ಚಿಕ್ಕಮಗಳೂರು: ‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ‘ವಿಕ್ರಾಂತ್ ರೋಣ’ ಸಿನಿಮಾ ಗುರುವಾರ ಪ್ರಪಂಚದಾದ್ಯಂತ ತೆರೆಗೆ ಅಬ್ಬರಿಸಿದೆ. ಕಿಚ್ಚನ ಅಭಿನಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದು, ಬಿಡುಗಡೆಯಾದ ಎಲ್ಲಾ ಕಡೆ ತುಂಬಿದ ಗೃಹಗಳಲ್ಲಿ ಪ್ರದರ್ಶನ ಕಾಣುತ್ತಿದೆ.  ‘ವಿಕ್ರಾಂತ್ ರೋಣ’ ಸಿನಿಮಾ ಬಿಡುಗಡೆ ಸಂಭ್ರಮದ ಮಧ್ಯೆಯೇ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Vikrant Rona ಬಗ್ಗೆ ಹೀಗಂದಿದ್ದೇಕೆ ಬಾಲಿವುಟ್‌ ನಟ ರಿತೇಶ್ ದೇಶಮುಖ್?


ಹೌದು, ‘ವಿಕ್ರಾಂತ್ ರೋಣ’ ಸಿನಿಮಾ ಪ್ರದರ್ಶನದ ವೇಳೆಯೇ ಎರಡು ಗುಂಪುಗಳ ನಡುವೆ ಲಾಂಗ್ ಹಿಡಿದು ಮಾರಾಮಾರಿ ನಡೆದಿರುವ ಘಟನೆ ಚಿಕ್ಕಮಗಳೂರಿನಲ್ಲಿ ಮಿಲನ ಥಿಯೇಟರ್ ಬಳಿ ನಡೆದಿದೆ ಎಂದು ವರದಿಯಾಗಿದೆ. ಥಿಯೇಟರ್ ಬಳಿ ಕ್ಷುಲ್ಲಕ ವಿಚಾರಕ್ಕೆ ಎರಡು ಗುಂಪುಗಳ ಯುವಕರು ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬನನ್ನು ಮನಬಂದಂತೆ ಥಳಿಸಲಾಗಿದೆ. ಗಾಯಗೊಂಡು ನೆಲಕ್ಕೆ ಬಿದ್ದರೂ ಬಿಡದೆ ಆತನ ಮೇಲೆ ಮನಬಂದಂತೆ ಹಲ್ಲ ನಡೆಸಲಾಗಿದೆ ಎಂದು ತಿಳಿದುಬಂದಿದೆ.


ಸದ್ಯ ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಹಾಸನದ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ ಅಂತಾ ತಿಳಿದುಬಂದಿದೆ.  


ಇದನ್ನೂ ಓದಿ: Vikrant Rona: ಸುದೀಪ್ ಪತ್ನಿಯಾಗಿ ಅಲ್ಲ, ಅಭಿಮಾನಿಯಾಗಿ ಸಿನಿಮಾ ನೋಡಲು ಬಂದಿರುವೆ..!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.