ರಂಜಾನ್ ಸಭೆಗೆ ನಿಷೇಧ ಹೇರಬೇಕೆಂದು ಹೇಳಿ ಟ್ವೀಟ್ ಡಿಲಿಟ್ ಮಾಡಿದ ಕಂಗನಾ..!

ಈ ವರ್ಷ ಕುಂಭಮೇಳ ಸಂಭ್ರಮಾಚರಣೆಯನ್ನು'ಸಾಂಕೇತಿಕ' ಘಟನೆಯಾಗಿ ಪರಿಗಣಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರ ಶನಿವಾರ ಮನವಿ ಮಾಡಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ನಟಿ ಕಂಗನಾ ರಂಜಾನ್ ಗೆ ಜನ ಸೇರುವುದಕ್ಕೆ ನಿಷೇಧ ಹೇರಬೇಕೆಂದು ಹೇಳಿ ಟ್ವೀಟ್ ಮಾಡಿ ನಂತರ ಅಳಿಸಿಹಾಕಿದ್ದಾರೆ.

Last Updated : Apr 18, 2021, 04:24 PM IST
  • ಈ ವರ್ಷ ಕುಂಭಮೇಳ ಸಂಭ್ರಮಾಚರಣೆಯನ್ನು'ಸಾಂಕೇತಿಕ' ಘಟನೆಯಾಗಿ ಪರಿಗಣಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರ ಶನಿವಾರ ಮನವಿ ಮಾಡಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ನಟಿ ಕಂಗನಾ ರಂಜಾನ್ ಗೆ ಜನ ಸೇರುವುದಕ್ಕೆ ನಿಷೇಧ ಹೇರಬೇಕೆಂದು ಹೇಳಿ ಟ್ವೀಟ್ ಮಾಡಿ ನಂತರ ಅಳಿಸಿಹಾಕಿದ್ದಾರೆ.
ರಂಜಾನ್ ಸಭೆಗೆ ನಿಷೇಧ ಹೇರಬೇಕೆಂದು ಹೇಳಿ ಟ್ವೀಟ್ ಡಿಲಿಟ್ ಮಾಡಿದ ಕಂಗನಾ..!  title=
file photo

ನವದೆಹಲಿ: ಈ ವರ್ಷ ಕುಂಭಮೇಳ ಸಂಭ್ರಮಾಚರಣೆಯನ್ನು'ಸಾಂಕೇತಿಕ' ಘಟನೆಯಾಗಿ ಪರಿಗಣಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರ ಶನಿವಾರ ಮನವಿ ಮಾಡಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ನಟಿ ಕಂಗನಾ ರಂಜಾನ್ ಗೆ ಜನ ಸೇರುವುದಕ್ಕೆ ನಿಷೇಧ ಹೇರಬೇಕೆಂದು ಹೇಳಿ ಟ್ವೀಟ್ ಮಾಡಿ ನಂತರ ಅಳಿಸಿಹಾಕಿದ್ದಾರೆ.

ಇದನ್ನೂ ಓದಿ: ಮನಾಲಿಯಲ್ಲಿನ ತಮ್ಮನಿವಾಸದ ಬಳಿ ಗುಂಡಿನ ಚಕಮಕಿ ಎಂದು ದೂರು ನೀಡಿದ ನಟಿ ಕಂಗನಾ ರನೌತ್

ಈಗ ಈ ಟ್ವೀಟ್ ಗಳೂ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. "ಕುಂಭಮೇಳದ ನಂತರ ..ಗೌರವಾನ್ವಿತ ಪ್ರಧಾನಿ ಜಿ ದಯವಿಟ್ಟು ರಂಜಾನ್ ಸಭೆಯನ್ನು ಸಹ ನಿಲ್ಲಿಸುವಂತೆ ವಿನಂತಿಸಿಕೊಳ್ಳುತ್ತೇನೆ" ಎಂದು ಕಂಗನಾ 
(Kangana Ranaut) ಟ್ವೀಟ್ ನಲ್ಲಿ ಬರೆದಿದ್ದಾರೆ.

ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಅವರನ್ನು ದೋಸ್ತಾನಾ 2 ನಿಂದ ಕೈಬಿಡಲಾಗಿದೆ ಎನ್ನುವ ಸುದ್ದಿಗೆ ಪ್ರತಿಕ್ರಿಯಿಸಿದ ಕಂಗನಾ ಕಾರ್ತಿಕ್ ಅವರನ್ನು ಅವರ ಪಾಡಿಗೆ ಬಿಡಲಿ,ಇನ್ನೊಬ್ಬ ಸುಶಾಂತ್ ಸಿಂಗ್ ಆಗುವುದು ಬೇಡ ಎಂದು ಹೇಳಿದರು.

ಇದನ್ನೂ ಓದಿ: Sushant Singh Rajput ತಂದೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ Kangana Ranaut ಹೇಳಿದ್ದೇನು?

ಕಂಗನಾ ಮುಂದಿನ ಚಲನಚಿತ್ರ  ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಜೀವನ ಚರಿತ್ರೆಯನ್ನು ಆದರಿಸಿದ್ದು. ಈಗಾಗಲೇ ಟ್ರೈಲರ್ ಮೂಲಕ ಸಾಕಷ್ಟು ಕುತೂಹಲವನ್ನು ಹೆಚ್ಚಿಸಿದೆ.ದೇಶದಲ್ಲಿ ಹೆಚ್ಚುತ್ತಿರುವ COVID-19 ಪ್ರಕರಣಗಳಿಂದಾಗಿ ಏಪ್ರಿಲ್ 23 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದ ಕಂಗನಾ ಅವರ ಚಿತ್ರ ‘ತಲೈವಿ’ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News