KL Rahul- ಕೆ.ಎಲ್.ರಾಹುಲ್ ಫಿಟ್ನೆಸ್ ಕಂಡು ಫಿದಾ ಆದ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ

ಮುಂದಿನ ತಿಂಗಳಿನಿಂದ ಬ್ರಿಟನ್ ನೆಲದಲ್ಲಿ ಪ್ರಾರಂಭವಾಗುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಕೆ.ಎಲ್. ರಾಹುಲ್ ತರಬೇತಿಯಲ್ಲಿ ನಿರತರಾಗಿದ್ದಾರೆ.

Written by - Yashaswini V | Last Updated : May 26, 2021, 02:25 PM IST
  • ರಾಹುಲ್ ಮತ್ತು ಅಥಿಯಾ ಬಹಳ ಸಮಯದಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಗಾಳಿ ಸುದ್ದಿ ಹರಿದಾಡುತ್ತಿದೆ
  • ಅಥಿಯಾ ಶೆಟ್ಟಿ ರಾಹುಲ್ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದಾರೆ
  • ಟೀಮ್ ಇಂಡಿಯಾ ಜೂನ್ 2 ರಂದು ಇಂಗ್ಲೆಂಡ್‌ಗೆ ತೆರಳಲಿದೆ
KL Rahul- ಕೆ.ಎಲ್.ರಾಹುಲ್ ಫಿಟ್ನೆಸ್ ಕಂಡು ಫಿದಾ ಆದ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ title=
KL Rahul Athiya Shetty (Pic Courtesy: Instagram)

ನವದೆಹಲಿ: ಅಪೆಂಡಿಕ್ಸ್ ಆಪರೇಷನ್ ನಂತರ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಈಗ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ. ಕೆಎಲ್ ರಾಹುಲ್ ಮುಂದಿನ ತಿಂಗಳಿನಿಂದ ಬ್ರಿಟಿಷ್ ನೆಲದಲ್ಲಿ ಪ್ರಾರಂಭವಾಗುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಾಗಿ ಮತ್ತು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ತರಬೇತಿಯಲ್ಲಿ ನಿರತರಾಗಿದ್ದಾರೆ. ತಮ್ಮ ಅತ್ಯುತ್ತಮ ಬ್ಯಾಟಿಂಗ್ ನಿಂದಾಗಿ ಕ್ರಿಕೆಟ್ ಮೈದಾನದಲ್ಲಿ ರಾಹುಲ್ ಎಷ್ಟು ಹಿಟ್ ಗಳಿಸಿದ್ದಾರೋ, ಅವರು ಮೈದಾನದ ಹೊರಗೂ ಕೂಡ ಅಷ್ಟೇ ಚರ್ಚೆಯಲ್ಲಿದ್ದಾರೆ.

ರಾಹುಲ್ ಮತ್ತು ಅಥಿಯಾ ರಿಲೇಶನ್‌ಶಿಪ್‌:
ಮಾಹಿತಿಯ ಪ್ರಕಾರ, ಕೆ.ಎಲ್. ರಾಹುಲ್ ಬಾಲಿವುಡ್ ನ ಹಿರಿಯ ನಟ ಸುನಿಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ಜೊತೆ ಬಹಳ ಸಮಯದಿಂದ ರಿಲೇಶನ್‌ಶಿಪ್‌ನಲ್ಲಿದ್ದಾರೆ.  ರಾಹುಲ್ ಮತ್ತು ಅಥಿಯಾ ಬಹಳ ಸಮಯದಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಗಾಳಿ ಸುದ್ದಿ ಹರಿದಾಡುತ್ತಿದೆ. ಈ ಮಧ್ಯೆ ಕೆ.ಎಲ್. ರಾಹುಲ್ (KL Rahul) ತಮ್ಮ ತಾಲೀಮು ವೀಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ, ಅದರಲ್ಲಿ ಅಥಿಯಾ ಶೆಟ್ಟಿ ಅವರ ಕಾಮೆಂಟ್ ಎಲ್ಲರ ಗಮನ ಸೆಳೆದಿದೆ.

