Team India: ಏಷ್ಯಾಕಪ್‌ನೊಂದಿಗೆ ಈ 2 ಆಟಗಾರರ ವೃತ್ತಿಜೀವನ ಬಹುತೇಕ ಅಂತ್ಯ..?

ಸತತ 2 ಸೋಲು ಕಂಡ ಟೀಂ ಇಂಡಿಯಾ ಏಷ್ಯಾ ಕಪ್ ಟೂರ್ನಿಯಿಂದ ಹೊರಬಿದ್ದಿದೆ.  ಸೂಪರ್ 4ರ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೋತ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧವೂ ಹೀನಾಯ ಸೋಲು ಕಂಡಿತು. ಈ ಸೋಲಿನ ನಂತರ ಭಾರತ ತಂಡದ ಇಬ್ಬರು ಆಟಗಾರರ ವೃತ್ತಿ ಜೀವನ ಬಹುತೇಕ ಅಂತ್ಯವೆಂದು ಹೇಳಲಾಗುತ್ತಿದೆ.

Written by - Puttaraj K Alur | Last Updated : Sep 7, 2022, 11:20 AM IST
  • ಏಷ್ಯಾಕಪ್‍ ಟೂರ್ನಿಯಲ್ಲಿ ಭುವನೇಶ್ವರ್ ಕುಮಾರ್ & ಕೆ.ಎಲ್.ರಾಹುಲ್ ಕಳಪೆ ಪ್ರದರ್ಶನ
  • ಭಾರತ ತಂಡದ ಸೋಲಿಗೆ ಕಾರಣರಾದ ಆಟಗಾರರ ವೃತ್ತಿಜೀವನ ಇದೀಗ ಅತಂತ್ರ ಸ್ಥಿತಿಯಲ್ಲಿ
  • ಕೋಟ್ಯಂತರ ಭಾರತೀಯರಿಗೆ ನಿರಾಸೆ ಮೂಡಿಸಿ ಏಷ್ಯಾಕಪ್‍ನಿಂದ ಹೊರಬಿದ್ದ ಟೀಂ ಇಂಡಿಯಾ
Team India: ಏಷ್ಯಾಕಪ್‌ನೊಂದಿಗೆ ಈ 2 ಆಟಗಾರರ ವೃತ್ತಿಜೀವನ ಬಹುತೇಕ ಅಂತ್ಯ..? title=
Asia Cup 2022

ನವದೆಹಲಿ: ಏಷ್ಯಾಕಪ್ ಆರಂಭಕ್ಕೂ ಮುನ್ನ ಟೀಂ ಇಂಡಿಯಾವೇ ಪ್ರಶಸ್ತಿ ಗೆಲ್ಲುವ ಪ್ರಬಲ ಸ್ಪರ್ಧಿ ಅಂತಾ ಪರಿಗಣಿಸಲಾಗಿತ್ತು. ಅದರಂತೆ ಭಾರತ ತಂಡವು ಭರ್ಜರಿಯಾಗಿಯೇ ಟೂರ್ನಿಯನ್ನು ಆರಂಭಿಸಿತ್ತು. ಆದರೆ ಸೂಪರ್-4ರ ಹಂತದಲ್ಲಿ ಸತತ 2 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡ ಟೀಂ ಇಂಡಿಯಾ ಟೂರ್ನಿಯಿಂದ ಹೊರಬಿದ್ದಿದೆ. ಈ ಮೂಲಕ ಕೋಟ್ಯಂತರ ಭಾರತೀಯರಿಗೆ ದೊಡ್ಡ ನಿರಾಸೆ ಮೂಡಿದೆ. ಟೀಂ ಇಂಡಿಯಾ ಸೋಲಿಗೆ ಹಲವು ಆಟಗಾರರು ಕಾರಣರಾಗಿದ್ದಾರೆ. ಈ ಪೈಕಿ ಇಬ್ಬರು ಆಟಗಾರರ ಇಡೀ ಏಷ್ಯಾಕಪ್‌ನಲ್ಲಿಯೇ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ಈ ಇಬ್ಬರೂ ಆಟಗಾರರು ಮುಂದಿನ ದಿನಗಳಲ್ಲಿ ಭಾರತ ತಂಡದಿಂದ ಶಾಶ್ವತವಾಗಿ ಹೊರಗುಳಿಯಬಹುದು ಎನ್ನಲಾಗುತ್ತಿದೆ.   

