ಬೆಂಗಳೂರು : ಉಗ್ರಾವತಾರ ಸಿನಿಮಾದ ʼಹೆಂಗೆ ಬರ‍್ತೋಳ್ ನೋಡೋʼ ನೋಡಿದ್ರೆ ಏನೋ ಒಂಥರಾ ಪಾಸಿಟೀವ್‌ ವೈಬ್‌ರೇಷನ್ ಬರುತ್ತೆ. ಈ ಹಾಡನ್ನು ನೋಡಿದ್ರೆ ಮಂಜುಳಾ, ಮಾಲಾಶ್ರೀ ನೆನೆಪಿಗೆ ಬರ್ತಾರೆ ಎಂದು ನಟ ಉಪೇಂದ್ರ ಹೇಳಿದರು.


COMMERCIAL BREAK
SCROLL TO CONTINUE READING

ʼಉಗ್ರಾವತಾರʼ ಚಿತ್ರದ ಹಾಡಿನ ಬಿಡುಗಡೆ ಕಾರ್ಯಕ್ರಮ ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನಡೆಯಿತು. ʼಹಂಗೆ ಬರ‍್ತೋಳ್ ನೋಡೋʼ ಗೀತೆಯನ್ನು ರಿಯಲ್ ಸ್ಟಾರ್ ಉಪೇಂದ್ರ ಲೋಕಾರ್ಪಣೆ ಮಾಡಿದರು. ನಂತರ ಮಾತನಾಡಿ ಸಿದ್ದಿ ಸಹೋದರಿಯರ ಕಂಠದಲ್ಲಿ ಮ್ಯಾಜಿಕ್ ಇದೆ. ʼಸಲಗʼದಲ್ಲಿ ಧೂಳ್ ಎಬ್ಬಿಸಿದ್ದೀರಾ. ಇದರಲ್ಲಿ ಪ್ರಿಯಾಂಕ ಅವರೊಂದಿಗೆ ಹೆಜ್ಜೆ ಹಾಕಿದ್ದೀರಾ. ಸಾಂಗ್ ನೋಡಿದರೆ ಏನೋ ಒಂಥರ ಪಾಸಿಟೀವ್ ವೈಬ್‌ರೇಷನ್ ಕಾಣುತ್ತದೆ ಎಂದರು.


ಇದನ್ನೂ ಓದಿ: ರ್‍ಯಾಶ್ ಡ್ರೈವಿಂಗ್ : ಪವನ್‌ ಕಲ್ಯಾಣ್‌ ಮೇಲೆ ಕೇಸ್‌ ದಾಖಲು


ಅಲ್ಲದೆ, ಬಹಳ ವರ್ಷಗಳ ನಂತರ ಮಹಿಳಾ ಪ್ರಧಾನ ಆಕ್ಷನ್ ಚಿತ್ರವು ಬರುತ್ತಿದೆ. ಸಾಹಸ ಚಿತ್ರದಲ್ಲಿ ಮಾಲಾಶ್ರೀ, ಅದರ ಹಿಂದೆ ಮಂಜುಳಾ ಮಾಡ್ತಾ ಇದ್ದರು. ಸದ್ಯ ಫಿಮೇಲ್ ಸಿನಿಮಾಗಳು ಕಡಿಮೆಯಾಗುತ್ತಿದೆ. ಈ ಪಾತ್ರವು ಇವರಿಗೆ ಸೂಟ್ ಆಗಿದೆ. ಆದಷ್ಟು ಬೇಗನೆ ಚಿತ್ರ ತೋರಿಸಿ. ಆಹ್ವಾನದಲ್ಲೇ ಸೂಪರ್ ಆಗಿದೆ. ಜನ ಚಿತ್ರಮಂದಿರಕ್ಕೆ ಹಂಗೇ ಬರ‍್ತಾರೋ ನೋಡೋ ಅನ್ನುವ ಆಗಿದೆ. ಅದೇ ಪ್ರೀತಿಯಿಂದ ಖಂಡಿತ ಜನರು ನೋಡುತ್ತಾರೆ. ನಿರ್ಮಾಪಕರು ಎಲ್ಲೂ ರಾಜಿಯಾಗದೆ ಇರುವುದರಿಂದ ದೃಶ್ಯಗಳು ಚೆನ್ನಾಗಿ ಬಂದಿದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಚಿತ್ರತಂಡಕ್ಕೆ ಬೆಸ್ಟ್‌ ವಿಶ್‌ ತಿಳಿಸಿದ್ರು.