 
 
 
 

 
 
 
 
 
 
 
 
 
 
 

A post shared by KL Rahul👑 (@rahulkl)

ಇದನ್ನೂ ಓದಿ - Virat-Anushka: ಚಿಕಿತ್ಸೆಗಾಗಿ 16 ಕೋಟಿ ಒದಗಿಸಿ ಮುಗ್ಧ ಮಗುವಿನ ಜೀವ ಉಳಿಸಿದ ವಿರುಷ್ಕಾ ದಂಪತಿ

ಅಥಿಯಾ ಶೆಟ್ಟಿ ಕಾಮೆಂಟ್ :
ಕೆ.ಎಲ್.ರಾಹುಲ್ ತಮ್ಮ ಫೋಟೋ ಹಂಚಿಕೊಂಡು 'ಅಂಡ್ ಸ್ಟಿಲ್ ವಿ ರೈಸ್' (And still, we rise) ಎಂದು ಬರೆದಿದ್ದಾರೆ. ರಾಹುಲ್ ಅವರ ಈ ಫೋಟೋಗೆ ಸುನೀಲ್ ಶೆಟ್ಟಿ ಅವರ ಪುತ್ರಿ ನಟಿ ಅಥಿಯಾ ಶೆಟ್ಟಿ ಪ್ರತಿಕ್ರಿಯಿಸಿದ್ದು, ಇದು ಸಾಕಷ್ಟು ಮುಖ್ಯಾಂಶಗಳನ್ನು ರೂಪಿಸುತ್ತಿದೆ. ಅಥಿಯಾ ಶೆಟ್ಟಿ ಸ್ಮೈಲ್‌ನ ಎಮೋಜಿಯೊಂದಿಗೆ ಇದರಲ್ಲಿ ಪ್ರತಿಕ್ರಿಯಿಸಿದ್ದಾರೆ.

ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆ.ಎಲ್.ರಾಹುಲ್ ನಡುವಿನ ಸಂಬಂಧದ ಸುದ್ದಿ ಬಹಳ ದಿನಗಳಿಂದ ಚರ್ಚೆಯಲ್ಲಿದೆ. ಅಥಿಯಾ ಶೆಟ್ಟಿ ಮತ್ತು ಕೆ.ಎಲ್.ರಾಹುಲ್ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡದಿದ್ದರೂ ಅವರು ಸೋಷಿಯಲ್ ಮೀಡಿಯಾದಲ್ಲಿ (Social Media) ಪರಸ್ಪರರ ಪೋಸ್ಟ್‌ಗಳ ಬಗ್ಗೆ ಪ್ರತಿಕ್ರಿಯಿಸುತ್ತಲೇ ಇರುತ್ತಾರೆ. 

ಇದನ್ನೂ ಓದಿ -  IPL 2021: ಈ ದಿನಾಂಕದಿಂದ UAEಯಲ್ಲಿ IPL ಆರಂಭ! ಫೈನಲ್ ಡೇಟ್ ಕೂಡ ಫಿಕ್ಸ್ !

ಟೀಮ್ ಇಂಡಿಯಾ ಜೂನ್ 2 ರಂದು ಇಂಗ್ಲೆಂಡ್‌ಗೆ ತೆರಳಲಿದೆ:
ಟೀಮ್ ಇಂಡಿಯಾ ಜೂನ್ 2 ರಂದು ಇಂಗ್ಲೆಂಡ್‌ಗೆ ತೆರಳಲಿದೆ. ಟೀಮ್ ಇಂಡಿಯಾ ಇಂಗ್ಲೆಂಡ್ ತಲುಪಲಿದ ಬಳಿಕ 10 ದಿನಗಳ ಕ್ವಾರಂಟೈನ್‌ನಲ್ಲಿ ಇರಲಿದೆ. ನಂತರ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯವು ಜೂನ್ 18 ರಂದು ಸೌತಾಂಪ್ಟನ್‌ನಲ್ಲಿ ನಡೆಯಲಿದೆ. ಕೆ.ಎಲ್. ರಾಹುಲ್ 36 ಟೆಸ್ಟ್ ಪಂದ್ಯಗಳಲ್ಲಿ  5 ಶತಕ ಮತ್ತು 11 ಅರ್ಧಶತಕಗಳ ಸಹಾಯದಿಂದ 2006 ರನ್ ಗಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News