ತಲೈವಾ ರಜನಿಕಾಂತ್‌ ಕೊಟ್ಟಿದ್ದ ಗೋಲ್ಡನ್‌ ಗಿಫ್ಟ್ ರಿವೀಲ್‌ ಮಾಡಿದ ರಿಷಬ್‌ ಶೆಟ್ಟಿ

ದಿ ಡಿವೈನ್‌ ಬ್ಲಾಕ್ಬಸ್ಟರ್ ಸಿನಿಮಾ ʼಕಾಂತಾರʼ ದಾಖಲೆಗಳ ಮೇಲೆ ದಾಖಲೆ ಸೃಷ್ಟಿಸುತ್ತಿದೆ. ಭಾರತದ ದರ್ಶನ ಮಾಡಿರುವ ಕಾಂತಾರದ ಶಿವ, ಲೀಲಾ ಅಪಾರ ಪ್ರೀತಿಗೆ ಪಾತ್ರರಾಗಿದ್ದಾರೆ. ಅಲ್ಲದೆ, ಕಾಂತಾರ ಸಿನಿಮಾಗೆ ಪ್ರೇಕ್ಷಕ, ವಿಮರ್ಶಕರು ಸೇರಿದಂತೆ ನಟ, ನಟಿಯರು, ರಾಜಕೀಯ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಇತ್ತೀಚಿಗೆ ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರು ರಿಷಬ್‌ ಶೆಟ್ಟಿಯವರನ್ನು ಮನೆಗೆ ಕರೆಯಿಸಿ ಅಭಿನಂದನೆಗಳನ್ನು ತಿಳಿಸಿ ಗೋಲ್ಡನ್‌ ಚೈನ್‌ ಒಂದನ್ನು ಉಡುಗೂರೆಯಾಗಿ ನೀಡಿದ್ದರು. 

Written by - Krishna N K | Last Updated : Nov 16, 2022, 05:37 PM IST
  • ರಜನಿಕಾಂತ್‌ ಕೊಟ್ಟಿದ್ದ ಗೋಲ್ಡನ್‌ ಗಿಫ್ಟ್ ರಿವೀಲ್‌ ಮಾಡಿದ ರಿಷಬ್‌ ಶೆಟ್ಟಿ
  • ಕಾಂತಾರ ಸಿನಿಮಾ ಮೆಚ್ಚಿ ರಿಷಬ್‌ ಶೆಟ್ಟಿಯನ್ನು ಮೆನೆಗೆ ಕರೆಯಿಸಿದ್ದ ತಲೈವಾ
  • ರಜಿನಿ ಉಡುಗೂರೆಯಾಗಿ ನೀಡಿದ್ದ ಗೋಲ್ಡನ್‌ ಚೈನ್‌ ರಿವೀಲ್‌ ಮಾಡಿದ ರಿಷಬ್‌
ತಲೈವಾ ರಜನಿಕಾಂತ್‌ ಕೊಟ್ಟಿದ್ದ ಗೋಲ್ಡನ್‌ ಗಿಫ್ಟ್ ರಿವೀಲ್‌ ಮಾಡಿದ ರಿಷಬ್‌ ಶೆಟ್ಟಿ title=

ಬೆಂಗಳೂರು : ದಿ ಡಿವೈನ್‌ ಬ್ಲಾಕ್ಬಸ್ಟರ್ ಸಿನಿಮಾ ʼಕಾಂತಾರʼ ದಾಖಲೆಗಳ ಮೇಲೆ ದಾಖಲೆ ಸೃಷ್ಟಿಸುತ್ತಿದೆ. ಭಾರತದ ದರ್ಶನ ಮಾಡಿರುವ ಕಾಂತಾರದ ಶಿವ, ಲೀಲಾ ಅಪಾರ ಪ್ರೀತಿಗೆ ಪಾತ್ರರಾಗಿದ್ದಾರೆ. ಅಲ್ಲದೆ, ಕಾಂತಾರ ಸಿನಿಮಾಗೆ ಪ್ರೇಕ್ಷಕ, ವಿಮರ್ಶಕರು ಸೇರಿದಂತೆ ನಟ, ನಟಿಯರು, ರಾಜಕೀಯ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಇತ್ತೀಚಿಗೆ ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರು ರಿಷಬ್‌ ಶೆಟ್ಟಿಯವರನ್ನು ಮನೆಗೆ ಕರೆಯಿಸಿ ಅಭಿನಂದನೆಗಳನ್ನು ತಿಳಿಸಿ ಗೋಲ್ಡನ್‌ ಚೈನ್‌ ಒಂದನ್ನು ಉಡುಗೂರೆಯಾಗಿ ನೀಡಿದ್ದರು. 

