Vijay Deverakonda Donates Organs: ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರ ವ್ಯಕ್ತಿತ್ವ ಸಾಕಷ್ಟು ಜನರಿಗೆ ಪ್ರೇರಣೆಯಾಗುತ್ತಿದೆ. ಅಪ್ಪು ದಾರಿ ಹಿಡಿದಿರುವ ಅಭಿಮಾನಿಗಳು, ನಟ, ನಟಿಯರು ಅಂಗಾಂಗ ದಾನ ಸೇರಿದಂತೆ ಹಲವಾರು ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಸದ್ಯ ವಿಜಯ್‌ ದೇವರಕೊಂಡ ಅವರು ಅಂಗಾಂಗ ದಾನಕ್ಕೆ ಮುಂದಾಗಿದ್ದು, ಆರ್ಗನ್‌ ಡೊನೇಟ್‌ ಪತ್ರಗಳಿಗೆ ಸಹಿ ಹಾಕಿದ್ದಾರೆ. ವಿಜಯ್‌ ಈ ಕೆಲಸ ಅವರ ಅಭಿಮಾನಿಗಳಿಗೆ ಖುಷಿ ತಂದಿದೆ.


COMMERCIAL BREAK
SCROLL TO CONTINUE READING

ಹೌದು.. ಟಾಲಿವುಡ್‌ ಸ್ಟಾರ್‌ ನಟ ವಿಜಯ್‌ ದೇವರಕೊಂಡ ಬರೀ ತೆಲುಗು ಪ್ರೇಕ್ಷರಿಗಷ್ಟೇ ಅಲ್ಲ, ಕನ್ನಡಿಗರು ಸೇರಿದಂತೆ ಫ್ಯಾನ್‌ ಇಂಡಿಯಾ ಮಟ್ಟದಲ್ಲಿ ಅಭಿಮಾನಿ ಬಳಗ ಹೊಂದಿದ್ದಾರೆ. ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದ ವಿಜಯ್‌, ಸತ್ತ ನಂತರವೂ ಬದುಕಲು ನಾನು ಇಷ್ಟ ಪಡುತ್ತೇನೆ. ಅದಕ್ಕಾಗಿ ಅಂಗಾಂಗ ದಾನ ಮಾಡಲಿದ್ದೇನೆ. ಆರ್ಗನ್‌ ಡೊನೇಟ್‌ ದಾಖಲೆಗಳಿಗೆ ಸಹಿ ಹಾಕುವ ಕೆಲಸ ಈಗಾಗಲೇ ಮುಗಿದಿದೆ ಎಂದು ತಿಳಿಸಿದರು.


ಇದನ್ನೂ ಓದಿ: Heartbreaking video: ತಂದೆಯ ಅಂತ್ಯಕ್ರಿಯೆ ವೇಳೆ ಕಣ್ಣೀರು ಹಾಕಿದ ನಟ ಮಹೇಶ್ ಬಾಬು


ವಿಜಯ್‌ ಸೇರಿದಂತೆ ಹಲವಾರು ನಟರು ಇಂದು ಅಂಗಾಂಗ ದಾನ ಸೇರಿದಂತೆ ಹಲವಾರು ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಿರುವುದು ಎಲ್ಲೋ ಒಂದು ಕಡೆ ಇದಕ್ಕೆಲ್ಲ ಪುನೀತ್‌ ರಾಜಕುಮಾರ್‌ ಅವರ ಬದುಕು ಸ್ಪೂರ್ತಿಯಾಯಿತು ಅನಿಸುತ್ತದೆ. ಅಲ್ಲದೆ, ಪುನೀತ್‌ ಅಭಿಮಾನಿಗಳು ಸಹ ಸಾಕಷ್ಟು ಸಂಖ್ಯೆಯಲ್ಲಿ ಅಂಗಾಂಗದಾನ ಮುಂದಾಗಿದ್ದು ಇತಿಹಾಸ ಸೃಷ್ಟಿಸುವಂತಿತ್ತು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.


ಇನ್ನು ವಿಜಯ್‌ ಸಿನಿಮಾ ವಿಚಾರಕ್ಕೆ ಬರುವುದಾದರೆ, ಸ್ಟಾರ್‌ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನದಲ್ಲಿ ವಿಜಯ್ ದೇವರಕೊಂಡ ʼಲೈಗರ್ʼ ಸಿನಿಮಾದಲ್ಲಿ ನಟಿಸಿದ್ದರು. ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಗಿದೆ. ವಿಜಯ್ ಚಿತ್ರಕ್ಕಾಗಿ ಬಹಳಷ್ಟು ಶ್ರಮಿಸಿದ್ದರು ಅದ್ರೆ, ಸಿನಿಮಾದ ಕಥೆ ಜನರಿಗೆ ಇಷ್ಟವಾಗಲಿಲ್ಲ ಅನಿಸುತ್ತೆ. ಪ್ರಸ್ತುತ, ವಿಜಯ್ ದೇವರಕೊಂಡ ಸಮಂತಾ ಅವರೊಂದಿಗೆ ಮುಂಬರುವ ಖುಷಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗಲಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.