ನಟಿ ಜಯಸುಧಾಗೆ ಮೂರನೇ ಮದುವೆ ಸುದ್ದಿ ನಿಜವೇ ?
Entertainment:ಜಯಸುಧಾ ಕನ್ನಡ , ಮಲಯಾಳಂ, ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದು, ಹೆಚ್ಚಾಗಿ ತಾಯಿ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ವಜ್ರಕಾಯ,ತಾಯಿಯ ಮಡಿಲು,ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.
Entertainment:ಜಯಸುಧಾಕನ್ನಡ,ಮಲಯಾಳಂ,ಸೇರಿದಂತೆ ಹಲವು ಭಾಷೆಯ ಚಿತ್ರಗಳಲ್ಲಿ ನಟಿಸಿದ್ದು, ಹೆಚ್ಚಾಗಿ ತಾಯಿ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ವಜ್ರಕಾಯ,ತಾಯಿಯ ಮಡಿಲು,ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡ ವಿಜಯ್ ಚಿತ್ರದಲ್ಲಿ ತಾಯಿ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದ ನಟಿ ಜಯಸುಧಾ. ಜಯಸುಧಾ ಅವರು ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗ ಪ್ರವೇಶಿಸಿದ್ದರು.
ಇದನ್ನೂ ಓದಿ:ಶುಭ ಪೂಂಜಾಗೆ ದೇಹದ ತೂಕ 17 KG ಇಳಿಸೋ ಟಾರ್ಗೆಟ್..
ಜಯಸುಧಾ ಅವರ ಮೊದಲ ಪತಿ ವಾಡೆ ರಮೇಶ್ ಅವರ ಮದುವೆ ಹೆಚ್ಚು ಕಾಲ ಉಳಿಯಲಿಲ್ಲ. ನಂತರ 1985 ರಲ್ಲಿ ಅವರು ನಿತಿನ್ ಕಪೂರ್ ಅವರನ್ನು ವಿವಾಹವಾದರು.ಈ ಸಂಬಂಧ ಅವರಿಗೆ ಇಬ್ಬರು ಮಕ್ಕಳಿದ್ದು 2017ರಲ್ಲಿ ನಿತಿನ್ ಆತ್ಮಹತ್ಯೆ ಶರಣಾರಾದರು.
ಅವರು ಹೆಚ್ಚಾಗಿ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ನಟಿ ಮೂರನೇ ಬಾರಿಗೆ ಮದುವೆಯಾಗಿದ್ದಾರೆ ಎಂಬ ವರದಿಯೊಂದು ಹೊರ ಬಿದ್ದಿದೆ. ಜಯಸುಧಾ ಅಮೆರಿಕದ ಉದ್ಯಮಿಯನ್ನು ಮದುವೆಯಾಗಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಆಕೆಯ ಜೀವನಚರಿತ್ರೆ ಬರೆಯಲು ಅವರು ನಟಿಯನ್ನು ಭೇಟಿಯಾದರು ಎಂದು ಆಕೆಯ ಸ್ನೇಹಿತರು ಪ್ರತಿಕ್ರಿಯಿಸಿದ್ದಾರೆ
ಇದನ್ನೂ ಓದಿ:ಪ್ರಧಾನಿ ಮೋದಿ ಭೇಟಿಯಾದ ಅಶ್ವಿನಿ ಪುನೀತ್, ರಾಕಿಂಗ್ ಸ್ಟಾರ್ ಯಶ್ & ರಿಷಬ್ ಶೆಟ್ಟಿ...!
ಸುದ್ದಿಯ ಸತ್ಯಾಸತ್ಯತೆ ಬಗ್ಗೆ ಪ್ರತಿಕ್ರಿಯಿಸಿದ ಜಯಸುಧಾ, ತಾನು ಮದುವೆಯಾಗಿರುವ ವ್ಯಕ್ತಿ ಎನ್‌ಆರ್‌ಐ ಆಗಿದ್ದು, ತನ್ನ ಜೀವನದ ಬಯೋಪಿಕ್ ಮಾಡಲು ಬಯಸುತ್ತಿರುವ ಚಿತ್ರ ನಿರ್ಮಾಪಕ ಎಂದು ಹೇಳಿದ್ದಾರೆ. ತನ್ನ ಬಗ್ಗೆ ವೈಯಕ್ತಿಕವಾಗಿ ತಿಳಿದುಕೊಳ್ಳಲು ಅವರು ಹೆಚ್ಚಿನ ಸಮಯ ತನ್ನೊಂದಿಗೆ ಪ್ರಯಾಣಿಸುತ್ತಾರೆ ಎಂದು ಹೇಳಿದ್ದಾರೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.