ಬೆಂಗಳೂರು: 'ತೂತು ಮಡಿಕೆ' ಸಿನಿಮಾ ಟೈಟಲ್‌ ಮೂಲಕ ಕನ್ನಡಿಗರ ಗಮನ ಸೆಳೆದಿತ್ತು. ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಟೈಟಲ್‌ ಅಡಿ, ಟ್ರೆಂಡಿಂಗ್‌ ಕಥೆಗಳನ್ನ ಹಿಡಿದು ಬರುವ ಹೊಸಬರ ತಂಡಗಳು ಸಾಕಷ್ಟು ಯಶಸ್ಸು ಗಳಿಸುತ್ತಿದ್ದು, ಸದ್ಯ 'ತೂತು ಮಡಿಕೆ' ಕೂಡ ಅದೇ ರೀತಿ ಗಮನ ಸೆಳೆಯುತ್ತಿದೆ. ಪೋಸ್ಟರ್, ಟ್ರೇಲರ್ ಸಾಂಗ್ಸ್ ಮೂಲಕ ನಿರೀಕ್ಷೆಗಳ ಭಾರ ಹೊತ್ತಿದ್ದ 'ತೂತು ಮಡಿಕೆ' ರಾಜ್ಯಾದ್ಯಂತ 80 ಥಿಯೇಟರ್‌ಗಳಲ್ಲಿ ಜುಲೈ 8ರಂದು ರಿಲೀಸ್‌ ಆಗಲಿದೆ.


COMMERCIAL BREAK
SCROLL TO CONTINUE READING

ರಂಗಭೂಮಿ ಕಲಾವಿದ ಚಂದ್ರಕೀರ್ತಿ ಅವರು ಇದೀಗ 'ತೂತು ಮಡಿಕೆ' ಸಿನಿಮಾ ಮೂಲಕ ಫುಲ್‌ ಟೈಂ ಡೈರೆಕ್ಟರ್‌ ಪಟ್ಟ ಗಿಟ್ಟಿಸಿಕೊಳ್ಳುತ್ತಿದ್ದಾರೆ.ಇದರ ಜೊತೆಗೆ ಹೀರೋ ಆಗಿಯೂ ಪ್ರೇಕ್ಷಕರ ಮುಂದೆ ಹಾಜರಾಗಲಿದ್ದಾರೆ ರಂಗಭೂಮಿ ಕಲಾವಿದ ಚಂದ್ರಕೀರ್ತಿ. ಸಿನಿಮಾ ಬಿಡುಗಡೆಗೆ ಕೌಂಟ್‌ಡೌನ್ ಶುರುವಾಗಿದ್ದು, 'ತೂತು ಮಡಿಕೆ' ತಂಡದಿಂದ ಪ್ರಚಾರ ಕಾರ್ಯ ಸದ್ಯ ರಾಜ್ಯಾದ್ಯಂತ ಭರ್ಜರಿಯಾಗಿ ಸಾಗಿದೆ.ಮೊಟ್ಟೆಯನ್ನು ಈ ರೀತಿ ಬಳಸಿದರೆ ಕೆಲವೇ ದಿನಗಳಲ್ಲಿ ನಿಮ್ಮದಾಗಲಿದೆ ಉದ್ದನೆಯ ಕೇಶ ಕಾಂತಿ


ಸಖತ್‌ ಸ್ಟಾರ್ಸ್..!‌


ಅಷ್ಟಕ್ಕೂ 'ತೂತು ಮಡಿಕೆ' ಬರೀ ಹೊಸಬರಿಂದ ಮೂಡಿ ಬರುತ್ತಿಲ್ಲ. ತಂಡ ಹೊಸಬರದ್ದೇ ಆಗಿದ್ರೂ ಹಿರಿಯ ಹಾಗೂ ಸ್ಟಾರ್‌ ನಟರು ಸಾಥ್‌ ನೀಡಿದ್ದಾರೆ‌.'ತೂತು ಮಡಿಕೆ' ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ಚಂದ್ರಕೀರ್ತಿ ಅವರೇ ಬರೆದಿದ್ದಾರೆ. ಚಂದ್ರಕೀರ್ತಿಗೆ ಜೋಡಿಯಾಗಿ ಗೊಂಬೆಗಳ ಲವ್ ಖ್ಯಾತಿಯ ಪಾವನಾ ನಾಯಕಿಯಾಗಿ ನಟಿಸಿದ್ದಾರೆ. ಪ್ರಮೋದ್ ಶೆಟ್ಟಿ, ಉಗ್ರಂ ಮಂಜು, ಗಿರೀಶ್ ಶಿವಣ್ಣ, ಶಂಕರ್ ಅಶ್ವತ್ಥ್, ಸಿತಾರಾ ನರೇಶ್ ಭಟ್ ತಾರಾಬಳಗ  'ತೂತು ಮಡಿಕೆ' ಸಿನಿಮಾದಲ್ಲಿದೆ.


