ಸ್ಟೇಜ್ ಶೋನಲ್ಲಿ ಬಿಯರ್ ಕ್ಯಾನ್‌ ಬ್ರಾ ಧರಿಸಿದ್ದ ಗಾಯಕಿ: ವಿಚಿತ್ರ ಲುಕ್ ನೋಡಿ ಬೆಚ್ಚಿಬಿದ್ದ ಜನರು!

ಪ್ರದರ್ಶನದಲ್ಲಿ ಬಿಯರ್ ಕ್ಯಾನ್ ನಿಂದ ತಯಾರಿಸಿದ್ದ ಬ್ರಾ ಧರಿಸಿದ್ದ ಕೇಟಿ ಪೆರ್ರಿ ವೇದಿಕೆಯ ಮೇಲೆ ಹಾಡು ಹಾಡುತ್ತಾ ಕುಣಿದು ಕುಪ್ಪಳಿಸಿದ್ದಾಳೆ.

Written by - Zee Kannada News Desk | Last Updated : Jan 2, 2022, 01:25 PM IST
  • ಬಿಯರ್ ಕ್ಯಾನ್ ಬ್ರಾ ಧರಿಸಿ ಸಖತ್ ಸುದ್ದಿಯಾದ ಕೇಟಿ ಪೆರ್ರಿ
  • ಬಾಲಿವುಡ್ ಗಾಯಕಿಯ ವಿಚಿತ್ರ ಡ್ರೆಸ್ ಸ್ಟೈಲ್ ಕಂಡು ಬೆಚ್ಚಿಬಿದ್ದ ಜನ
  • ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಕೇಟಿ ಪೆರ್ರಿ ವಿಡಿಯೋ
ಸ್ಟೇಜ್ ಶೋನಲ್ಲಿ ಬಿಯರ್ ಕ್ಯಾನ್‌ ಬ್ರಾ ಧರಿಸಿದ್ದ ಗಾಯಕಿ: ವಿಚಿತ್ರ ಲುಕ್ ನೋಡಿ ಬೆಚ್ಚಿಬಿದ್ದ ಜನರು! title=
ಸಖತ್ ಸುದ್ದಿಯಾದ ಕೇಟಿ ಪೆರ್ರಿ

ನವದೆಹಲಿ: ಅಮೆರಿಕದ ಗಾಯಕಿ ಕೇಟಿ ಪೆರ್ರಿ(Katy Perry) ಇತ್ತೀಚೆಗೆ ಲಾಸ್ ವೇಗಾಸ್‌ನಲ್ಲಿ ನಡೆದ ಸಂಗೀತ ಕಚೇರಿ(Music Concert)ಯಲ್ಲಿ ಭಾಗವಹಿಸಿ ಜನರ ಗಮನ ಸೆಳೆದಿದ್ದಾರೆ. ಈ ಶೋನಲ್ಲಿ ಅವರು ವಿಚಿತ್ರ ಉಡುಪು ಧರಿಸುವ ಮೂಲಕ ಸುದ್ದಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇದರ ವಿಡಿಯೋ ವೈರಲ್ ಆಗಿದ್ದು, ಗಾಯಕಿಯ ಡ್ರೆಸ್ ಸ್ಟೈಲ್ ಕಂಡು ಅನೇಕರು ಬೆಚ್ಚಿಬಿದ್ದಿದ್ದಾರೆ. ವಾಸ್ತವವಾಗಿ ಈ ಮ್ಯೂಸಿಕ್ ಶೋನಲ್ಲಿ ಕೇಟಿ ಪೆರ್ರಿ ಬಿಯರ್ ಕ್ಯಾನ್ ಗಳಿಂದ ತಯಾರಿಸಿದ್ದ ಬ್ರಾ ಧರಿಸಿದ್ದರು. ಇದು ಅನೇಕ ಇಂಟರ್ನೆಟ್ ಬಳಕೆದಾರರ ಗಮನವನ್ನು ಸೆಳೆದಿದೆ.

ಫ್ಯಾಶನ್ ಕ್ರೇಜ್ ಗೆ ಅಭಿಮಾನಿಗಳು ಫಿದಾ

ಕೇಟಿ ಪೆರ್ರಿ(Singer Katy Perry)ಯ ಇಂತಹ ವಿಚಿತ್ರ ಫ್ಯಾಷನ್ ಬಗ್ಗೆ ನೆಟ್ಟಿಗರು ಸಾಕಷ್ಟು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಪ್ರದರ್ಶನದಲ್ಲಿ ಬಿಯರ್ ಕ್ಯಾನ್ ನಿಂದ ತಯಾರಿಸಿದ್ದ ಬ್ರಾ ಧರಿಸಿದ್ದ ಕೇಟಿ ಪೆರ್ರಿ(Katy Perry Bra With Beer Cans) ವೇದಿಕೆಯ ಮೇಲೆ ಹಾಡು ಹಾಡುತ್ತಾ ಕುಣಿದು ಕುಪ್ಪಳಿಸಿದ್ದಾಳೆ. ದೊಡ್ಡ ಬಿಯರ್ ಕ್ಯಾನ್ ಮೇಲೆ ನಿಂತು ನೃತ್ಯ ಮಾಡಿ ಗಮನ ಸೆಳೆದಿದ್ದಾಳೆ. ಗಾಯಕಿಯ ಜೊತೆಗೆ ಅವರ ಸಂಗಡಿಗರು ಕೂಡ ಚಿತ್ರ-ವಿಚಿತ್ರ ಡ್ರೆಸ್ ಧರಿಸಿ ನೋಡುಗರ ಗಮನ ಸೆಳೆದಿದ್ದಾರೆ. ಕೆಲವರು ಪಿಜ್ಜಾ ಮತ್ತೆ ಕೆಲವರು ಫ್ರೆಂಚ್ ಫ್ರೈಸ್ ರೀತಿಯ ಡ್ರೆಸ್ ಧರಿಸಿ ಶೋನಲ್ಲಿ ಗಾಯಕಿ ಜೊತೆಗೆ ಹೆಜ್ಜೆ ಹಾಕಿದ್ದಾರೆ.

