Vani Jairam life history : ʼಬೆಳ್ಳಿ ಮೋಡವೆ ಎಲ್ಲಿ ಓಡುವೆʼ.. ಕನ್ನಡ ಗೀತೆಗಳಿಗೆ ಉಸಿರಾಗಿದ್ದ ʼವಾಣಿʼ ʼಜೀವನ ಸಂಜೀವನʼ..!
ʼಶಂಕರಾಭರಣʼ ಸೃಷ್ಟಿಸಿ ಭಾರತೀಯ ಚಿತ್ರರಂಗಕ್ಕೆ ಅತ್ಯಮೂಲ್ಯ ಉಡುಗೂರೆ ನೀಡಿದ್ದ ನಿರ್ದೇಶಕ ಕೆ. ವಿಶ್ವನಾಥ್ ಅವರ ಅಗಲಿಗೆ ಮನಸ್ಸಿನಿಂದ ಮರೆಯಾಗುವ ಮುನ್ನವೇ ಗಾನ ಕೋಗಿಲೆ ಪದ್ಮಭೂಷಣ ವಾಣಿ ಜಯರಾಮ್ ಅವರ ನಿಧನ ಚಿತ್ರರಂಗಕ್ಕೆ ತುಂಬಲಾರದಂತಹ ನಷ್ಟವನ್ನುಂಟುಮಾಡಿದೆ. ʼತೆರೆದಿದೆ ಮನೆ ಓ ಬಾ ಅತಿಥಿʼ ಎನ್ನುತ್ತಲೇ ಕರುನಾಡಿನ ಜನರ ಮನದಲ್ಲಿ ಭಾವನಾತ್ಮಕವಾಗಿ ಬೆರೂರಿದ್ದ ಸುಮಧುರ ʼವಾಣಿʼ ಇಂದು ಮರೆಯಾಗಿದೆ.
Vani Jairam life history : ʼಶಂಕರಾಭರಣʼ ಸೃಷ್ಟಿಸಿ ಭಾರತೀಯ ಚಿತ್ರರಂಗಕ್ಕೆ ಅತ್ಯಮೂಲ್ಯ ಉಡುಗೂರೆ ನೀಡಿದ್ದ ನಿರ್ದೇಶಕ ಕೆ. ವಿಶ್ವನಾಥ್ ಅವರ ಅಗಲಿಗೆ ಮನಸ್ಸಿನಿಂದ ಮರೆಯಾಗುವ ಮುನ್ನವೇ ಗಾನ ಕೋಗಿಲೆ ಪದ್ಮಭೂಷಣ ವಾಣಿ ಜಯರಾಮ್ ಅವರ ನಿಧನ ಚಿತ್ರರಂಗಕ್ಕೆ ತುಂಬಲಾರದಂತಹ ನಷ್ಟವನ್ನುಂಟುಮಾಡಿದೆ. ʼತೆರೆದಿದೆ ಮನೆ ಓ ಬಾ ಅತಿಥಿʼ ಎನ್ನುತ್ತಲೇ ಕರುನಾಡಿನ ಜನರ ಮನದಲ್ಲಿ ಭಾವನಾತ್ಮಕವಾಗಿ ಬೆರೂರಿದ್ದ ಸುಮಧುರ ʼವಾಣಿʼ ಇಂದು ಮರೆಯಾಗಿದೆ.
ಹೌದು.. ವಾಣಿ ಜಯರಾಮ್ ಅವರ ಧ್ವನಿ ಕನ್ನಡಿಗರಿಗೆ ತುಂಬಾ ಹತ್ತಿರ.. ಅದೇಷ್ಟೋ ನೊಂದ ಮನಗಳಿಗೆ ಸ್ಪೂರ್ತಿ, ದಣಿದ ಜೀವಕ್ಕೆ ಚಿಲುಮೆ ನೀಡುವ ಧ್ವನಿ ವಾಣಿ ಜಯರಾಮ್ ಅವರದ್ದು. 1945ರ ನವೆಂಬರ್ 30 ರಂದು ತಮಿಳುನಾಡಿನ ವೆಲ್ಲೂರಿನಲ್ಲಿ ಜನಿಸಿದ ವಾಣಿ ಜಯರಾಮ್ ಅವರು, ಬಾಲ್ಯದಲ್ಲಿ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದರು. ತಂದೆ ಹೆಸರು ದೊರೈಸ್ವಾಮಿ ಅಯ್ಯಂಗಾರ್ ತಾಯಿ ಪದ್ಮಾವತಿ. ರಂಗ ರಾಮಾನುಜ ಅಯ್ಯಂಗಾರ್ ಅವರ ಬಳಿ ತರಬೇತಿ ಪಡೆದ ವಾಣಿ ಜಯರಾಮ್ ಅವರು, ಕವಿ ಮುತ್ತುಸ್ವಾಮಿ ದೀಕ್ಷಿತರ ಕವಿತೆಗಳನ್ನೂ ಕಲಿತು ಕರಗತ ಮಾಡಿಕೊಂಡಿದ್ದರು. ಕೂಡಲೂರು ಶ್ರೀನಿವಾಸ ಅಯ್ಯಂಗಾರ್, ಟಿ.ಆರ್.ಬಾಲಸುಬ್ರಹ್ಮಣ್ಯಂ ಸೇರಿದಂತೆ ಆರ್.ಎಸ್.ಮಣಿ ಮುಂತಾದವರಿಂದ ಕರ್ನಾಟಕ ಸಂಗೀತದಲ್ಲಿ ತರಬೇತಿಯನ್ನು ಪಡೆದರು.
