ಡಾ.ಪುನೀತ್ ರಾಜಕುಮಾರ್ ಗೆ ಟ್ವಿಟ್ಟರ್ ನಿಂದ ಅವಮಾನ, ರೊಚ್ಚಿಗೆದ್ದ ಕನ್ನಡಿಗರು
ಕನ್ನಡಿಗರ ಆರಾಧ್ಯದೈವ ಡಾ. ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ 9 ತಿಂಗಳಾಯಿತು, ಆದರೂ ಕೂಡ ಕನ್ನಡಿಗರು ಅವರ ಅಗಲಿಕೆಯನ್ನು ಇಂದಿಗೂ ಒಪ್ಪುತ್ತಿಲ್ಲ, ಇದೇ ಸಂದರ್ಭದಲ್ಲಿ ಟ್ವಿಟ್ಟರ್ ಈಗ ಅವರ ಖಾತೆಗೆ ಇದ್ದಂತಹ ಬ್ಲೂ ಟಿಕ್ ನ್ನು ತೆಗೆದುಹಾಕುವುದರ ಮೂಲಕ ಕನ್ನಡಿಗರ ಕಣ್ಮಣಿ ನಮ್ಮ ಪ್ರೀತಿಯ ಅಪ್ಪುಗೆ ಅವಮಾನ ಮಾಡಿದೆ.
ಬೆಂಗಳೂರು: ಕನ್ನಡಿಗರ ಆರಾಧ್ಯದೈವ ಡಾ. ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ 9 ತಿಂಗಳಾಯಿತು, ಆದರೂ ಕೂಡ ಕನ್ನಡಿಗರು ಅವರ ಅಗಲಿಕೆಯನ್ನು ಇಂದಿಗೂ ಒಪ್ಪುತ್ತಿಲ್ಲ, ಇದೇ ಸಂದರ್ಭದಲ್ಲಿ ಟ್ವಿಟ್ಟರ್ ಈಗ ಅವರ ಖಾತೆಗೆ ಇದ್ದಂತಹ ಬ್ಲೂ ಟಿಕ್ ನ್ನು ತೆಗೆದುಹಾಕುವುದರ ಮೂಲಕ ಕನ್ನಡಿಗರ ಕಣ್ಮಣಿ ನಮ್ಮ ಪ್ರೀತಿಯ ಅಪ್ಪುಗೆ ಅವಮಾನ ಮಾಡಿದೆ.
ಪುನೀತ್ ರಾಜ್ ಕುಮಾರ್ ಅವರು ಅಕ್ಟೋಬರ್ 29 ರಂದು ಹೃದಯಾಘಾತದಿಂದ ನಿಧನರಾಗಿದ್ದು, ಕನ್ನಡಿಗರು ಎಂದಿಗೂ ಅರಗಿಸಿಕೊಳ್ಳಲಾಗದ ಸುದ್ದಿಯಾಗಿತ್ತು, ಅವರ ನೆನಪಿನಲ್ಲಿ ಕನ್ನಡಿಗರೂ ಇಂದಿಗೂ ಕೊರಗುತ್ತಿದ್ದಾರೆ,ಅವರ ನೆನಪನ್ನು ಚಿರವಾಗಿಸುವ ನಿಟ್ಟಿನಲ್ಲಿ ಅವರನ್ನು ಈಗ ದೈವಿ ಸ್ವರೂಪಿ ಎನ್ನುವಂತೆ ಪೂಜಿಸುತ್ತಿದ್ದಾರೆ.
ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ವಿರುದ್ದ ಸಿಎಂಗೆ ದೂರು :ವರ್ಗಾವಣೆಗೆ ಮನವಿ
ಇನ್ನೊಂದೆಡೆಗೆ ಟ್ವಿಟ್ಟರ್ ಕನ್ನಡಿಗರಿಗೆ ಒಂದು ರೀತಿ ಹಿಂದಿ ನಟರಿಗೆ ಒಂದು ರೀತಿ ತಾರತಮ್ಯ ವೆಸಗುತ್ತಿದೆ. ಪುನೀತ್ ರಾಜಕುಮಾರ್ ಅವರಿಗೂ ಮುನ್ನ ಸಾವನ್ನಪ್ಪಿದ್ದ ಹಿಂದಿ ನಟ ಸುಶಾಂತ್ ಸಿಂಗ್ ರಾಜಪೂತ್ ಅವರ ಖಾತೆಯ ಬ್ಲೂಟಿಕ್ ನ್ನು ಹಾಗೆಯೇ ಉಳಿಸಿಕೊಂಡಿದ್ದರೆ, ಇತ್ತ ಪುನೀತ್ ರಾಜ್ ಕುಮಾರ್ ಅವರ ಖಾತೆಯ ಬ್ಲೂ ಟಿಕ್ ನ್ನು ತೆಗೆದು ಹಾಕಿದೆ.
ಇದನ್ನೂ ಓದಿ : Today Vegetable Price: ಇಂದು ತರಕಾರಿ ಹಾಗೂ ಹಣ್ಣಿನ ಬೆಲೆ ಹೀಗಿದೆ ನೋಡಿ..
ಈ ನಡೆಯ ವಿರುದ್ಧ ಕನ್ನಡಿಗರು ಕೆಂಡಾಮಂಡಲವಾಗಿದ್ದಾರೆ, ಅಷ್ಟೇ ಅಲ್ಲದೆ ಬ್ಲೂ ಟಿಕ್ ನ್ನು ಪುನಸ್ಥಾಪಿಸಬೇಕೆಂದು ಪಟ್ಟು ಹಿಡಿದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