Vikrant Rona Review: ಸಿನಿಮಾ ಹೇಗಿದೆ ಅನ್ನೋ ಪಕ್ಕಾ ರಿವ್ಯೂ ಇಲ್ಲಿದೆ ನೋಡಿ

Vikrant Rona Review: ವಿಕ್ರಾಂತ್ ರೋಣ... VR... ಒಂದಷ್ಟು ದಿನಗಳಿಂದ ಸಿನಿಮಾಭಿಮಾನಿಗಳ ಎದೆಯಲ್ಲಿ ಕುತೂಹಲ ಕ್ರಿಯೇಟ್ ಮಾಡಿದ್ದ ಸಿನಿಮಾ. ಯಾವಾಗಾಪ್ಪ ತೆರೆಮೇಲೆ ಸಿನಿಮಾ ನೋಡೋದು ಅಂತ ಕಾಯುತ್ತಿದ್ದ ಅಭಿಮಾನಿಗಳು ಫೈನಲಿ VR ಸಿನಿಮಾ ನೋಡಿ ಸಂಭ್ರಮಿಸಿದ್ದಾರೆ. ಹಾಗಾದ್ರೆ ಸಿನಿಮಾ ಹೇಗಿದೆ ಅನ್ನೋ ಪಕ್ಕಾ ರಿವ್ಯೂ ನಾವು ರಿವಿಲ್ ಮಾಡ್ತೀವಿ ನೋಡಿ.

Written by - YASHODHA POOJARI | Edited by - Chetana Devarmani | Last Updated : Jul 28, 2022, 12:19 PM IST
  • ವಿಕ್ರಾಂತ್ ರೋಣನಾಗಿ ಕಿಚ್ಚ ಸುದೀಪ್ ವಿಭಿನ್ನ ಗೆಟಪ್
  • ಸಿನಿಮಾದಲ್ಲಿ ಸಸ್ಪೆನ್ಸ್ ಜೊತೆಗೆ ಕಾಮಿಡಿ ಕಚಗುಳಿ ಕೂಡ ಇದೆ
  • ಸಖತ್ ಥ್ರಿಲ್ ಕೊಡೋ ಸಿನಿಮಾ ವಿಕ್ರಾಂತ್ ರೋಣ
Vikrant Rona Review: ಸಿನಿಮಾ ಹೇಗಿದೆ ಅನ್ನೋ ಪಕ್ಕಾ ರಿವ್ಯೂ ಇಲ್ಲಿದೆ ನೋಡಿ  title=
ವಿಕ್ರಾಂತ್ ರೋಣ

Vikrant Rona Review: ವಿಕ್ರಾಂತ್ ರೋಣ... VR... ಒಂದಷ್ಟು ದಿನಗಳಿಂದ ಸಿನಿಮಾಭಿಮಾನಿಗಳ ಎದೆಯಲ್ಲಿ ಕುತೂಹಲ ಕ್ರಿಯೇಟ್ ಮಾಡಿದ್ದ ಸಿನಿಮಾ. ಯಾವಾಗಾಪ್ಪ ತೆರೆಮೇಲೆ ಸಿನಿಮಾ ನೋಡೋದು ಅಂತ ಕಾಯುತ್ತಿದ್ದ ಅಭಿಮಾನಿಗಳು ಫೈನಲಿ VR ಸಿನಿಮಾ ನೋಡಿ ಸಂಭ್ರಮಿಸಿದ್ದಾರೆ. ಹಾಗಾದ್ರೆ ಸಿನಿಮಾ ಹೇಗಿದೆ ಅನ್ನೋ ಪಕ್ಕಾ ರಿವ್ಯೂ ನಾವು ರಿವಿಲ್ ಮಾಡ್ತೀವಿ ನೋಡಿ. ವಿಕ್ರಾಂತ್ ರೋಣನಾಗಿ ಕಿಚ್ಚ ಸುದೀಪ್ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕಿಚ್ಚ ಇಲ್ಲಿಯವರೆಗೆ ಮಾಡಿರೋ ಸಿನಿಮಾಗಿಂತ ಈ ಚಿತ್ರದಲ್ಲಿ ತುಂಬಾ ಡಿಫರೆಂಟ್ ಆಗೇ ಕಾಣಿಸಿದ್ದಾರೆ. 'ಕಮರೊಟ್ಟು' ಗ್ರಾಮದಲ್ಲಿ ಆಗೋ ಮಕ್ಕಳ ಭಯಾನಕ ಸಾವಿನ ಸುತ್ತ ಈ ಕಥೆ ಸುತ್ತುತ್ತೆ. ಕೊಲೆಯ ಹಿಂದಿನ ರಹಸ್ಯ ಏನು ಅನ್ನೋದನ್ನ ತಿಳಿಯಲು ಸಿನಿಮಾ ನೋಡಬೇಕು.ಸಂಜು ಅನ್ನೋ ಪಾತ್ರದಲ್ಲಿ ನಿರೂಪ್ ಭಂಡಾರಿ ಕಾಣಿಸಿಕೊಂಡಿದ್ದಾರೆ. ನೀತಾ ಅಶೋಕ್ ಪನ್ನ ಪಾತ್ರವನ್ನ ಅದ್ಭುತವಾಗಿ ನಿಭಾಯಿಸಿದ್ದಾರೆ.

ಇದನ್ನೂ ಓದಿ: ವಿಕ್ರಾಂತ್‌ ರೋಣ ಟ್ವಿಟರ್‌ ರಿವೀವ್!‌ ಸಿನಿಮಾ ನೋಡಿದವ್ರು ಏನಂದ್ರು?

