ಯುಟ್ಯೂಬ್ ನಲ್ಲಿ ಸೌಂಡ್ ಮಾಡುತ್ತಿದೆ ಯುವರತ್ನನ 'ಪವರ್ ಆಫ್ ಯೂತ್' ಸಾಂಗ್..!

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾದ ಲಿರಿಕಲ್ ಸಾಂಗ್ ಈಗ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಿದೆ.ವಿಶೇಷವೆಂದರೆ ಪುನೀತ್ ರಾಜಕುಮಾರ್ ಅವರ ಚಿತ್ರ ಎರಡನೇ ಬಾರಿಗೆ ತೆಲುಗಿಗೆ ಲಗ್ಗೆ ಇಡುತ್ತಿದೆ, ಇದಕ್ಕೂ ಮೊದಲು ಅವರ ಜಾಕಿ ಸಿನಿಮಾ ತೆಲುಗಿನಲ್ಲಿ ಬಿಡುಗಡೆಯಾಗಿತ್ತು.

Last Updated : Dec 2, 2020, 03:48 PM IST
ಯುಟ್ಯೂಬ್ ನಲ್ಲಿ ಸೌಂಡ್ ಮಾಡುತ್ತಿದೆ ಯುವರತ್ನನ 'ಪವರ್ ಆಫ್ ಯೂತ್' ಸಾಂಗ್..!  title=
Photo Courtesy: Twitter

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾದ ಲಿರಿಕಲ್ ಸಾಂಗ್ ಈಗ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಿದೆ.ವಿಶೇಷವೆಂದರೆ ಪುನೀತ್ ರಾಜಕುಮಾರ್ ಅವರ ಚಿತ್ರ ಎರಡನೇ ಬಾರಿಗೆ ತೆಲುಗಿಗೆ ಲಗ್ಗೆ ಇಡುತ್ತಿದೆ, ಇದಕ್ಕೂ ಮೊದಲು ಅವರ ಜಾಕಿ ಸಿನಿಮಾ ತೆಲುಗಿನಲ್ಲಿ ಬಿಡುಗಡೆಯಾಗಿತ್ತು.

ಇದನ್ನೂ ಓದಿ: ಪವರ್ ಸ್ಟಾರ್ ಫ್ಯಾನ್ಸ್ ಗೆ ' ಗುಡ್ ನ್ಯೂಸ್': ಆರಂಭವಾಯ್ತು 'ಯುವರತ್ನ'ನ ಆರ್ಭಟ!

ಪವರ್ ಆಫ್ ಯೂತ್ ಎನ್ನುವ ಸಾಂಗ್ ಗೆ ಅಭಿಮಾನಿ ದೇವರು ಫುಲ್ ಫಿಧಾ ಆಗಿದ್ದಾನೆ.ಈ ಸಾಂಗ್ ಯುಟ್ಯೂಬ್ ನಲ್ಲಿ  ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ 1 ಲಕ್ಷ 25 ಸಾವಿರ ವಿಕ್ಷಣೆಯನ್ನು ಕಂಡಿದೆ.ಸೂಪರ್ ಹಿಟ್ ಚಿತ್ರ ರಾಜಕುಮಾರ ನಂತರ ಎರಡನೇ ಬಾರಿಗೆ ನಿರ್ದೇಶಕ, ನಟ ಮತ್ತು ನಿರ್ಮಾಪಕರನ್ನು ಈ ಚಿತ್ರ ಮತ್ತೆ ಒಗ್ಗೂಡಿಸಿದೆ. ಈ ಹಿಂದೆ ಕೆಜಿಎಫ್ ಅನ್ನು ಪ್ಯಾನ್-ಇಂಡಿಯಾ ಮಟ್ಟಕ್ಕೆ ಕೊಂಡೊಯ್ದ ವಿಜಯ್ ಕಿರಗಂದೂರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.ಈ ಚಿತ್ರವು ಪ್ರಸ್ತುತ ನಿರ್ಮಾಣದ ನಂತರದ ಹಂತದಲ್ಲಿದೆ. 

ಸಂಗೀತ ನಿರ್ದೇಶಕ ತಮನ್ 'ಪವರ್ ಆಫ್ ಯೂತ್' ಹಾಡಿಗೆ ಟ್ಯೂನ್ ನ್ನು ಸಂಯೋಜಿಸಿದ್ದಾರೆ.ಸಾಹಿತ್ಯವನ್ನು ರಾಮ್‌ಜೋಗಯ್ಯ ಶಾಸ್ತ್ರಿ ಬರೆದಿದ್ದಾರೆ ಮತ್ತು ಹಾಡನ್ನು ನಕಾಶ್ ಅಜೀಜ್ ಹಾಡಿದ್ದಾರೆ. ವೆಂಕಟೇಶ್ ಅಂಗುರಾಜ್ ಅವರು ಈ ಚಿತ್ರಕ್ಕಾಗಿ ಛಾಯಾಗ್ರಹಣ ಮಾಡಿದ್ದಾರೆ.ಇನ್ನು ಈ ಯುವರತ್ನ ಚಿತ್ರದ ನಾಯಕಿ ಸಯೇಶಾ ಅವರು ಸ್ಯಾಂಡಲ್ ವುಡ್ ಗೆ ಮೊದಲ ಬಾರಿಗೆ ಎಂಟ್ರಿಕೊಟ್ಟಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ನೂತನ ದಾಖಲೆ ಸೃಷ್ಟಿಸಿದ ಪುನೀತ್ ರಾಜ್ ಕುಮಾರ್ ಬ್ಯಾನರ್ ನ ಈ ಸಿನಿಮಾ

ಈ ಚಿತ್ರದಲ್ಲಿ ಖಳನಾಯಕನಾಗಿ ಧನಂಜಯ್ ಎದುರಾಳಿಯಾಗಿ ಕಾಣಿಸಿಕೊಂಡಿದ್ದು, ದಿಗಂತ್, ಸೋನು ಗೌಡ ಮತ್ತು ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಮುಂದಿನ ವರ್ಷದ ಆರಂಭದಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. ಆದರೆ, ಇದುವರೆಗೂ ಯಾವುದೇ ಅಧಿಕೃತ ಧೃಡಿಕರಣ ಬಂದಿಲ್ಲ.

Trending News