ನಾನಾ.. ಜೀವನನಾ ಅಂತ ನೋಡೇ ಬಿಡ್ತೀನಿ.. ಇಟ್ಸ್ ಮೈ ಚಾಲೆಂಜ್ : ಗುಡುಗಿದ ವೈಷ್ಣವಿಗೌಡ
ಸಾಕಷ್ಟು ಗಾಸಿಫ್ಗಳ ನಂತರ ನೇರವಾಗಿ ಕ್ಯಾಮರಾ ಮುಂದೆ ಬಂದಿರುವ ಸ್ಯಾಂಡಲ್ವುಡ್ ಕ್ಯೂಟ್ ಬೆಡಗಿ ನಟಿ ವೈಷ್ಣವಿ ಗೌಡ ಅವರು ನಿಶ್ಚಿತಾರ್ಥ ಪ್ರಸಂಗದ ಕುರಿತು ಕ್ಲ್ಯಾರಿಟಿ ನೀಡಿದ್ದಾರೆ. ಅಲ್ಲದೆ, ಅಂದು ನಡೆದ ಘಟನೆಯ ಕುರಿತು ಸಂಪೂರ್ಣವಾಗಿ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದು, ಈ ಕುರಿತ ವಿಡಿಯೋ ಒಂದನ್ನು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿದ್ದಾರೆ.
Vaishnavi Gowda : ಸಾಕಷ್ಟು ಗಾಸಿಫ್ಗಳ ನಂತರ ನೇರವಾಗಿ ಕ್ಯಾಮರಾ ಮುಂದೆ ಬಂದಿರುವ ಸ್ಯಾಂಡಲ್ವುಡ್ ಕ್ಯೂಟ್ ಬೆಡಗಿ ನಟಿ ವೈಷ್ಣವಿ ಗೌಡ ಅವರು ನಿಶ್ಚಿತಾರ್ಥ ಪ್ರಸಂಗದ ಕುರಿತು ಕ್ಲ್ಯಾರಿಟಿ ನೀಡಿದ್ದಾರೆ. ಅಲ್ಲದೆ, ಅಂದು ನಡೆದ ಘಟನೆಯ ಕುರಿತು ಸಂಪೂರ್ಣವಾಗಿ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದು, ಈ ಕುರಿತ ವಿಡಿಯೋ ಒಂದನ್ನು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ವೈಷ್ಣವಿ ಗೌಡ ಅವರು ಗುಟ್ಟಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಜೊತೆಗೆ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಈ ಕುರಿತು ವೈಷ್ಣವಿಗೌಡ ಅವರ ತಂದೆ ತಾಯಿ ಸಹ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದರು. ಆದ್ರೆ ಇಷ್ಟೇಲ್ಲಾ ಆದ್ರೂ ಸಹ ವೈಷ್ಣವಿಗೌಡ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ವೈಷ್ಣವಿಗೌಡ ಅವರ ಘಟನೆ ಕುರಿತು ಮಾತನಾಡಿದ್ದಾರೆ.
ಇದನ್ನೂ ಓದಿ: ಜಾನ್ವಿ ಜೊತೆ ವಿಜಯ್ ಡೇಟಿಂಗ್ ಅಂತೆ : ಆಗಿದ್ರೆ ರಶ್ಮಿಕಾ ಗತಿ ಹೇಗೆ ದೇವ್ರು...!
ಈ ಕುರಿತು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ವಿಡಿಯೋ ಹಂಚಿಕೊಂಡಿರುವ ವೈಷ್ಣವಿ, ನಾನು ನಡೆದ ಘಟನೆಯಿಂದ ಯಾವುದೇ ರೀತಿಯಾಗಿ ಡಿಪ್ರೆಶನ್ಗೆ ಹೋಗಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಅಲ್ಲದೆ, ಅಂತಹ ಸಂದರ್ಭದಲ್ಲಿ ತಮಗೆ ಸಪೋರ್ಟ್ ಮಾಡಿ ತಮ್ಮ ನಗುವಿಗೆ ಕಾರಣರಾದವರಿಗೆ ವೈಷ್ಣವಿ ಅವರು ಧನ್ಯವಾದಗಳನ್ನು ಅರ್ಪಿಸಿದರು. ಹಾಗೂ ಟ್ಯಾಟೂ ವಿಚಾರವಾಗಿ ಮಾತನಾಡಿ, ಈ ಸಂಗತಿಗಳೆಲ್ಲ ನಡೆಯುವ ಮುನ್ನವೇ ಟ್ಯಾಟೂ ಹಾಕಿಸಿದ್ದೆ.. ಘಟನೆಗೂ ಇದಕ್ಕೂ ಯಾವುದೇ ಲಿಂಕ್ ಇಲ್ಲ ಎಂದು ಹೇಳಿ ನಕ್ಕರು.