1. ಭುವನೇಶ್ವರ್ ಕುಮಾರ್

ಟೀಂ ಇಂಡಿಯಾದ ಅತ್ಯಂತ ವಿಶ್ವಾಸಾರ್ಹ ಬೌಲರ್ ಏಷ್ಯಾಕಪ್‌ನಲ್ಲಿ ತಂಡದ ದೊಡ್ಡ ವಿಲನ್ ಆದರು. ಸೂಪರ್ 4ರಲ್ಲಿ ಭಾರತ ತಂಡದ ಸೋಲಿಗೆ ಯಾರಾದರೂ ದೊಡ್ಡ ಹೊಣೆಗಾರರಾಗಿದ್ದರೆ ಅದು ಭುವನೇಶ್ವರ್ ಕುಮಾರ್. ಈ ಪಂದ್ಯವನ್ನು ಗೆಲ್ಲಲು ಶ್ರೀಲಂಕಾಗೆ ಕೊನೆಯ 2 ಓವರ್‌ಗಳಲ್ಲಿ 21 ರನ್‍ಗಳ ಅಗತ್ಯವಿತ್ತು. ಆದ್ದರಿಂದ ರೋಹಿತ್ ಭುವನೇಶ್ವರ್‌ನಲ್ಲಿ ವಿಶ್ವಾಸವಿರಿಸಿ ಅವರಿಗೆ 19 ನೇ ಓವರ್ ನೀಡಿದರು. ಆದರೆ ಭುವಿ ಅವರ ಅನುಭವದ ಲಾಭ ಪಡೆಯಲು ಸಾಧ್ಯವಾಗಲಿಲ್ಲ. ಅವರು ಈ ಓವರ್‌ನಲ್ಲಿ 14 ರನ್ ಬಿಟ್ಟುಕೊಟ್ಟರು. ಇದರಿಂದ ಟೀ ಇಂಡಿಯಾ ಗೆಲ್ಲುವ ಪಂದ್ಯದಲ್ಲಿ ಸೋಲು ಕಾಣಬೇಕಾಯಿತು.

ಇದನ್ನೂ ಓದಿ: IND vs SL: ಲಂಕಾ ವಿರುದ್ಧ ಭಾರತಕ್ಕೆ ಗೆಲ್ಲಲೇಬೇಕಾದ ಅನಿವಾರ್ಯತೆ: ಪ್ಲೇಯಿಂಗ್ XIನಲ್ಲಿ ಭಾರೀ ಬದಲಾವಣೆ!

ಪಾಕಿಸ್ತಾನದ ವಿರುದ್ಧವೂ ಇದೇ ರೀತಿ ಆಗಿತ್ತು. ಆ ಪಂದ್ಯದಲ್ಲಿಯೂ ಸಹ 19ನೇ ಓವರ್‌ನ ಜವಾಬ್ದಾರಿಯನ್ನು ಭುವಿಗೆ ನೀಡಲಾಗಿತ್ತು. ಪಾಕಿಸ್ತಾನದ ವಿರುದ್ಧವೂ ಅವರು 19ನೇ ಓವರ್‌ನಲ್ಲಿ 19 ರನ್ ಬಿಟ್ಟುಕೊಟ್ಟಿದ್ದರು. ಈ ಎರಡೂ ಪಂದ್ಯಗಳ ಕೊನೆಯ ಓವರ್‌ನಲ್ಲಿ ಅರ್ಷದೀಪ್ ಸಿಂಗ್ ಚೆನ್ನಾಗಿ ಬೌಲಿಂಗ್ ಮಾಡಿದರೂ ಭಾರತ ಸೋಲು ಕಾಣಬೇಕಾಯಿತು. ಭಾರತ ತಂಡದ ಸೋಲಿಗೆ ಭುವಿ ಕಳಪೆ ಬೌಲಿಂಗ್ ಕಾರಣವಾಯಿತು. ಹಿಗಾಗಿ ಭುವಿ ಭವಿಷ್ಯ ಇದೀಗ ಅತಂತ್ರವಾಗಿದೆ.