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಾನ ಬಜಾನ 3 ರಲ್ಲಿ ಭಾಗವಹಿಸಿದ್ದ ಕಾಂತಾರ ಚಿತ್ರತಂಡ ಮೋಜು ಮಸ್ತಿ ಮಾಡಿದೆ. ಈ ವೇಳೆ ಆಂಕರ್‌ ಅಕುಲ್ ಬಾಲಾಜಿ ರಿಷಬ್‌ ಶೆಟ್ಟಿಗೆ ರಜನಿಕಾಂತ್‌ ಅವರನ್ನು ಭೇಟಿಯಾಗಿದ್ದ ಬಗ್ಗೆ ಕೇಳುತ್ತಾರೆ. ಆಗ ರಿಷಬ್‌ ಒಬ್ಬ ಸೂಪರ್‌ ಸ್ಟಾರ್‌ ಒಂದು ಸಿನಿಮಾ ನೋಡಿ ಮೆಚ್ಚಿ ಕಲಾವಿದರನ್ನು ಮನೆಗೆ ಕರೆಯಿಸಿ ಅಭಿನಂದನೆ ತಿಳಿಸುತ್ತಾರೆ ಅಂದ್ರೆ ಗ್ರೇಟ್‌ ಅಲ್ವಾ.. ತುಂಬಾ ಚನ್ನಾಗಿ ಮಾತನಾಡಿಸಿದ್ರು. ಮತ್ತೆ ಅವರ ಡೈಲಾಗ್‌ ಒಂದನ್ನು ಹೇಳ್ತೀನಿ ಅಂದಾಗ ತಮ್ಮದೆ ಶೈಲಿಯಲ್ಲಿ ನಕ್ಕರು ಎಂದು ತಲೈವಾ ನಗುವನ್ನು ರಿಷಬ್‌ ಇಮಿಟೇಟ್‌ ಮಾಡಿ ತೋರಿಸಿದ್ರು.

ಇದನ್ನೂ ಓದಿ: ನಟನೆಯಷ್ಟೇ ಅಲ್ಲ, ಕ್ರಿಕೆಟ್‌ನಲ್ಲೂ ಸೈ ʼಕಾಂತಾರʼ ಲೀಲಾ : ವಿಡಿಯೋ ನೋಡಿ..!

 

ಅಲ್ಲದೆ, ರಜನಿ ಅವರು ಗಿಫ್ಟ್‌ ಕೊಟ್ಟಿದ್ದಾಗಿ ತಿಳಿಸಿದ್ರು. ಇನ್ನು ರಿಷಬ್‌ ಮಾತಿಗೆ ನಿರೂಪಕ ಅಕುಲ್‌ ಬಾಲಾಜಿ.. ರಜನಿಕಾಂತ್‌ ಅವರನ್ನು ಭೇಟಿಯಾಗುವ ಅದೃಷ್ಟ ಇಲ್ಲ, ಕೊನೆಪಕ್ಷ ಅವರ ಕೊಟ್ಟ ಗಿಫ್ಟ್‌ ಆದ್ರೂ ತೋರಿಸಿ ನೋಡ್ತೀನಿ ಅಂತ ರಿಷಬ್‌ಗೆ ಹೇಳಿದ್ರು. ಆಗ ರಿಷಬ್‌ ಚೈನ್‌ ಅನ್ನು ತೋರಿಸಿದರು. ಅಕುಲ್‌ ವ್ಹಾ..ವ್‌ ರಜನಿ ಸಾರ್‌.. ಅಂತ ಚೈನ್‌ ಮುಟ್ಟಿ ಖುಷಿ ಪಟ್ಟರು.

ಇನ್ನು ಗಾನ ಬಜಾನ ಕಾರ್ಯಕ್ರಮದಲ್ಲಿ ಕಾಂತಾರ ಚಿತ್ರತಂಡ ಸಖತ್‌ ಎಂಜಾಯ್ಮೆಂಟ್ ಮಾಡಿತು. ಸಪ್ತಮಿಗೌಡ ಅಂತೂ ಕಾರ್ಯಕ್ರಮದ ಸೆಂಟರ್‌ ಆಟ್ರ್ಯಾಕ್ಷನ್‌ ಆಗಿದ್ದರು. ತಮ್ಮ ಮುಗ್ದತೆಯಿಂದಲೇ ಶೋನಲ್ಲಿ ಭಾಗವಹಿಸಿ ಅಭಿಮಾನಿಗಳನ್ನು ರಂಜಿಸಿದರು. ರಿಷಬ್‌ ಶೆಟ್ಟಿ ಸಪ್ತಮಿಯನ್ನು ಸಖತ್ತಾಗಿಯೇ ಕಾಡಿದ್ದಾರೆ. ಸಪ್ತಮಿ ಕೆಲ ಟಾಸ್ಕ್‌ನಲ್ಲಿ ಸೋತಾಗ ಮಾಡುತ್ತಿದ್ದ ಆಕ್ಷನ್‌ ಇವರಾ.. ಕಾಂತಾರದಲ್ಲಿ ಸೈಲೆಂಟ್‌ ಆಗಿದ್ದ ಲೀಲಾ ಅಂತ ಬಾಯಿ ತೆರೆದು ನೋಡುವಂತೆ ಇತ್ತು. ಒಟ್ಟಿನಲ್ಲಿ ಕಾಂತಾರ ಚಿತ್ರತಂಡದ ಉಪಸ್ಥಿತಿಯಲ್ಲಿ ಗಾನಬಜಾನ 3ರ ಮೊದಲ ಶೋ ಸೂಪರ್‌ ಎಂಟರ್ಟೈನ್‌ ಆಗಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News