Truth Behind Viral Video: ಕುಡಿದ ಅಮಲಿನಲ್ಲಿ ವಿಮಾನ ನಿಲ್ದಾಣದಲ್ಲಿ Toilet ಮಾಡಿದ್ರಾ Aryan Khan? ಇದರ ಹಿಂದಿನ ಸತ್ಯಾಸತ್ಯತೆ ಇಲ್ಲಿದೆ
Truth Behind Viral Video - ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ವಿಮಾನ ನಿಲ್ದಾಣದಲ್ಲಿ ಟಾಯ್ಲೆಟ್ ಮಾಡುತ್ತಿರುವವರು ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಎಂದು ಹೇಳಲಾಗುತ್ತಿದೆ.
ನವದೆಹಲಿ: Truth Behind Viral Video - ನಿತ್ಯ ಜೀವನದಲ್ಲಿ ನಡೆಯುವ ಕೆಲ ಘಟನೆಗಳ ವಿಡಿಯೋಗಳು ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗುತ್ತವೆ. ಈ ವೈರಲ್ ವೀಡಿಯೋಗಳಿಂದ ಜನರ ಇಮೇಜ್ ಹಾಳಾಗುವ ಭಯ ಹಲವು ಬಾರಿ ಇರುತ್ತದೆ. ಇಂತಹುದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ವಿಡಿಯೋದಲ್ಲಿ ಬಾಲಕನೊಬ್ಬ ವಿಮಾನ ನಿಲ್ದಾಣದಲ್ಲಿ ಶೌಚ ಮಾಡುತ್ತಿರುವುದನ್ನು ನೀವು ಕಾಣಬಹುದು. ಈ ಹುಡುಗ ಬೇರೆ ಯಾರೂ ಅಲ್ಲ, ಬಾಲಿವುಡ್‌ನ ಕಿಂಗ್ ಖಾನ್ ಶಾರುಖ್ ಖಾನ್ (Sharukh Khan) ಅವರ ಪುತ್ರ ಆರ್ಯನ್ ಖಾನ್ (Aryan Khan) ಎಂದು ವೈರಲ್ ಪೋಸ್ಟ್‌ನಲ್ಲಿ (Viral Video) ಹೇಳಿಕೊಳ್ಳಲಾಗುತ್ತಿದೆ. ವೈರಲ್ ಆಗಿರುವ ಈ ವಿಡಿಯೋದ ಹಿಂದಿರುವ ಸತ್ಯ ಏನು ತಿಳಿದುಕೊಳ್ಳೋಣ ಬನ್ನಿ.
ವಿಡಿಯೋದಲ್ಲಿನ ಯುವಕ ಕುಡಿದ ಅಮಲಿನಲ್ಲಿ ಕಾಣಿಸಿಕೊಂಡಿದ್ದಾನೆ
ಈ ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಹುಡುಗ ಡೆನಿಮ್ ಜೀನ್ಸ್ ಜೊತೆಗೆ ಕ್ರೀಮ್ ಕಲರ್ ಫುಲ್ ಸ್ಲೀವ್ ಟೀ ಶರ್ಟ್ ಧರಿಸಿದ್ದಾನೆ. ಏರ್‌ಪೋರ್ಟ್‌ನ ಗ್ರೌಂಡ್ ಸ್ಟಾಫ್‌ನಿಂದ ವ್ಯಕ್ತಿಯೊಬ್ಬರು ಆತನಿಗೆ ಏನನ್ನೋ ಹೇಳಿ ಕೈ ಹಿಡಿದಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ನಂತರ ವ್ಯಕ್ತಿಯು ತನ್ನ ಕೈಯನ್ನು ಬಿಟ್ಟ ನಂತರ, ಆ ಹುಡುಗನು ತೂರಾಡಲು ಪ್ರಾರಂಭಿಸುತ್ತಾನೆ. ಇದನ್ನು ನೋಡಿದರೆ ಹುಡುಗ ಕುಡಿದಿರುವುದು ಸ್ಪಷ್ಟವಾಗುತ್ತದೆ.