2. ಕೆ.ಎಲ್.ರಾಹುಲ್

ಟೀಂ ಇಂಡಿಯಾದ ಸ್ಟಾರ್ ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಏಷ್ಯಾಕಪ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದರು. ಏಷ್ಯಾಕಪ್‌ಗೂ ಮುನ್ನ ರಾಹುಲ್ ಸಂಪೂರ್ಣ ಫಿಟ್ ಆಗಿದ್ದಾರೋ ಇಲ್ಲವೋ ಎಂಬ ಪ್ರಶ್ನೆಗಳು ಎದ್ದಿದ್ದವು. ರಾಹುಲ್ ಆರಂಭಿಕರಾಗಿ ಸಂಪೂರ್ಣ ವಿಫಲರಾದರು. ರಾಹುಲ್ ಶ್ರೀಲಂಕಾ ವಿರುದ್ಧ ಕೇವಲ 6 ರನ್ ಗಳಿಸಿ ಔಟಾದರು. ಭಾನುವಾರ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ರಾಹುಲ್ ಕೇವಲ 28 ರನ್ ಗಳಿಸಿ ಔಟಾದರು.

ಇದನ್ನೂ ಓದಿ: Suresh Raina Retirement: ಎಲ್ಲಾ ಮಾದರಿಯ ಕ್ರಿಕೆಟ್ ಗೆ ಸುರೇಶ್ ರೈನಾ ನಿವೃತ್ತಿ: ಇನ್ಮುಂದೆ ಚಿನ್ನತಾಲಾ ಆಟ ನೋಡೋಕಾಗಲ್ಲ!

ಅವರು ಇದುವರೆಗೆ ತಮ್ಮ 3 ಏಷ್ಯಾ ಕಪ್ ಪಂದ್ಯಗಳಲ್ಲಿ 106.67 ಸ್ಟ್ರೈಕ್ ರೇಟ್‌ನಲ್ಲಿ 28 ರನ್ ಗಳಿಸಿದ್ದಾರೆ. ರಾಹುಲ್ ಅವರನ್ನು ವಿಶ್ವಕಪ್‌ನಿಂದ ಹೊರಗಿಟ್ಟರೆ ಸರಿ ಎಂಬ ಪ್ರಶ್ನೆಗಳು ಈಗ ಅವರ ಕಳಪೆ ಪ್ರದರ್ಶನದ ಬಗ್ಗೆ ಎದ್ದಿವೆ. ರಾಹುಲ್ ಬದಲಿಗೆ ಓಪನಿಂಗ್ ಜವಾಬ್ದಾರಿಯನ್ನು ಇಶಾನ್ ಕಿಶನ್ ವಹಿಸಿಕೊಳ್ಳಬಹುದು. ಇದಲ್ಲದೇ ತಂಡದಿಂದ ಹೊರಗುಳಿದಿರುವ ಶಿಖರ್ ಧವನ್ ರಂತಹ ಅನುಭವಿ ಆರಂಭಿಕರಿಗೆ ಮತ್ತೆ ಅವಕಾಶ ನೀಡಬೇಕೆಂಬ ಕೂಗು ಕೇಳಿಬರುತ್ತಿದೆ. ಭುವಿ ಮತ್ತು ರಾಹುಲ್ ಅಲ್ಲದೆ ಇನ್ನೂ ಅನೇಕ ಆಟಗಾರರು ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಕಳಪೆ ಪ್ರದರ್ಶನ ನೀಡಿದ್ದು ತಂಡದ ಸೋಲಿಗೆ ಕಾರಣವಾಗಿದೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News