ನಾಳೆಯಿಂದ ದೇಶಾದ್ಯಂತ ಥೇಟರ್ ನಲ್ಲಿ `ಯುವರತ್ನ`ನ ಪವರ್ ಪ್ಲೇ ಶುರು
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಯುವರತ್ನ ಸಿನಿಮಾ ನಾಳೆಯಿಂದ ( ಎಪ್ರಿಲ್ ೧) ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ದೇಶಾದ್ಯಂತ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಯುವರತ್ನ ಸಿನಿಮಾ ನಾಳೆಯಿಂದ( ಎಪ್ರಿಲ್ ೧) ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ದೇಶಾದ್ಯಂತ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಯುಟ್ಯೂಬ್ ನಲ್ಲಿ ಸೌಂಡ್ ಮಾಡುತ್ತಿದೆ ಯುವರತ್ನನ 'ಪವರ್ ಆಫ್ ಯೂತ್' ಸಾಂಗ್..!
ಈಗಾಗಲೇ ತನ್ನ ಟ್ರೈಲರ್ ಹಾಗೂ ಪ್ರೊಮೊದಿಂದ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.ಈಗಾಗಲೇ ಆನ್ಲೈನ್ ನಲ್ಲಿ ಮೊದಲ ದಿನದ ಎಲ್ಲಾ ಶೋಗಳು ಬುಕ್ ಆಗಿದ್ದು, ಆಭಿಮಾನಿಗಳ ಕ್ರೇಜ್ ಅಂತೂ ತೀವ್ರಗೊಂಡಿದೆ.
WATCH:'ಊರಿಗೊಬ್ಬ ರಾಜಾ' ಎನ್ನುತಾ ಬಂದ ಯುವರತ್ನ...!
ಟ್ರೈಲರ್ ನಲ್ಲಿ ನೋಡಿರುವಂತೆ ಕಾಲೇಜಿನ ವಿದ್ಯಾರ್ಥಿಯಾಗಿ ಕಾಣಿಸಿಕೊಳ್ಳುವ ಪುನೀತ್ ರಾಜ್ ಕುಮಾರ್ (Puneeth Rajkumar) ನಂತರ ಅದೇ ಕಾಲೇಜಿನ ಉದ್ಯೋಗಿಯಾಗಿ ಪರಿವರ್ತನೆಯಾಗುವ ಪರಿ ಕಥೆಗೆ ರೋಚಕ ತಿರುವನ್ನು ನೀಡುತ್ತದೆ.ಈ ಟ್ರೈಲರ್ ಮುಖ್ಯವಾಗಿ ಎಲ್ಲಾ ಅಂಶಗಳನ್ನು ಮೇಳೈಸಿದ ಸಿನಿಮಾ ಎನ್ನುವುದನ್ನು ಸಾರುತ್ತದೆ. ವಿಶೇಷವಾಗಿ ಕಮರ್ಸಿಯಲ್ ಟಚ್ ಮೂಲಕ ಸಾಮಾಜಿಕ ಸಂದೇಶವನ್ನು ನೀಡುವುದನ್ನು ಸೂಚ್ಯವಾಗಿ ಸಾರುತ್ತದೆ.
ಇದನ್ನೂ ಓದಿ: ಕೊನೆಗೂ ಪುನೀತ್ ರಾಜಕುಮಾರ್ ಅಭಿನಯದ 'ಯುವರತ್ನ' ಬಿಡುಗಡೆ ದಿನಾಂಕ ಫಿಕ್ಸ್....!
ಈ ಚಿತ್ರದ ಟ್ರೈಲರ್ ನ ವಿಶೇಷತೆ ಎಂದರೆ ಡೈಲಾಗ್ ಜೊತೆಗೆ ಬರುವ ಆಕ್ಷನ್ ಸಿನ್ ಗಳು ಅಭಿಮಾನಿಗಳನ್ನು ಸಿಳ್ಳೆ ಹೊಡೆಯುವಂತೆ ಮಾಡುತ್ತವೆ.ಈಗ ಸಾಮಾಜಿಕ ಮಾಧ್ಯಮದಲ್ಲಿ ಈ ಚಿತ್ರದ ಟ್ರೈಲರ್ ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ.ಬಾಲಿವುಡ್ ನಟ ಸಂಜಯ್ ದತ್ ಸೇರಿದಂತೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ.ಒಟ್ಟಿನಲ್ಲಿ ನಮ್ಮ ಕನ್ನಡ ಸಿನಿಮಾಗಳು ಕೂಡ ಈಗ ದೇಶಾದ್ಯಂತ ಹವಾ ಸೃಷ್ಟಿಸಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ಹೇಳಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.