ತನ್ನ ಕಚೇರಿಗೆ ಇಂಥಹ ಬಟ್ಟೆ ತೊಟ್ಟು ವಿಚಿತ್ರವಾಗಿ ಆಗಮಿಸುವ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್

ಜನರು ಕರಣ್ ಜೋಹರ್ ಅವರನ್ನು ತುಂಬಾ ವಿಚಿತ್ರವಾದ ಉಡುಪಿನಲ್ಲಿ ನೋಡಿದ್ದಾರೆ. ತಮ್ಮ ವಿಶಿಷ್ಟ ಶೈಲಿಯ ಮೂಲಕ ಅವರು ಜನಮನ ಸೆಳೆಯುತ್ತಿದ್ದಾರೆ.

Written by - Ranjitha R K | Last Updated : Dec 28, 2021, 04:06 PM IST
  • ಕರಣ್ ಜೋಹರ್ ಅವರ ವಿಚಿತ್ರ ಫ್ಯಾಷನ್
  • ಕರಣ್ ಪ್ಯಾರಾಚೂಟ್ ಹಾಕಿಕೊಂಡು ಆಫೀಸಿನಲ್ಲಿ ತಿರುಗಾಡುತ್ತಾನೆ
  • ವೀಡಿಯೊ ವೈರಲ್ ಆಯಿತು
ತನ್ನ ಕಚೇರಿಗೆ ಇಂಥಹ ಬಟ್ಟೆ ತೊಟ್ಟು ವಿಚಿತ್ರವಾಗಿ ಆಗಮಿಸುವ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್  title=
ಕರಣ್ ಜೋಹರ್ ಅವರ ವಿಚಿತ್ರ ಫ್ಯಾಷನ್ (file photo)

ನವದೆಹಲಿ : ಬಾಲಿವುಡ್ ನ ಖ್ಯಾತನಾಮರ ಪಟ್ಟಿಯಲ್ಲಿ ಕರಣ್ ಜೋಹರ್ ಗೂ (Karan Johar) ಸ್ಥಾನವಿದೆ. ಕರಣ್ ಜೋಹರ್ ತಮ್ಮ ಚಿತ್ರಗಳಿಗೆ ಎಷ್ಟು ಫೇಮಸ್ ಆಗಿದ್ದಾರೋ ಅಷ್ಟೇ ಸ್ಟೈಲ್ ಸೆನ್ಸ್ ಗೂ ಹೆಸರುವಾಸಿಯಾಗಿದ್ದಾರೆ. ಆದರೆ ಈ ಸ್ಟೈಲ್ ಸೆನ್ಸ್‌ನಿಂದಾಗಿ ಅನೇಕ ಬಾರಿ ಅವರು ಟ್ರೋಲ್ ಆಗುವುದೂ ಇದೆ. 

ಕರಣ್ ಜೋಹರ್ ಶೈಲಿ :
ಜನರು ಕರಣ್ ಜೋಹರ್ (Karan Johar)  ಅವರನ್ನು ತುಂಬಾ ವಿಚಿತ್ರವಾದ ಉಡುಪಿನಲ್ಲಿ ನೋಡಿದ್ದಾರೆ. ತಮ್ಮ ವಿಶಿಷ್ಟ ಶೈಲಿಯ ಮೂಲಕ ಅವರು ಜನಮನ ಸೆಳೆಯುತ್ತಿದ್ದಾರೆ. ವೀಡಿಯೊದಲ್ಲಿ ಕರಣ್ ಬಹಳ ಸೈಜ್ ನ ಉಡುಪನ್ನು ಧರಿಸಿರುವುದನ್ನು ಕಾಣಬಹುದು. ಕರಣ್ ಜೋಹರ್ ಈ ವಿಡಿಯೋವನ್ನು ಫರಾ ಖಾನ್ (Farah Khan) ತಮ್ಮ Instagram ಖಾತೆಯಿಂದ ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ : Aditi Prabhudeva: ಗುಟ್ಟಾಗಿ ಎಂಗೇಜ್​ಮೆಂಟ್ ಮಾಡಿಕೊಂಡ್ರಾ ನಟಿ ಅದಿತಿ ಪ್ರಭುದೇವ..?

