ಟಾಲಿವುಡ್​ಗೆ ಎಂಟ್ರಿ ಕೊಟ್ಟ 'ಸಲಗ': ನಂದಮೂರಿ ಬಾಲಕೃಷ್ಣ ಸಿನಿಮಾದಲ್ಲಿ ದುನಿಯಾ ವಿಜಯ್

ದುನಿಯಾ ವಿಜಯ್ (Duniya Vijay) ಅವರು ನಂದಮೂರಿ ಬಾಲಕೃಷ್ಣ (Nandamuri Balakrishna) ಅವರ 'ಎನ್‌ಬಿಕೆ 107' (NBK107) ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. 'ಸ್ಯಾಂಡಲ್‌ವುಡ್ ಸೆನ್ಸೇಷನ್' ದುನಿಯಾ ವಿಜಯ್ ಎಂಟ್ರಿಗಾಗಿ ಅಭಿಮಾನಿಗಳು ಉತ್ಸುಕರಾಗಿದ್ದಾರೆ.

Edited by - Zee Kannada News Desk | Last Updated : Jan 3, 2022, 03:12 PM IST
  • ಟಾಲಿವುಡ್​ಗೆ ಎಂಟ್ರಿ ಕೊಟ್ಟ ದುನಿಯಾ ವಿಜಯ್
  • ನಂದಮೂರಿ ಬಾಲಕೃಷ್ಣ ಅವರ 'ಎನ್‌ಬಿಕೆ 107' ಚಿತ್ರತಂಡ ಸೇರಿಕೊಂಡ ನಟ
  • ದುನಿಯಾ ವಿಜಯ್ ಅವರ ಕಾಸ್ಟಿಂಗ್ ಸುದ್ದಿಯನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ
ಟಾಲಿವುಡ್​ಗೆ ಎಂಟ್ರಿ ಕೊಟ್ಟ 'ಸಲಗ':  ನಂದಮೂರಿ ಬಾಲಕೃಷ್ಣ ಸಿನಿಮಾದಲ್ಲಿ ದುನಿಯಾ ವಿಜಯ್  title=
ದುನಿಯಾ ವಿಜಯ್

ಕಳೆದ ವರ್ಷಾಂತ್ಯದಲ್ಲಿ ನಂದಮೂರಿ ಬಾಲಕೃಷ್ಣ (Nandamuri Balakrishna) ಭರ್ಜರಿಯಾಗಿ ತೆರೆಗೆ ಮರಳಿದ್ದರು. ಇತ್ತೀಚೆಗೆ ಬಿಡುಗಡೆಯಾದ ಅಖಂಡ (Akhanda) ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದೆ ಎಂದು ವರದಿಯಾಗಿದೆ. ಸಾಹಸಮಯ ಚಿತ್ರದ ಯಶಸ್ಸಿನ ನಂತರ ಅನುಭವಿ ನಟ ತಮ್ಮ ಹೊಸ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ.

NBK 107 ಎಂದು ತಾತ್ಕಾಲಿಕವಾಗಿ ಶೀರ್ಷಿಕೆ ಇಡಲಾಗಿದ್ದು, ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ಶ್ರುತಿ ಹಾಸನ್ ಮತ್ತು ಇತರರ ನಂತರ, ಚಿತ್ರತಂಡವನ್ನು ಸೇರಿಕೊಂಡ ಇತ್ತೀಚಿನ ನಟ ದುನಿಯಾ ವಿಜಯ್(Duniya Vijay).

ದುನಿಯಾ ವಿಜಯ್‌ ತೆಲುಗಿ(Telugu)ಗೆ ಎಂಟ್ರಿ ಕೊಡ್ತಿದ್ದಾರೆ. NBK107 ನಿರ್ಮಾಪಕರು, Mythri Movie Makers, ದುನಿಯಾ ವಿಜಯ್ ಅವರ ಕಾಸ್ಟಿಂಗ್ ಸುದ್ದಿಯನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.  ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ.  ಅಲ್ಲದೇ, ಅವರನ್ನು 'ಸ್ಯಾಂಡಲ್‌ವುಡ್ ಸೆನ್ಸೇಷನ್' ಎಂದು ಕರೆದರು.  

 

 

ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಗೋಪಿಚಂದ್​ ಮಲಿನೇನಿ ಆ್ಯಕ್ಷನ್​-ಕಟ್​ ಹೇಳಲಿದ್ದಾರೆ. ಖ್ಯಾತ ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವೀ ಮೇಕರ್ಸ್​’ ಈ ಚಿತ್ರವನ್ನು ನಿರ್ಮಿಸುತ್ತಿದೆ. ದುನಿಯಾ ವಿಜಯ್​ಗೆ ಸ್ವಾಗತ ಕೋರಿ, ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ಅಧಿಕೃತವಾಗಿ ಅನೌನ್ಸ್​ ಮಾಡಲಾಗಿದೆ.

ದುನಿಯಾ ವಿಜಯ್‌ ಲುಕ್‌ ಸಿಕ್ಕಾಪಟ್ಟೆ ಬದಲಾಗಿದೆ. ದುನಿಯಾ ವಿಜಯ್‌ ಉದ್ದನೆಯ ಬಿಳಿ ಗಡ್ಡ, ಮೀಸೆ ಬಿಟ್ಟಿದ್ದಾರೆ. ಈ ಲುಕ್‌ ಅವರು ತೆಲುಗು ಚಿತ್ರಕ್ಕಾಗಿ ಮಾಡಿಕೊಂಡಿರುವುದು ಎಂದು ಎನ್ನಲಾಗಿದೆ. ರಾಯಲಸೀಮಾ ಹಿನ್ನೆಲೆಯಲ್ಲಿ ಸಿನಿಮಾ ಮೂಡಿಬರಲಿದೆ. ನೈಜ ಘಟನೆಗಳನ್ನು ಆಧರಿಸಿ ನಿರ್ದೇಶಕರು ಈ ಚಿತ್ರ ಮಾಡುತ್ತಿದ್ದಾರೆ. ಸದ್ಯ ಪಾತ್ರವರ್ಗದ ಆಯ್ಕೆ ನಡೆಯುತ್ತಿದೆ. 

ಇದನ್ನೂ ಓದಿ: Alia Bhatt:ಆಲಿಯಾ ಭಟ್ ಅವರನ್ನು ಆಕರ್ಷಿಸುತ್ತದಂತೆ ಹುಡುಗರಲ್ಲಿನ ಈ ವಿಶೇಷ ಗುಣ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News