ಇದನ್ನೂ ಓದಿ:Vani Jayaram : ಬೆಡ್ ರೂಮಿನಲ್ಲಿ ಜಾರಿ ಬಿದ್ದು ಸಾವನ್ನಪ್ಪಿದ್ರಾ ʼಪದ್ಮಭೂಷಣ ವಾಣಿ ಜಯರಾಮ್ʼ..!?
1960 ರ ದಶಕದ ಜಯರಾಮ್ ಅವರೊಂದಿಗೆ ಮದುವೆಯಾದರು ನಂತರ ಮುಂಬೈಗೆ ಸ್ಥಳಾಂತರಗೊಂಡರು. ವಾಣಿಯವರ ಗಾಯನ ಪ್ರತಿಭೆಯನ್ನು ಗಮನಿಸಿದ ಜಯರಾಮ್ ಬಾನಿ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆಯಲು ಪ್ರೋತ್ಸಾಹಿಸಿದರು. ನಂತರದ ದಿನಗಳಲ್ಲಿ ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಪ್ರಾಮುಖ್ಯತೆ ಪಡೆದರು. 1971 ರಲ್ಲಿ ತಮ್ಮ ಗಾಯನ ವೃತ್ತಿಯನ್ನು ಪ್ರಾರಂಭಿಸಿ, ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಂಗೀತ ಸೇವೆ ಮಾಡಿದರು. ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳ ಸಾವಿರಾರು ಚಿತ್ರಗಳಲ್ಲಿ 10 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅಲ್ಲದೆ, ಅನೇಕ ಭಕ್ತಿಗೀತೆಗಳಿಗೂ ಸಹ ಧ್ವನಿ ನೀಡಿದ್ದಾರೆ.
ಚಂದನ ವನದಲ್ಲಿ ʼವಾಣಿʼ : ತಮಿಳು ಚಿತ್ರಗಳಲ್ಲಿ ವಾಣಿಯವರೊಂದಿಗೆ ಕೆಲಸ ಮಾಡಿದ್ದ ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ಅವರು 1973 ರಲ್ಲಿ ʼಕೆಸರಿನ ಕಮಲʼ ಚಿತ್ರದಲ್ಲಿ ಹಾಡು ಹಾಡಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು. ವಾಣಿಯವರು ಈ ಚಲನಚಿತ್ರದಲ್ಲಿ ಎರಡು ಹಾಡುಗಳನ್ನು ಹಾಡಿದ್ದಾರೆ. ನಂತರ ʼಉಪಾಸನೆʼ (1974) ಚಿತ್ರದ ʼಭಾವವೆಂಬ ಹೂವು ಅರಳಿʼ ಗೀತೆಯನ್ನು ಹಾಡಿದರು. ಈ ಹಾಡು ಮೂರು ದಶಕಗಳ ಕಾಲ ಕನ್ನಡ ಚಲನಚಿತ್ರಗಳಲ್ಲಿ ಅವರ ಸ್ಥಾನವನ್ನು ಭದ್ರಪಡಿಸಿತು.