ನಿರ್ಮಾಪಕ ಶಿವಕುಮಾರ್‌ ಹೊಸಬರಿಗೆ ಸಾಥ್‌ ಕೊಟ್ಟಿದ್ದಾರೆ. ಸರ್ವತ ಸಿನಿ ಗ್ಯಾರೇಜ್ & ಸ್ಪ್ರೆಡಾನ್ ಸ್ಟುಡಿಯೋ ನಿರ್ಮಾಣ ಮಾಡುತ್ತಿದೆ. ಮಧುಸೂದನ್ ಮತ್ತು ಗಿರಿಬಸವ ಪ್ರೊಡಕ್ಷನ್ಸ್ ಬಂಡವಾಳ ಹೂಡಿದ್ದಾರೆ. ನವೀನ್ ಚಲ್ಲ ಛಾಯಾಗ್ರಾಹಣ, ಉಜ್ವಲ್ ಚಂದ್ರ ಸಂಕಲನ 'ತೂತು ಮಡಿಕೆ' ಸಿನಿಮಾಗೆ ಇದೆ. ಒಟ್ಟಾರೆ ಹೇಳೋದಾದ್ರೆ 'ತೂತು ಮಡಿಕೆ' ಸಿನಿಮಾ ಹಲವು ವಿಶೇಷತೆಗಳ ಮೂಲಕ ತೆರೆಗೆ ಬರಲು ಸಜ್ಜಾಗಿದ್ದು, ಜುಲೈ 8ಕ್ಕೆ ಕನ್ನಡಿಗರು ಹೊಸಬರ ಹೊಸ ಪ್ರಯತ್ನವನ್ನ ಕಣ್ತುಂಬಿಕೊಳ್ಳಬಹುದು. ದಿನದಿಂದ ದಿನಕ್ಕೆ ಸಿನಿಮಾ ಮೇಲಿನ ಕುತೂಹಲ ಕೂಡ ದುಪ್ಪಟ್ಟಾಗುತ್ತಿದೆ. ನಿರೀಕ್ಷೆಗಳ ಭಾರದ ಜೊತೆಗೆ ಸಿನಿಮಾ ತಂಡ ತುಂಬಾ ಡಿಫರೆಂಟ್‌ ಆಗಿ ಪ್ರಮೋಷನ್‌ ಮಾಡುತ್ತಿದೆ.


ಇದನ್ನೂ ಓದಿ-ಈ ಒಂದು ವಸ್ತುವನ್ನು ಸೇವಿಸಿದರೆ ಶುಗರ್ ಲೆವೆಲ್ ಕ್ಷಣ ಮಾತ್ರದಲ್ಲಿ ಕಡಿಮೆಯಾಗುತ್ತದೆ ..!


ಒಟ್ಟಾರೆ ಹೇಳೋದಾದ್ರೆ 'ತೂತು ಮಡಿಕೆ' ತಂಡ ಡಿಫರೆಂಟ್‌ ಸಿನಿಮಾ ಸ್ಕ್ರೀನ್‌ ಮೇಲೆ ತರಲು ಸಜ್ಜಾಗಿದ್ದು, ಇನ್ನೇನು ಜುಲೈ 8ಕ್ಕೆ ಚಿತ್ರ ಕಣ್ತುಂಬಿಕೊಳ್ಳಲು ಕನ್ನಡಿಗರು ಕಾಯುತ್ತಿದ್ದಾರೆ.ಸ್ಯಾಂಡಲ್‌ವುಡ್‌ನಲ್ಲಿ ಡಿಫರೆಂಟ್‌ ಸಿನಿಮಾಗಳ ಅಬ್ಬರ ಜೋರಾಗಿದ್ದು, ಹೊಸ ಪ್ರಯತ್ನಗಳಿಗೆ ಪ್ರೇಕ್ಷಕ ಪ್ರಭು ಕೂಡ ಬೆನ್ನುತಟ್ಟಿ ಪ್ರೋತ್ಸಾಹ ನೀಡುತ್ತಿದ್ದಾನೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