ನವದೆಹಲಿ : ಟಾಲಿವುಡ್ ಸೂಪರ್ ಸ್ಟಾರ್ ನಟ ಪ್ರಭಾಸ್ (Prabhas) ತಮ್ಮ ಅಮೋಘ ನಟನೆಯ ಕಾರಣದಿಂದ ಇಡೀ ಜಗತ್ತಿನಲ್ಲಿ ಖ್ಯಾತಿ ಪಡೆದಿದ್ದಾರೆ. ತಮ್ಮ ನಟನೆಯಿಂದ ಲಕ್ಷಾಂತರ ಹೃದಯಗಳನ್ನುಗೆದ್ದಿರುವ ಪ್ರಭಾಸ್, ಬಾಹುಬಲಿ ಚಿತ್ರದಿಂದಾಗಿ (Bahubali) , ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ಇದೀಗ ಪ್ರಭಾಸ್ ದಕ್ಷಿಣದ ಹಾಲಿವುಡ್ ನಲ್ಲಿಯೂ ತಮ್ಮ ಛಾಪು ಮೂಡಿಸಲು ಹೊರಟಿದ್ದಾರೆ. ಶೀಘ್ರವೇ ಪ್ರಭಾಸ್ 'Mission Impossible 7' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.


COMMERCIAL BREAK
SCROLL TO CONTINUE READING

 ವರದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ : 
ಪ್ರಭಾಸ್ (Prabhas) ಶೀಘ್ರದಲ್ಲೇ ಹಾಲಿವುಡ್ ಚಿತ್ರ ಮಿಷನ್ ಇಂಪಾಸಿಬಲ್ 7 ನಲ್ಲಿ (Mission Impossible 7) ಕಾಣಿಸಿಕೊಳ್ಳಲಿದ್ದಾರೆ ಎಂಬ ಬಗ್ಗೆ ವರದಿಯಾಗಿದೆ. ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ (Social media) ಬಹಳ ವೈರಲ್ ಆಗುತ್ತಿದೆ. ಈ ಸುದ್ದಿಯಿಂದ ಪ್ರಭಾಸ್ ಅಭಿಮಾನಿಗಳು ಬಹಳ ಸಂತೋಷಗೊಂಡಿದ್ದಾರೆ. ಸೂಪರ್‌ಹಿಟ್ ಫ್ರ್ಯಾಂಚೈಸ್ 'ಮಿಷನ್ ಇಂಪಾಸಿಬಲ್' ನ ಎರಡು ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ಕ್ರಿಸ್ಟೋಫರ್ ಮೆಕ್‌ಕ್ವಾರಿ, (Christopher Mcquarrie) ಚಿತ್ರದ 7ನೇ ಪಾರ್ಟ್ ಗಾಗಿ ಪ್ರಭಾಸ್ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಚಿತ್ರದಲ್ಲಿ  ಪ್ರಭಾಸ್ ಅವರಿಗೆ ಪ್ರಮುಖ ಪಾತ್ರ ಸಿಗಲಿದೆ ಎನ್ನಲಾಗಿದೆ. 


ಇದನ್ನೂ ಓದಿ : Priyanka Chopra: ಯಶಸ್ವೀ ವಿವಾಹದ ರಹಸ್ಯ ಬಹಿರಂಗಪಡಿಸಿದ ದೇಸಿ ಗರ್ಲ್


ಸುದ್ದಿಯ ಪ್ರಕಾರ, ಕ್ರಿಸ್ಟೋಫರ್ ಮ್ಯಾಕ್ವಾರಿ ಮತ್ತು ಪ್ರಭಾಸ್ ಇಬ್ಬರೂ ಚಿತ್ರದ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಸುದ್ದಿಯ ಬಗ್ಗೆ ಎರಡೂ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ  ಲಭ್ಯವಾಗಿಲ್ಲ. ಆದರೆ ಈ ಸುದ್ದಿಯಿಂದ ಪ್ರಭಾಸ್ ಅಭಿಮಾನಿಗಳು (Prabhas fans) ಸಂತೋಷಗೊಂಡಿದ್ದಾರೆ.


ಇದನ್ನೂ ಓದಿ : BM Krishne Gowda : ಮತ್ತೊಬ್ಬ ಸ್ಯಾಂಡಲ್ ವುಡ್ ಹಿರಿಯ ನಟನನ್ನ ಬಲಿ ಪಡೆದ ಕೊರೋನಾ! 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.