ಇದ್ದಕ್ಕಿದ್ದಂತೆ ಶೌಚ ಮಾಡಲು ಮುಂದಾದ ಯುವಕ
ಈ ಹುಡುಗ ಇದ್ದಕ್ಕಿದ್ದಂತೆ ತನ್ನ ಪ್ಯಾಂಟ್ ತೆರೆದು ವಿಮಾನ ನಿಲ್ದಾಣದಲ್ಲಿಯೇ ಶೌಚ ಮಾಡಲು ಮುಂದಾಗುವುದನ್ನು ನೀವು ವೀಡಿಯೊದಲ್ಲಿ ಗಮನಿಸಬಹುದು ಮತ್ತು ಅದನ್ನು ನೋಡಿದ ಎಲ್ಲರೂ ಅವಾಕ್ಕಾಗುತ್ತಾರೆ.
ಇದನ್ನೂ ಓದಿ-ಟಾಲಿವುಡ್ಗೆ ಎಂಟ್ರಿ ಕೊಟ್ಟ 'ಸಲಗ': ನಂದಮೂರಿ ಬಾಲಕೃಷ್ಣ ಸಿನಿಮಾದಲ್ಲಿ ದುನಿಯಾ ವಿಜಯ್
ಆರ್ಯನ್ ಖಾನ್ ಹೆಸರನ್ನು ಏಕೆ ಸೇರಿಸಲಾಗುತ್ತಿದೆ?
ವಾಸ್ತವವಾಗಿ, ವೀಡಿಯೊದಲ್ಲಿರುವ ಹುಡುಗ, ಹಾವಭಾವ, ಹೇರ್ ಸ್ಟೈಲ್ ಮತ್ತು ಡ್ರೆಸ್ಸಿಂಗ್‌ನಲ್ಲಿ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್‌ನಂತೆ ಇದೆ. ಇದರಿಂದಾಗಿ ಜನರು ಅವನನ್ನು ಆರ್ಯನ್ ಖಾನ್ ಎಂದು ಪರಿಗಣಿಸುತ್ತಿದ್ದಾರೆ. ಆದರೆ ಇದು ಸತ್ಯವಲ್ಲ.
ಇದನ್ನೂ ಓದಿ-Alia Bhatt:ಆಲಿಯಾ ಭಟ್ ಅವರನ್ನು ಆಕರ್ಷಿಸುತ್ತದಂತೆ ಹುಡುಗರಲ್ಲಿನ ಈ ವಿಶೇಷ ಗುಣ!
ವೈರಲ್ ಆಗಿರುವ ಈ ವಿಡಿಯೋದ ಸತ್ಯಾಸತ್ಯತೆ ಇಲ್ಲಿದೆ
ಈ ವಿಡಿಯೋ ಸುಮಾರು 9 ವರ್ಷ ಹಳೆಯದಾಗಿದೆ. ಈ ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿಯ ಹೆಸರು ಬ್ರಾನ್ಸನ್ ಪೆಲ್ಲೆಟಿಯರ್, ಇವರು 2009-12ರಲ್ಲಿ 'ದಿ ಟ್ವಿಲೈಟ್ ಸಾಗಾ' ಸರಣಿಯ 4 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಡಿಸೆಂಬರ್ 2012 ರ ಈ ಘಟನೆಯನ್ನು ಬ್ರಾನ್ಸನ್ ಪೆಲ್ಲೆಟಿಯರ್ ಅವರು ತಮ್ಮ ವಿಕಿಪೀಡಿಯಾದಲ್ಲಿ ಉಲ್ಲೇಖಿಸಿದ್ದಾರೆ. ಈ ಘಟನೆಯ ನಂತರ, ಅವರನ್ನು 2 ವರ್ಷಗಳ ಕಾಲ ಪರೀಕ್ಷೆಗೆ ಕಳುಹಿಸಲಾಯಿತು. ಅದೇನೆಂದರೆ, ವೈರಲ್ ವೀಡಿಯೊದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ಆರ್ಯನ್ ಖಾನ್ ಅಲ್ಲ, ಆದರೆ ನಟ ಬ್ರಾನ್ಸನ್ ಪೆಲ್ಲೆಟಿಯರ್ ಎಂದು ಸಾಬೀತುಪಡಿಸುತ್ತದೆ.
ಇದನ್ನೂ ಓದಿ-ಸ್ಟೇಜ್ ಶೋನಲ್ಲಿ ಬಿಯರ್ ಕ್ಯಾನ್ ಬ್ರಾ ಧರಿಸಿದ್ದ ಗಾಯಕಿ: ವಿಚಿತ್ರ ಲುಕ್ ನೋಡಿ ಬೆಚ್ಚಿಬಿದ್ದ ಜನರು!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.