ನಾಯಕಿ ಪ್ರಿಯಾಂಕಉಪೇಂದ್ರ ಮಾತನಾಡಿ ಈ ಪಾತ್ರವನ್ನು ನನ್ನಿಂದ ಮಾಡಲು ಸಾಧ್ಯನಾ ಎಂಬ ಪ್ರಶ್ನೆ ಕಾಡಿತು. ಛಾಲೆಂಜ್ ಆಗಿ ತೆಗೆದುಕೊಂಡಿದ್ದಕ್ಕೆ ಸಾದ್ಯವಾಯಿತು. ಡ್ಯೂಪ್ ಬಳಸದೆ ಫೈಟ್ ಮಾಡಿದ್ದೇನೆ. ಅದಕ್ಕಾಗಿ ತರಭೇತಿ ಪಡೆದುಕೊಂಡಿದ್ದೆ. ತುಂಬಾ ಸ್ವಾಭಾವಿಕ ಇರಬಾರದೆಂದು, ಮಹಿಳಾ ಅಧಿಕಾರಿಗಳು ಹೇಗೆ ಫೈಟ್ ಮಾಡುತ್ತಾರೆ ಎಂಬುದನ್ನು ನೋಡಿಕೊಂಡು ಅದೇ ರೀತಿ ಕ್ಯಾಮಾರ ಮುಂದೆ ಅಭಿನಯಸಿದ್ದೇನೆ. ಸಮಾಜದಲ್ಲಿ ಶೋಷಣೆಗೆ ಒಳಗಾಗಿ, ಯಾವ ರೀತಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರುಗಳಿಗೆ ಸಹಕಾರಿಯಾಗಿ ಪೋಲೀಸ್ ಇರುತ್ತಾರೆ ಎಂಬುದನ್ನು ಹೇಳಲಾಗಿದೆ. ಕೋವಿಡ್‌ನಿಂದ ಸ್ವಲ್ಪ ತಡವಾಗಿದೆ. ಸಿದ್ದ ಸಹೋದರಿಯರೊಂದಿಗೆ ಸಾಂಗ್ ರೆರ್ಕಾಡಿಂಗ್ ಸಮಯದಲ್ಲೆ ಒಂದರೆಡು ಹೆಜ್ಜೆ ಹಾಕಿದ್ದೆ. ಅದು ಚಿತ್ರೀಕರಣದಲ್ಲಿ ಸುಲಭವಾಯಿತು. ಉಪೇಂದ್ರ ಅವರಿಗೆ ಇಷ್ಟವಾದರೆ ಎಲ್ಲರಿಗೂ ಇಷ್ಟವಾದಂತೆ ಅಂತ ಖುಷಿ ಹಂಚಿಕೊಂಡರು.


ಇದನ್ನೂ ಓದಿ: ಶೀಘ್ರದಲ್ಲೇ ಕೆಜಿಎಫ್ 2 ದಾಖಲೆ ಅಳಿಸಲಿದೆ ಕಾಂತಾರ ಸಿನಿಮಾ....!


ಕಥೆ ಕೇಳಿ ಅದಕ್ಕೆತಕ್ಕಂತೆ ಸಾಹಿತ್ಯ ಬರೆಯಲಾಗಿದೆ. ಮೇಡಂ ಜತೆಗೆ ಡ್ಯಾನ್ಸ್ ಮಾಡಿದ್ದು ತೃಪ್ತಿ ತಂದುಕೊಟ್ಟಿದೆ. ’ಸಲಗ’ದ ನಂತರ ಎರಡನೇ ಅವಕಾಶ ಸಿಕ್ಕಿದೆ. ಕನ್ನಡ ಹಾಗೂ ಕೊಂಕಣಿ ಭಾಷೆಯನ್ನು ಬಳಸಲಾಗಿದೆ. ನಿಮಗೆಲ್ಲಾ ಇಷ್ಟವಾಗುತ್ತದೆಂದು ಅಂತ ನಂಬಿರುವೆನೆಂದು ಸಿದ್ದಿ ಸಹೋದರಿಯಲ್ಲಿ ಒಬ್ಬರಾದ ಗಿರಿಜಾ ಹೇಳಿದರು. ನಿರ್ದೇಶಕ ಗುರುಮೂರ್ತಿ, ನಿರ್ಮಾಪಕ ಸತೀಶ್, ಸಂಭಾಷಣೆ ಬರೆದಿರುವ ಕಿನ್ನಾಳ್‌ರಾಜ್, ಛಾಯಾಗ್ರಾಹಕ ನಂದಕುಮಾರ್ ಅನುಭವಗಳನ್ನು ಹೇಳಿಕೊಂಡರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.