ಇನ್ನು ಮುಂದುವರೆದು ಮಾತನಾಡಿದ ಅವರು, ಮದುವೆ ನನ್ನ ದೊಡ್ಡ ಕನಸು. ಅದನ್ನು ನಾನು ನನಸು ಮಾಡಿಕೊಳ್ಳುತ್ತೇನೆ. ಎಲ್ಲವನ್ನೂ ಪಾಸಿಟಿವ್ ಆಗಿ ಸ್ವೀಕರಿಸುತ್ತೇನೆ. ಜೀವನದಲ್ಲಿ ಕತ್ತಲು ಬೆಳಕು ರೀತಿ ಕಷ್ಟಗಳು ಬರುತ್ತವೆ ನಾನು ಬೆಳಕಿನೆಡೆಗೆ ಹೋಗಲು ಇಷ್ಟ ಪಡುತ್ತೇನೆ. ಮದುವೆ ಅನ್ನೋದು ಮೈ ಡ್ರೀಮ್ ಅದಕ್ಕಾಗಿ ನಾನಾ.. ನನ್ನ ಜೀವನಾನಾ ಎಂಬುದನ್ನು ನೋಡೇ ಬಿಡುತ್ತೇನೆ ಇಟ್ಸ್ ಮೈ ಚಾಲೆಂಜ್ ಎಂದ ವೈಷ್ಣವಿ ಗೌಡ ಅವರು ಮತ್ತೊಮ್ಮೆ ಎಲ್ಲಿರಿಗೂ ಧನ್ಯವಾದಗಳನ್ನು ಹೇಳಿದರು.
ಇದನ್ನೂ ಓದಿ: Keerthy Suresh: ಕಾಸ್ಟಿಂಗ್ ಕೌಚ್ ಬಗ್ಗೆ ಆಘಾತಕಾರಿ ಸಂಗತಿ ಬಿಚ್ಚಿಟ್ಟ ನಟಿ ಕೀರ್ತಿ ಸುರೇಶ್
ನಟ ವಿದ್ಯಾ ಭರಣ್ ಅವರೊಂದಿಗೆ ವೈಷ್ಣವಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎನ್ನುವ ಸುದ್ದಿ ಜೊತೆ ಫೋಟೋ ಒಂದು ವೈರಲ್ ಆಗಿತ್ತು. ಅದಕ್ಕೆ ವೈಷ್ಣವಿ ಅವರ ಪೋಷಕರು ಕ್ಲಾರೀಟಿ ನೀಡಿದ್ದರು. ಅಲ್ಲದೆ, ವಿದ್ಯಾಭರಣ್ ಅವರಿಗೆ ಸಂಬಂಧಪಟ್ಟ ಅಡಿಯೋ ಒಂದು ಇಂಟರ್ನೆಟ್ನಲ್ಲಿ ವೈರಲ್ ಆಗಿತ್ತು. ಇಷ್ಟೇಲ್ಲ ಘಟನೆಗಳಿಂದ ವೈಷ್ಣವಿ ಗೌಡ ಅವರು ಡಿಪ್ರೆಶನ್ಗೆ ಹೋಗಿದ್ದಾರೆ ಎಂದು ಹೇಳಲಾಗಿತ್ತು. ಆದ್ರೆ ನಗು ನಗುತ್ತಲೇ ಕಮ್ಬ್ಯಾಕ್ ಮಾಡಿರುವ ಸುಂದರಿ ತಮಗೆ ಏನೂ ಆಗಿಲ್ಲ ಹ್ಯಾಪಿಯಾಗಿ ಇರುವುದಾಗಿ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.