ನವದೆಹಲಿ: ಬಾಲಿವುಡ್ ನಟಿ ಊರ್ವಶಿ ರೌಟೇಲಾ ಇತ್ತೀಚಿನ ದಿನಗಳಲ್ಲಿ ತಮ್ಮ ಚಿತ್ರಗಳಿಗಿಂತಲೂ ಸಂಬಂಧದ ವಿಚಾರವಾಗಿ ಚರ್ಚೆಯಲ್ಲಿದ್ದಾರೆ. ಈ ನಟಿಯ ಹೆಸರು ಟೀಂ ಇಂಡಿಯಾದ ಆಟಗಾರ ರಿಷಭ್ ಪಂತ್ ಜೊತೆ ಹಲವು ಬಾರಿ ತಳುಕು ಹಾಕಿಕೊಂಡಿತ್ತು. ಇದಲ್ಲದೇ ಇವರಿಬ್ಬರ ನಡುವಿನ ಜಗಳವೂ ಮುನ್ನೆಲೆಗೆ ಬಂದು ದೊಡ್ಡ ಸುದ್ದಿಯಾಗಿತ್ತು. ಆದರೆ ಈಗ ಊರ್ವಶಿಯ ಹೃದಯ ಬೇರೆ ದೇಶದ ಕ್ರಿಕೆಟಿಗನ ಮೇಲೆ ಬಿದ್ದಂತಿದೆ. ಆ ಕ್ರಿಕೆಟಿಗನ ವಿಡಿಯೋವನ್ನು ಕೂಡ ನಟಿ ಶೇರ್ ಮಾಡಿದ್ದಾರೆ. ಈ ವಿಡಿಯೋ ಹೊರಬಿದ್ದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್‌ಗಳ ಮಹಾಪೂರವೇ ಹರಿದುಬಂದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ʼಗೋಮಾಂಸ ತಿನ್ನಲು ಇಷ್ಟʼ ಎಂದಿದ್ದ ರಣಬೀರ್‌ ಕಪೂರ್‌ಗೆ ಮಹಾಕಾಲ್ ದೇಗುಲ ಪ್ರವೇಶ ನಿರಾಕರಣೆ


Team India: ಏಷ್ಯಾಕಪ್‌ನೊಂದಿಗೆ ಈ 2 ಆಟಗಾರರ ವೃತ್ತಿಜೀವನ ಬಹುತೇಕ ಅಂತ್ಯ..?


ಊರ್ವಶಿ ನಸೀಮ್‌ಗಿಂತ 9 ವರ್ಷ ದೊಡ್ಡವಳು


ಊರ್ವಶಿ ರೌಟೇಲಾ ಅವರಿಗೆ 28 ​​ವರ್ಷ, ನಸೀಮ್ ಶಾ ಅವರಿಗೆ 19 ವರ್ಷ. ಇನ್ನು ರಿಷಭ್ ಪಂತ್ ಬಗ್ಗೆ ಹೇಳುವುದಾದರೆ ಅವರಿಗೆ ಕೇವಲ 24 ವರ್ಷ. ಒಂದು ಮೀಮ್‌ನಲ್ಲಿ ‘ರಿಷಭ್ ಪಂತ್ ಮತ್ತು ಊರ್ವಶಿ ರೌಟೇಲಾ ನಡುವಿನ 'ಛೋಟು ಭಯ್ಯಾ' ಮತ್ತು 'ದೀದಿ' ನಡುವಿನ ಜಗಳ ಈಗ ತ್ರಿಕೋನ ಪ್ರೇಮಕ್ಕೆ ತಿರುಗಿದೆ. ಇದೀಗ ಇದರಲ್ಲಿ ಪಾಕ್ ಕ್ರಿಕೆಟಿಗ ನಸೀಮ್ ಶಾ ಎಂಟ್ರಿ ಪಡೆದಿದ್ದಾರೆ’ ಅಂತಾ ಹಾಸ್ಯ ಚಟಾಕಿ ಹಾರಿಸಲಾಗಿದೆ. ಪಾಕ್ ಕ್ರಿಕೆಟಿಗರ ಜೊತೆಗಿರುವ ವಿಡಿಯೋ ಹಂಚಿಕೊಂಡಿರುವ ಊರ್ವಶಿಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.