ನವದೆಹಲಿ: ಸಲ್ಮಾನ್ ಖಾನ್ ಅವರ 'ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್' ಚಿತ್ರದ ಬಹುನಿರೀಕ್ಷಿತ ಟ್ರೈಲರ್ ಬಿಡುಗಡೆಯಾಗಿದೆ. 


COMMERCIAL BREAK
SCROLL TO CONTINUE READING

ಈ ಚಿತ್ರದಲ್ಲಿ ಸಲ್ಲು(Salman Khan) ಭಾಯ್ ಪೋಲೀಸ್ ಪಾತ್ರದಲ್ಲಿ ಮಿಂಚಿದ್ದಾರೆ. ಟ್ರೈಲರ್ ನೋಡಿದ್ರೆ ಸಿನಿಮಾ ಮಾಸ್ ಡೈಲಾಗ್ ಅಂಡ್ ಫುಲ್ ಆಕ್ಷನ್ ಇದೆ. ಸಲ್ಲು ಅಭಿಮಾನಿಗಳು ಈ ಸಿನಿಮಾ ನೋಡಲು ತುದಿಗಾಲಿನಲ್ಲಿ ನಿಂತಿದ್ದಾರೆ.


ಇದನ್ನೂ ಓದಿ : Dance Deewane ನಿರೂಪಕ ರಾಘವ್ ಜುಯಲ್ ಗೆ ಕರೋನಾ ದೃಢ


ಸಲ್ಮಾನ್ ಖಾನ್ ತಮ್ಮ ಅಧಿಕೃತ ಟ್ವಿಟ್ಟರ್ ನಲ್ಲಿ  ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್ ಟ್ರೈಲರ್(Radhe Your Most Wanted Bhai) ಅನ್ನು ಶೇರ್ ಮಾಡಿದ್ದಾರೆ. '


Sameera Reddy: ವರದನಾಯಕ ಬೆಡಗಿ ಸಮೀರಾ ರೆಡ್ಡಿಗೆ ಕೊರೋನಾ ಪಾಸಿಟಿವ್.!


ಟ್ರೈಲರ್(Radhe Film Trailer) ನಲ್ಲಿ ಸಲ್ಮಾನ್ ಖಾನ್ ಆಕ್ಷನ್, ಡ್ರಾಮಾ ತುಂಬಾ ಸಖತ್ ಆಗಿ ಮೂಡಿ ಬಂದಿದೆ. ಕುತೂಹಲದಿಂದ ಕಾಯುತ್ತಿರುವ ಎಲ್ಲ ಅಭಿಮಾನಿಗಳಿಗೆ ಟ್ರೈಲರ್ ನೋಡಿದ ಮೇಲೆ ಮತ್ತಷ್ಟು ಕುತೂಹಲ ಹೆಚ್ಚಿಸುತ್ತದೆ. ಈ ಸಿನಿಮಾದಲ್ಲಿ ದಿಶಾ ಪಟಾನಿ(Disha Patani)ಯ ಅಸಿಬಿಸಿ ದೃಶ್ಯಗಳು ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಅವರ ವಿಶೇಷ ಡಾನ್ಸ್, ಅಲ್ಲದೆ ಜಾಕಿ ಶ್ರಾಫ್ ಕೂಡ ನಟಿಸಿದ್ದಾರೆ.


ರಂಜಾನ್ ಸಭೆಗೆ ನಿಷೇಧ ಹೇರಬೇಕೆಂದು ಹೇಳಿ ಟ್ವೀಟ್ ಡಿಲಿಟ್ ಮಾಡಿದ ಕಂಗನಾ..!


ಅಲ್ಲದೆ, ರಂದೀಪ್ ಹೂಡಾ ಬ್ಯಾಡ್(Randeep Hooda) ಬಾಯ್ ಪಾತ್ರದಲ್ಲಿ ಮಿಂಚಿದ್ದಾರೆ. ಈ ಚಿತ್ರದಲ್ಲಿ ಹೂಡಾ ಉದ್ದ ಕೂದಲು ಬಿಟ್ಟು ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಜೀ ಸ್ಟುಡಿಯೋ ದಲ್ಲಿ ನಿರ್ಮಾಣ ಮಾಡಲಾಗಿದೆ.


ಇದನ್ನೂ ಓದಿ : Sonu Sood: ಬಾಲಿವುಡ್ ನಟ ಸೋನು ಸೂದ್ ಗೆ ಕೊರೋನಾ ಪಾಸಿಟಿವ್!


ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್: ಈ ಸಿನಿಮಾವು 'ಈದ್' (Eid)ಗೆ ಅಂದ್ರೆ ಮೇ 13 ರಂದು ದೊಡ್ಡ  ಪರದೆ ಮೇಲೆ ಕಾಣಿಸಿಕೊಳ್ಳಲು ರೆಡಿ ಆಗಿದೆ ಎಂದು ಕೂಡ ಹೇಳಲಾಗಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.