ಶೀಘ್ರದಲ್ಲೇ ಕೆಜಿಎಫ್ 2 ದಾಖಲೆ ಅಳಿಸಲಿದೆ ಕಾಂತಾರ ಸಿನಿಮಾ....!

ಈಗ ಬಾಕ್ಸ್ ಆಫೀಸ್ ನಲ್ಲಿ ಕಾಂತರ ಚಿತ್ರ ನಡೆದದ್ದೇ ಹಾದಿ ಎನ್ನುವಂತೆ ಹೊಸ ದಾಖಲೆಗಳ ಮೇಲೆ ದಾಖಲೆಯನ್ನು ನಿರ್ಮಿಸುತ್ತಿದೆ.

Written by - Zee Kannada News Desk | Last Updated : Nov 12, 2022, 09:21 PM IST
  • ಕಾಂತಾರ ಕರ್ನಾಟಕದಲ್ಲಿ ಒಟ್ಟು 152.90 ಕೋಟಿ ಗಳಿಸುವ ಮೂಲಕ ರಾಜ್ಯದಲ್ಲಿ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿದೆ.
  • ಒಟ್ಟು 155 ಕೋಟಿ ನಿವ್ವಳದೊಂದಿಗೆ ಕೆಜಿಎಫ್ ಚಾಪ್ಟರ್ 2 ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.
ಶೀಘ್ರದಲ್ಲೇ ಕೆಜಿಎಫ್ 2 ದಾಖಲೆ ಅಳಿಸಲಿದೆ ಕಾಂತಾರ ಸಿನಿಮಾ....! title=

ಬೆಂಗಳೂರು: ಈಗ ಬಾಕ್ಸ್ ಆಫೀಸ್ ನಲ್ಲಿ ಕಾಂತರ ಚಿತ್ರ ನಡೆದದ್ದೇ ಹಾದಿ ಎನ್ನುವಂತೆ ಹೊಸ ದಾಖಲೆಗಳ ಮೇಲೆ ದಾಖಲೆಯನ್ನು ನಿರ್ಮಿಸುತ್ತಿದೆ.

ಇದನ್ನೂ ಓದಿ: Pramod Muthalik : 'ಹಠದಿಂದ ಸ್ವಂತ ಜಾಗದಲ್ಲಿ ಟಿಪ್ಪು ಪ್ರತಿಮೆ ಕಟ್ಟುತ್ತೀವಿ ಅಂದ್ರೂ ಬಿಡಲ್ಲ'

ಈಗ ಜಾಗತಿಕವಾಗಿ ಅತಿ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ ಎರಡನೇ ಸಿನಿಮಾ ಎನ್ನುವ ಹೆಗ್ಗಳಿಕೆಗೆ ರಿಶಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ಪಾತ್ರವಾಗಿದೆ. ನಿನ್ನೆಯಷ್ಟೇ, ಈ ಚಿತ್ರ ಕರ್ನಾಟಕದಲ್ಲಿ 1 ಕೋಟಿಗೂ ಟಿಕೆಟ್ ಗಳು ಮಾರಾಟವಾಗಿ ಈಗ ಹೊಸ ದಾಖಲೆಯನ್ನು ನಿರ್ಮಿಸಿದೆ.ಅಷ್ಟೇ ಅಲ್ಲದೆ ಕರ್ನಾಟಕದಲ್ಲಿ ಶೀರ್ಘ್ರದಲ್ಲೇ ಅತಿ ಹೆಚ್ಚು ಬಾಕ್ಸ್ ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಇದನ್ನೂ ಓದಿ: IAS ಅಧಿಕಾರಿ ಟೀನಾ ದಾಬಿ ನ್ಯೂ ಲುಕ್‌ : ಯಾವ ಹಿರೋಯಿನ್‌ಗೂ ಕಮ್ಮಿ ಇಲ್ಲ ಇವರು..!

ಸದ್ಯಕ್ಕೆ, ಕಾಂತಾರ ಕರ್ನಾಟಕದಲ್ಲಿ ಒಟ್ಟು 152.90 ಕೋಟಿ ಗಳಿಸುವ ಮೂಲಕ ರಾಜ್ಯದಲ್ಲಿ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿದೆ.  ಇನ್ನೊಂದೆಡೆಗೆ ಒಟ್ಟು 155 ಕೋಟಿ ನಿವ್ವಳದೊಂದಿಗೆ ಕೆಜಿಎಫ್ ಚಾಪ್ಟರ್ 2 ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಚಿತ್ರವು ಕೇವಲ 2.10 ಕೋಟಿಗಳಷ್ಟು ಹಿಂದೆ ಇದ್ದು, ಶೀಘ್ರದಲ್ಲೇ ಈ ದಾಖಲೆಯನ್ನು ಮುರಿಯಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

 

Trending News