Vikrant Rona ಬಗ್ಗೆ ಹೀಗಂದಿದ್ದೇಕೆ ಬಾಲಿವುಟ್‌ ನಟ ರಿತೇಶ್ ದೇಶಮುಖ್?

Riteish Deshmukh on Vikrant Rona : ಕಿಚ್ಚ ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ವಿಕ್ರಾಂತ್ ರೋಣ ಇಂದು ಜುಲೈ 28 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. 800 ಕ್ಕೂ ಹೆಚ್ಚು ವಿಎಫ್‌ಎಕ್ಸ್ ಕಲಾವಿದರನ್ನು ಬಳಸಿಕೊಂಡು 3D ಯಲ್ಲಿ ವಿಕ್ರಾಂತ್ ರೋಣ ಪ್ರಪಂಚವನ್ನು ಸೃಷ್ಟಿಸಲಾಗಿದೆ. 

Written by - Chetana Devarmani | Last Updated : Jul 28, 2022, 01:04 PM IST
  • ಕಿಚ್ಚ ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ
  • ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ವಿಕ್ರಾಂತ್ ರೋಣ
  • ಸಿನಿಮಾ ಬಗ್ಗೆ ಹೀಗಂದಿದ್ದೇಕೆ ಬಾಲಿವುಟ್‌ ನಟ ರಿತೇಶ್ ದೇಶಮುಖ್?
Vikrant Rona ಬಗ್ಗೆ ಹೀಗಂದಿದ್ದೇಕೆ ಬಾಲಿವುಟ್‌ ನಟ ರಿತೇಶ್ ದೇಶಮುಖ್? title=
ನಟ ರಿತೇಶ್ ದೇಶಮುಖ್

Riteish Deshmukh on Vikrant Rona : ಕಿಚ್ಚ ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ವಿಕ್ರಾಂತ್ ರೋಣ ಇಂದು ಜುಲೈ 28 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. 800 ಕ್ಕೂ ಹೆಚ್ಚು ವಿಎಫ್‌ಎಕ್ಸ್ ಕಲಾವಿದರನ್ನು ಬಳಸಿಕೊಂಡು 3D ಯಲ್ಲಿ ವಿಕ್ರಾಂತ್ ರೋಣ ಪ್ರಪಂಚವನ್ನು ಸೃಷ್ಟಿಸಲಾಗಿದೆ. ಕಿಚ್ಚ ಸುದೀಪ್ ಅವರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಈ ಚಿತ್ರವು ಒಂದು ರೀತಿಯ ಥ್ರಿಲ್ಲಿಂಗ್ ಅನುಭವವನ್ನು ಹೊಂದಿದೆ. ಅದ್ಭುತ ದೃಶ್ಯ ಮಾತ್ರವಲ್ಲದೆ ಕಥೆ, ಸಂಗೀತ ಮತ್ತು ನಟೆನೆಯಿಂದ ಸಮೃದ್ಧವಾಗಿದೆ ಎಂದು ಹೇಳಲಾಗುತ್ತದೆ. ಇದೀಗ ಈ ಸಿನಿಮಾವನ್ನು ನೋಡಿದ ಅನೇಕರು ಇದೊಂದು ಭಾರತೀಯ ಚಿತ್ರರಂಗದ ಅತಿದೊಡ್ಡ 3D ಅನುಭವ ಎಂದು ಹೇಳುತ್ತಿದ್ದಾರೆ. 

ಇದನ್ನೂ ಓದಿ: Vikrant Rona Collection: ವಿಕ್ರಾಂತ್ ರೋಣ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಬಹುದು?

