ಬೆಂಗಳೂರು :  ಸಿನಿಮಾಗಳಿಗೂ ಟ್ರೋಲ್‌ಗಳಿಗೂ ಬಿಡಲಾರದ ನಂಟು ಅನಿಸುತ್ತೆ. ಸಿನಿಮಾ ನಟರು ಏನೇ ಮಾಡಿದ್ರೂ ಟ್ರೋಲರ್ಸ್‌ ಒಂದಲ್ಲ ಒಂದು ರೀತಿಯಲ್ಲಿ ಅವರನ್ನು ಟ್ರೋಲ್‌ ಮಾಡದೇ ಬಿಡುವುದಿಲ್ಲ. ಸದ್ಯ ಇಳಯ ದಳಪತಿ ವಿಜಯ್‌ ಅಭಿನಯದ ʼವಾರಿಸುʼ ಸಿನಿಮಾದ ಪೋಸ್ಟರ್‌ ಒಂದು ಬಿಡುಗಡೆಯಾಗಿದ್ದು, ಪೋಸ್ಟರ್‌ ನೋಡಿದ ನೆಟ್ಟಿಗರು ಅರೆ.. ಇದು ಕೆಜಿಎಫ್‌ ರಾಕಿಭಾಯ್‌ ಸ್ಟೈಲ್‌ ಅಲ್ವಾ ಎನ್ನುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ನಟರು ಬಟ್ಟೆಯಿಂದ ಹಿಡಿದು ಅವರು ಬರೀಗಾಲಲ್ಲಿ ನಡೆದುಕೊಂಡು ಹೋದ್ರೂ ಸಹ ಟ್ರೋಲರ್ಸ್‌ ಮಾತ್ರ ತಪ್ಪದೆ ಅವರ ಬಗ್ಗೆ ಗುಲ್‌ ಎಬ್ಬಿಸುತ್ತಿಲೆ ಇರ್ತಾರೆ. ಸದ್ಯ ಟಾಲಿವುಡ್‌ ಸ್ಟಾರ್‌ ವಿಜಯ್‌ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ವಾರಿಸು ಸಿನಿಮಾ ಸರದಿ. ಇತ್ತೀಚೆಗೆ ಚಿತ್ರತಂಡ ಪೋಸ್ಟರ್‌ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ವಿಜಯ್‌ ಕರಿ ಬಣ್ಣದ ಪ್ಯಾಂಟ್‌ ಹಾಗೂ ಶರ್ಟ್‌ ಧರಿಸಿ ಕೈಯಲ್ಲಿ ಸುತ್ತಿಗೆ ಹಿಡಿದು ನಿಂತಿದ್ದಾರೆ.


ಇದನ್ನೂ ಓದಿ: ಕಾಲೆಳೆದವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸಿದ ರಿಷಬ್‌ ಪಂತ್‌ ಪ್ರೇಯಸಿ..!


ಇನ್ನು ಈ ಪೋಸ್ಟರ್‌ ನೋಡಿದ ಟ್ರೋಲರ್ಸ್‌ ವಿಜಯ್‌ ಸ್ಟೈಲ್‌ ಅನ್ನು ಕೆಜಿಎಫ್‌ ರಾಕಿಭಾಯ್‌ ಸ್ಟೈಲ್‌ಗೆ ಹೊಲಿಸಿ ವಿಜಯ್‌ ಕಾಪಿ ಹೊಡೆದಿದ್ದಾರೆ ಎಂದು ಅಪಹಾಸ್ಯ ಮಾಡುತ್ತಿದ್ದಾರೆ. ಈ ಕುರಿತು ಹಲವಾರು ಮಿಮ್ಸ್‌ಗಳು ಕೂಡ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ‘ವಾರಿಸು’ ಸಿನಿಮಾ ಬಿಡುಗಡೆ ದಿನಾಂಕ ದೀಪಾವಳಿ ಹಬ್ಬದಂದು ಘೋಷಣೆಯಾಗಿದೆ. 


ಇನ್ನು ವಾರಿಸು ಸಿನಿಮಾ ಬರುವ ಸಂಕ್ರಾಂತಿಗೆ ಹಬ್ಬದಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಚಿತ್ರವನ್ನು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್‌ ಅಡಿ ದಿಲ್ ರಾಜು ಅವರು ನಿರ್ಮಾಣ ಮಾಡುತ್ತಿದ್ದಾರೆ. ವಂಶಿ ಪೈಡಿಪಳ್ಳಿ ಅವರು ವಿಜಯ್‌ಗೆ ಆಕ್ಷನ್‌ ಕಟ್‌ ಹೇಳಿದ್ದಾರೆ. ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಸಿನಿಮಾ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.