾಡಲಾಗಿದೆ. ರಾಜ್ ಕುಟುಂಬದವರು ನೇತ್ರದಾನದ ನೋಂದಣಿ ಸಂಖ್ಯೆಯನ್ನ ಬಿಡುಗಡೆಗೊಳಿಸಲಿದ್ದಾರೆ. ಅಲ್ಲದೆ, ವೈದ್ಯರು ನೇತ್ರದಾನದ ವಿವರಗಳನ್ನ ತಿಳಿಸಲಿದ್ದಾರೆ. ನೇತ್ರದಾನಕ್ಕೆ ಸುಲಭವಾಗಲು ನಂಬರ್ ಪ್ರೊಸೆಸ್ ನೀಡಲಾಗುತ್ತಿದೆ.


COMMERCIAL BREAK
SCROLL TO CONTINUE READING

ಈ ಕುರಿತು ಮಾತನಾಡಿದ ನಾರಾಯಣ ನೇತ್ರಾಲಯದ ಡಾ. ಭುಜಂಗ ಶೆಟ್ಟಿ(Bhujang Shetty),  ಅಪ್ಪು ಸಮಾಧಿಯ ಬಳಿ ಶ್ರೇಷ್ಠ ಕೆಲಸ ಶುರುವಾಗಿದೆ. ಅಪ್ಪು ಕಣ್ಣುಗಳು ನಾಲ್ಕು ಜನರಿಗೆ ದೃಷ್ಟಿ ಕೊಟ್ಟಿದೆ. ನೇತ್ರದಾನದ ಮಹತ್ವ ಹೆಚ್ಚಾಗಿದೆ. ಅಪ್ಪು ಕಣ್ಣು ಕೊಟ್ಟ ಮೇಲೆ ನೇತ್ರದಾನ ಮಾಡುವವ್ವರ್ ಸಂಖ್ಯೆ ಹೆಚ್ಚಾಗಿದೆ. 


[[{"fid":"225762","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಇದನ್ನೂ ಓದಿ : ತನ್ನ ಕಚೇರಿಗೆ ಇಂಥಹ ಬಟ್ಟೆ ತೊಟ್ಟು ವಿಚಿತ್ರವಾಗಿ ಆಗಮಿಸುವ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್


ಇಲ್ಲಿಯವರೆಗೆ 440 ಕಣ್ಣುಗಳು ದಾನ ಪಡೆದ್ದಿದ್ದೇವೆ. ನನಗೆ ಸುಮಾರು ಜನ ಕರೆ ಮಾಡಿ ನೇತ್ರದಾನದ ಮಾಡ್ತೀವಿ ಅಂತಾರೆ. ನಾವು ನೇತ್ರದಾನಕ್ಕೆ ಬ್ರಾಂಡ್ ಅಂಬಸಿಡರ್ ಆಗಬೇಕು. ಸಂಗ್ರಹ ಆಗೋ ಕಣ್ಣುಗಳು ವಿಶ್ವಕ್ಕೆ ಹಂಚಬಹುದು. ನಾವು ಯಾವತ್ತು ಹೋಗ್ತಿವಿ ಗೊತ್ತಿಲ್ಲ. ಕಣ್ಣುಗಳನ್ನ ದಾನ ಮಾಡೋದು ಪುಣ್ಯದ ಕೆಲಸ ಮಾಡಿದಂತಾಗುತ್ತದೆ ಎಂದು ಹೇಳಿದ್ದಾರೆ.


[[{"fid":"225763","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"2":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"2"}}]]


ನಂತರ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್(Raghavendra Rajkumar), ವೈದ್ಯೋ ನಾರಾಯಣೋ ಹರಿ ಅಂತಾರೆ. ನನ್ನ ತಮ್ಮನ ಕಣ್ಣು ಎಲ್ಲರನ್ನ ನೋಡ್ತಿದೆ. ಅಪ್ಪು ಎಲ್ಲೂ ಹೋಗಿಲ್ಲ. ಎರಡು ಕಣ್ಣುಗಳನ್ನ ಬಿಟ್ಟು ಹೋಗಿದ್ದಾರೆ. ಅಭಿಮಾನಿಗಳಿಗೆ ಕಣ್ಣು ನೀಡಿ ಹೋಗಿದ್ದಾರೆ. ವ್ಯಕ್ತಿ ಹೋದಮೇಲೂ ಈ ರೀತಿ ಆಗಬೇಕು. ನೇತ್ರದಾನದ ಅರಿವು ನಮಗಿರಬೇಕು. ಪುನೀತ್ ಹೋಗ್ತಾ ಬದಲಾವಣೆ ತಂದ್ರು. ಅಪ್ಪಾಜಿಯವರು ಯಾವಾಗಲೂ ನೇತ್ರದಾನ ಮಾಡೋಕೆ ಹೇಳ್ತಿದ್ರು ಎಂದು ಹೇಳಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.