ಕಿಚ್ಚ ಸುದೀಪ್‌ ಅವರಿಗೆ ಕನ್ನಡ ಮಾತ್ರವಲ್ಲ ಬೇರೆ ಸಿನಿಮಾ ಇಂಡಸ್ಟ್ರಿಯಲ್ಲಿಯೂ ಸ್ನೇಹಿತರಿದ್ದಾರೆ. ಕಿಚ್ಚನ ವಿಕ್ರಾಂತ್‌ರೋಣ ಸಿನಿಮಾಗೆ ತಮಿಳು, ಮಲಯಾಳಂ, ತೆಲಗು, ಹಿಂದಿ ಸಿನಿಮಾ ಉದ್ಯಮದ ಸ್ಟಾರ್‌ ನಟರು ಸಾಥ್‌ ನೀಡಿದ್ದಾರೆ. ಅನೇಕರು ಶುಭ ಹಾರೈಸಿದ್ದಾರೆ. ರಾಜಮೌಳಿ ಸೇರಿದಂತೆ ಸಿನಿಮಾ ಜಗತ್ತಿನ ಪ್ರಖ್ಯಾತರು ಸುದೀಪ್‌ ಸಿನಿಮಾಗೆ ಆಲ್‌ ದಿ ಬೆಸ್ಟ್‌ ಹೇಳಿದ್ದಾರೆ. 

ಇದೀಗ ಬಾಲಿವುಡ್‌ ನಟ ರಿತೇಶ್ ದೇಶಮುಖ್‌ ವಿಕ್ರಾಂತ್‌ ರೋಣ ಸಿನಿಮಾ ಹಾಗೂ ಸುದೀಪ್‌ ನಟನೆಯ ಬಗ್ಗೆ ಟ್ವೀಟ್‌ ಮಾಡಿದ್ದಾರೆ. "ಬ್ಲಾಕ್‌ಬಾಸ್ಟರ್‌ ಅಲರ್ಟ್‌!! 3D ಯಲ್ಲಿ #VikrantRona ಅನುಭವವು ಅದ್ಭುತವಾಗಿದೆ. ಬೋನ್ ಚಿಲ್ಲಿಂಗ್ ಥ್ರಿಲ್ಲರ್. ನಾನು ನಿನ್ನ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ ನನ್ನ ಸಹೋದರ!!" ಎಂದು ರಿತೇಶ್‌ ಬರೆದುಕೊಂಡಿದ್ದಾರೆ. 

 

 

ವಿಕ್ರಾಂತ್​ ರೋಣ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಸುದೀಪ್‌, ಜಾಕ್ವೆಲಿನ್‌ ಫರ್ನಾಂಡೀಸ್‌, ನಿರೂಪ್​ ಭಂಡಾರಿ, ನೀತಾ ಅಶೋಕ್ ನಟಿಸಿದ್ದು ಬೇರೆ ಬೇರೆ ಭಾಷೆಗಳಿಗೆ ಡಬ್​ ಆಗಿದೆ. ಶಾಲಿನಿ ಆರ್ಟ್ಸ್ ಬ್ಯಾನರ್​ ಅಡಿ ಜಾಕ್​ ಮಂಜು ಚಿತ್ರ ನಿರ್ಮಾಣ ಮಾಡಿದ್ದು, ಅಲಂಕಾರ್​ ಪಾಂಡಿಯನ್​ ಸಹ-ನಿರ್ಮಾಪಕರಾಗಿದ್ದಾರೆ. ಈ ಸಿನಿಮಾ ಮೂಲಕ ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸ್ಯಾಂಡಲ್‌ವುಡ್‌ಗೆ ಹೆಜ್ಜೆ ಇಡುತ್ತಿದ್ದಾರೆ. ಇಷ್ಟೆಲ್ಲ ವಿಶೇಷತೆ ಹೊಂದಿರುವ ಈ ಸಿನಿಮಾ ಸದ್ಯ ವಿಶ್ವಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. 

ಇದನ್ನೂ ಓದಿ: ವಿಕ್ರಾಂತ್‌ ರೋಣ ಟ್ವಿಟರ್‌ ರಿವೀವ್!‌ ಸಿನಿಮಾ ನೋಡಿದವ್ರು ಏನಂದ್ರು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News