ಇದನ್ನೂ ಓದಿ:Vani Jayaram passed away : ಜನಪ್ರಿಯ ಗಾಯಕಿ ವಾಣಿ ಜಯರಾಮ್ ನಿಧನ
ವಿಜಯ ಭಾಸ್ಕರ್ ಅವರ ನಂತರ, ಜಿ.ಕೆ. ವೆಂಕಟೇಶ್, ಎಂ. ರಂಗರಾವ್, ರಾಜನ್-ನಾಗೇಂದ್ರ, ಸತ್ಯಂ, ಉಪೇಂದ್ರ ಕುಮಾರ್, ಟಿ.ಜಿ.ಲಿಂಗಪ್ಪ, ಎಲ್. ವೈದ್ಯನಾಥನ್ ಮತ್ತು ಹಂಸಲೇಖ ಅವರಂತಹ ದಿಗ್ಗಜ ಸಂಗೀತ ಸಂಯೋಜಕರ ಹಾಡುಗಳಿಗೆ ವಾಣಿಯವರದ್ದೇ ಧ್ವನಿ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಸಿನಿಮಾಗಳಲ್ಲಿಯೂ ವಾಣಿಯವರು ಹಾಡಿದ್ದಾರೆ. ವಿಶೇಷ ಅಂದ್ರೆ, ಇಷ್ಟು ದಿನ ಶಾಸ್ತ್ರೀಯ ಸಂಗೀತ, ಭಕ್ತಿ ಪ್ರಧಾನ ಗೀತೆಗಳು, ಚಿತ್ರಗೀತೆ ಹಾಡುತ್ತಿದ್ದ ವಾಣಿಯವರು ʼಬಿಳಿ ಹೆಂಡ್ತಿʼ (1975) ಚಿತ್ರದ ʼಹ್ಯಾಪಿಯೆಸ್ಟ್ ಮೊಮೆಂಟ್ʼ ಹಾಡಿನಲ್ಲಿ ವೆಸ್ಟರ್ನ್ ಶೈಲಿಯಲ್ಲಿ ಹಾಡು ಹಾಡುವ ಮೂಲಕ ಅಚ್ಚರಿ ಮೂಡಿಸಿದ್ದರು.
ತಮ್ಮ ಸಮಕಾಲೀನ ಗಾಯಕಿ ಎನ್. ಜಾನಕಿಯೊಂದಿಗೆ, ವಾಣಿ ಕೆಲವು ಮಹಿಳಾ ಯುಗಳ ಗೀತೆಗಳನ್ನು ಹಾಡಿದ್ದಾರೆ. ʼಮಧುಮಾಸ ಚಂದ್ರಮʼ (ವಿಜಯ ವಾಣಿ 1976) ಮತ್ತು ʼತೆರೆದಿದೆ ಮನೆ ಓ ಬಾ ಅತಿಥಿʼ (ಹೊಸ ಬೆಳಕು 1982). ನಟ-ಗಾಯಕ ಡಾ. ರಾಜ್‌ಕುಮಾರ್ ಅವರೊಂದಿಗೆ, 1980 ರ ದಶಕದಲ್ಲಿ ವಾಣಿಯವರು ಅನೇಕ ಜನಪ್ರಿಯ ಹಾಡುಗಳನ್ನು ಹಾಡಿದ್ದಾರೆ. ರಾಜ್‌ಕುಮಾರ್, ಪಿ.ಬಿ.ಶ್ರೀನಿವಾಸ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಪಿ.ಜಯಚಂದ್ರನ್ ಮತ್ತು ಕೆ.ಜೆ.ಯೇಸುದಾಸ್ ಅವರೊಂದಿಗೆ ಸಾಕಷ್ಟು ಸೂಪರ್ ಹಿಟ್ ಗೀತೆಗಳಿಗೆ ವಾಣಿಯವರ ದ್ವನಿ ನೀಡಿದ್ದಾರೆ.
ಇದನ್ನೂ ಓದಿ: Wolf Teaser | ಪ್ರಭುದೇವ ʼವೂಲ್ಫ್ʼ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದ ಶಿವಣ್ಣ..!
ʼಈ ಶತಮಾನದ ಮಾದರಿ ಹೆಣ್ಣುʼ, ʼಬೆಸುಗೆ ಬೆಸುಗೆʼ, ʼಬೆಳ್ಳಿ ಮೋಡವೆ ಎಲ್ಲಿ ಓಡುವೆʼ, ʼಜೀವನ ಸಂಜೀವನʼ, ʼದೇವ ಮಂದಿರದಲ್ಲಿʼ, ʼಹಾಡು ಹಳೆಯದಾದರೆನುʼ, ʼಕನ್ನಡ ನಾಡಿನ ಕರಾವಳಿʼ, ʼಪ್ರಿಯತಮಾ ಕರುಣೆಯ ತೋರೆಯಾʼ ʼಸದಾ ಕಣ್ಣಲಿ ಪ್ರಾಣಯದ ಗೀತೆ ಹಾಡುವೆ", ʼಎಂದೆಂದು ನಿನ್ನನು ಮರೆತುʼ, ʼಹೊದೆಯ ದೂರ ಓ ಜೊತೆಗಾರʼ ಸೇರಿದಂತೆ ಇನ್ನೂ ಸಾಕಷ್ಟು ಸುಮಧುರ ಗೀತೆಗಳನ್ನು ವಾಣಿ ಜಯರಾಮ್ ಅವರು ಹಾಡಿದ್ದಾರೆ. ಇಂದು ಅವರು ದೈಹಿಕವಾಗಿ ನಮ್ಮ ಜೊತೆ ಇಲ್ಲವೆಂದರೂ.. ʼವಾಣಿʼ ಕನ್ನಡಿಗರ ಮನದಲ್ಲಿ ಚಿರಕಾಲ ಉಳಿದಿರುತ್ತದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.