ಇದನ್ನೂ ಓದಿ: Covid 3rd Wave: ‘ಆರ್‌ಆರ್‌ಆರ್‌’ ಸಿನಿಮಾ ಬಿಡುಗಡೆ ಮುಂದೂಡಿಕೆ, ‘ರಾಧೆ ಶ್ಯಾಮ್’ಗಿಲ್ಲ ಆತಂಕ!

ನೆಟಿಜನ್ ಗಳಿಂದ ವಿವಿಧ ರೀತಿಯ ಕಾಮೆಂಟ್!

ರೆಸಾರ್ಟ್ಸ್ ವರ್ಲ್ಡ್ ಲಾಸ್ ವೇಗಾಸ್‌ನಲ್ಲಿ ಕೇಟಿ ಪೆರ್ರಿ(Singer Katy Perry Video) ‘Play’ ನೈಟ್ ಶೋ ಕಾಯಕ್ರಮದಲ್ಲಿ ಪ್ರದರ್ಶನ ನೀಡುತ್ತಿದ್ದರು. ಹೊಸ ವರ್ಷದ ರಾತ್ರಿ ನಡೆದ ಈ ಕಾರ್ಯಕ್ರಮದಲ್ಲಿ ಆಕೆಯ ಈ ಹೊಸ ಶೈಲಿಯನ್ನು ನೋಡಿ ಜನರು ಮೆಚ್ಚಿಕೊಂಡಿದ್ದಾರೆ. ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುವ ಮೂಲಕ ಅನೇಕರು ಗಾಯಕಿಯನ್ನು ಹೊಗಳಿದರೆ, ಇನ್ನು ಕೆಲವರು ಆಕೆ ಧರಿಸಿದ್ದ ಉಡುಪಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಅಸಮಾಧಾನ ಹೊರಹಾಕಿದ್ದಾರೆ.

ಮ್ಯೂಸಿಕ್ ಅಲ್ಬಂಗಳಿಂದ ಪ್ರಸಿದ್ಧಿ

ಬಾಲಿವುಡ್ ಗಾಯಕಿ ತಮ್ಮ ಮ್ಯೂಸಿಕ್ ಆಲ್ಬಂಗಳಿಂದ ಪ್ರಸಿದ್ಧಿಯಾಗಿದ್ದಾರೆ. ‘ಕ್ಯಾಲಿಫೋರ್ನಿಯಾ ಗರ್ಲ್ಸ್’, ‘ಟೀನೇಜ್ ಡ್ರೀಮ್’, ‘Firework’, ‘ET’ ಮತ್ತು 'ಲಾಸ್ಟ್ ಫ್ರೈಡೇ ನೈಟ್ (TGIF)’ ಅವರ ಸೂಪರ್ ಹಿಟ್‌ ಆಲ್ಬಂಗಳಾಗಿವೆ. ಸಂಗೀತದ ಜೊತೆಗೆ ಕೇಟಿ ಪೆರ್ರಿ ಅವರು 2012ರಲ್ಲಿ ಪ್ರಕಟವಾದ ‘ಕೇಟಿ ಪೆರ್ರಿ: ಪಾರ್ಟ್ ಆಫ್ ಮಿ’ ಎಂಬ ಆತ್ಮಚರಿತ್ರೆ ಹೊಂದಿದ್ದಾರೆ. 2011ರ ಹಾಸ್ಯ ಚಲನಚಿತ್ರ ‘ದಿ ಸ್ಮರ್ಫ್ಸ್’ ಮತ್ತು ಅದರ ಮುಂದುವರಿದ ಭಾಗ ‘ಸ್ಮರ್ಫ್ಸ್ 2’ ನಲ್ಲಿ ಅವರು Smurfette ಪಾತ್ರಕ್ಕೆ ಧ್ವನಿ ನೀಡಿದ್ದಾರೆ.

ಇದನ್ನೂ ಓದಿ: Kajal Aggarwal:ತಾಯಿಯಾಗ್ತಿದ್ದಾರೆ ಕಾಜಲ್ ಅಗರ್ವಾಲ್, ಸಿಹಿ ಸುದ್ದಿ ಹಂಚಿಕೊಂಡ ಪತಿ

ಜೈಪುರದಲ್ಲಿ ಮದುವೆಯಾಗಿದ್ದರು

ಕೇಟಿ ಪೆರ್ರಿ(Katy Perry) 2010ರಲ್ಲಿ ಜೈಪುರದಲ್ಲಿ ಮೊದಲ ಬಾರಿಗೆ ಬ್ರಿಟಿಷ್ ಹಾಸ್ಯನಟ ರಸೆಲ್ ಬ್ರಾಂಡ್ ಅವರನ್ನು ವಿವಾಹವಾದರು. ಆದರೆ 2012ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು. ಈ ಗಾಯಕಿ ಸದ್ಯ ಹಾಲಿವುಡ್ ನಟ ಒರ್ಲ್ಯಾಂಡೊ ಬ್ಲೂಮ್ ಅವರನ್ನು ವಿವಾಹವಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News