ಸಿನಿಮಾದಲ್ಲಿ ಸಸ್ಪೆನ್ಸ್ ಜೊತೆಗೆ ಕಾಮಿಡಿ ಕಚಗುಳಿ ಕೂಡ ಇದೆ. ಮೊದಲಾರ್ಧ ಸ್ವಲ್ಪ ಎಳೆದಿದ್ದಾರೆ ಬಿಟ್ರೆ ಸಖತ್ ಥ್ರಿಲ್ ಕೊಡೋ ಸಿನಿಮಾ ವಿಕ್ರಾಂತ್ ರೋಣ ಅನ್ನೋದನ್ನ ಮೆಚ್ಚಿ ಹೇಳಬಹುದು. 'ರಂಗಿತರಂಗ' ಸಿನಿಮಾಗೂ 'ವಿಕ್ರಾಂತ್ ರೋಣ' ಸಿನಿಮಾಗೂ ಸಾಕಷ್ಟು ಕಡೆ ಹೋಲಿಕೆ ಕಂಡು ಬಂದಿದೆ. ಇನ್ನು ರಾರಾ ರಕ್ಕಮ್ಮ ಡ್ಯಾನ್ಸ್ ನ ತೆರೆಯ ಮೇಲೆ ನೋಡೋದೇ ಮಜಾ ಕಣ್ರೀ.. ಗಡಂಗ್ ರಕ್ಕಮ್ಮ ಅನ್ನೋ ಪಾತ್ರವನ್ನ ಜಾಕ್ವೆಲಿನ್ ಫೆರ್ನಾಂಡಿಸ್ ಸೂಪರ್ ಆಗೇ ಮಾಡಿದ್ದಾರೆ. ಸೇಂಧಿ ಮಾರೋ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

ಸಖತ್ ಕಿಕ್ ಕೊಡೋ ವಿಕ್ರಾಂತ್ ರೋಣ ಸಿನಿಮಾವನ್ನ 3D ಗ್ಲಾಸ್ ಹಾಕೊಂಡು ನೋಡೋದೇ ಮಜಾ ಬಿಡಿ. ಆದ್ರೆ ಕೆಲವೊಮ್ಮೆ ದೃಶ್ಯಗಳು ಮತ್ತು ವಸ್ತುಗಳು ಬ್ಲರ್ ಆಗಿ ಕಾಣಿಸಿದುಂಟು. ಅಜನೀಶ್ ಲೋಕನಾಥ್ ಸಂಗೀತ ಅದ್ಭುತವಾಗಿದೆ. ಛಾಯಾಗ್ರಾಹಕ ವಿಲಿಯಮ್ ಡೇವಿಡ್ ಕೆಲ್ಸ ಕೂಡ ಇಲ್ಲಿ ವರ್ಕ್ ಆಗಿದೆ. ನೈಜ ದೃಶ್ಯಗಳು ಅನ್ನೋ ಫೀಲ್ ಕೊಟ್ಟಿದೆ.

ಏನೇ ಅನ್ನಿ ವಿಕ್ರಾಂತ್ ರೋಣ ಸಿನಿಮಾ ತುಂಬಾ ಕ್ಯೂರಿಸಿಟಿ ಹುಟ್ಟಿಸೋ ಸಿನಿಮಾ. ಇಡೀ ಫ್ಯಾಮಿಲಿ ಕುಳಿತು ನೋಡೋ ಸಿನಿಮಾ.ಕೆಲವು ದೃಶ್ಯಗಳು ನಿಮ್ಮನ್ನ ಸೀಟ್ ತುದಿಯಲ್ಲಿ ಕೂರುವಂತೆ ಮಾಡೋದು ಪಕ್ಕಾ. ಕ್ಲೈಮಾಕ್ಸ್ ಮಾತ್ರ ಉಸಿರು ಕಟ್ಟುವಂತೆ ಮಾಡುತ್ತೆ. ಕೆಲವು ಕಡೆ ಏನೋ ಮಿಸ್ ಆಗಿದೆ ಅನಿಸಿದ್ದು ಉಂಟು. ಏನಿದೆ ಸಿನಿಮಾದಲ್ಲಿ ಅನ್ನೋದನ್ನ 
ಫುಲ್ ನೋಡಲು ಥೀಯೇಟರ್ ಗೆ ಬನ್ನಿ.

ಇದನ್ನೂ ಓದಿ: Box Office Analysis: ಹೈ ಬಜೆಟ್ ಆಕ್ಷನ್ ಅಡ್ವೆಂಚರ್ ಸಿನಿಮಾ ವಿಕ್ರಾಂತ್ ರೋಣ

ನೀತಾ ಅಶೋಕ್, ರವಿಶಂಕರ್ ಗೌಡ, ವಾಸುಕಿ ವೈಭವ್​, ರಮೇಶ್ ಕುಕ್ಕುವಲ್ಲಿ, ಚಿತ್ಕಲಾ ಬಿರಾದಾರ್​ ಮೊದಲಾದವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್ ಅವರು ‘ರಾ ರಾ ರಕ್ಕಮ್ಮ’ ಹಾಡಿನಲ್ಲಿ ಸಖತ್ ಆಗಿ ಹೆಜ್ಜೆ ಹಾಕಿದ್ದು, ಈ ಹಾಡಿಗೆ ಸಿಳ್ಳೆ ಗ್ಯಾರಂಟಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News