ವಿಡಿಯೋ ಮಾಡಿರುವ ಫರಾ :
ವಿಡಿಯೋದಲ್ಲಿ ಕರಣ್ ತಮ್ಮ ಡ್ರೆಸ್ ಬಗ್ಗೆ ಹೇಳುತ್ತಿದ್ದಾರೆ. ವೀಡಿಯೊವನ್ನು ಶೇರ್ ಮಾಡಿಕೊಂಡಿರುವ  (Karan Johar Video) ಫರಾ ಈ ಡ್ರೆಸ್ ಓವರ್ ಸೈಜ್ಡ್ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಜಾನ್ವಿ ಕಪೂರ್ ಅವರನ್ನು ಕೂಡಾ ಈ ವಿಡಿಯೋದಲ್ಲಿ ಕಾಣಬಹುದಾಗಿದೆ.  ಕರಣ್ ಜೋಹರ್ ಈ ವಿಡಿಯೋ ಇದೀಗ ವೈರಲ್ (Viral video) ಆಗಿದೆ. ಜನ ಕೂಡಾ ವಿಡಿಯೋ ನೋಡಿ ಬಹಳ ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ. 

 

ಒಟ್ಟಿಗೆ ಸಿನಿಮಾ ಮಾಡುತ್ತಿರುವ ಫರಾ ಕರಣ್  : 
ಫರಾ ಮತ್ತು ಕರಣ್ ಅನೇಕ ವರ್ಷಗಳಿಂದ ಒಳ್ಳೆಯ ಸ್ನೇಹಿತರು. ಫರಾ ಆಗಾಗ ಕರಣ್ ಅವರ ಕಾಲು ಎಳೆಯುವುದನ್ನು ಕಾಣಬಹುದು. ಕೆಲವೊಮ್ಮೆ ಅವರು ತಮ್ಮ ಆಹಾರಕ್ರಮಗಳ ಬಗ್ಗೆ ಆಡಿಕೊಂಡರೆ ಇನ್ನು ಕೆಲವು ಬಾರಿ, ಕರಣ್  ಉಡುಗೆಯ ಬಗ್ಗೆ ಗೇಲಿ ಮಾಡುತ್ತಾರೆ. ಮಾಧ್ಯಮ ವರದಿಗಳ ಪ್ರಕಾರ, 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದಲ್ಲಿ ಜೊತೆಯಾಗಿ ಕೆಲಸ ಮಾಡಲಿದ್ದಾರೆ.  ಕರಣ್ ಜೋಹರ್ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದು, ನೃತ್ಯ ಸಂಯೋಜನೆ ಫರಾ ಅವರದ್ದಾಗಿದೆ. ಫರಾ ಚಿತ್ರದ ಸೆಟ್‌ಗಳಿಂದ ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ದೆಹಲಿಯಲ್ಲಿ ನಡೆದಿದೆ. ಆಲಿಯಾ ಭಟ್ (Alia Bhatt) ಮತ್ತು ರಣವೀರ್ ಸಿಂಗ್ (Ranveer Singh) ಅವರಲ್ಲದೆ, ಧರ್ಮೇಂದ್ರ ಮತ್ತು ಶಬಾನಾ ಅಜ್ಮಿ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಇದನ್ನೂ ಓದಿ : 56ನೇ ವಯಸ್ಸಿನಲ್ಲೂ ಕಟ್ಟುಮಸ್ತಾದ ದೇಹ ಹೊಂದಿರುವ ಸಲ್ಮಾನ್ ಖಾನ್.. ಇದೇ ಅವರ Fitness secret.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News