Wolf Teaser | ಪ್ರಭುದೇವ ʼವೂಲ್ಫ್‌ʼ ಚಿತ್ರದ ಫಸ್ಟ್‌ ಲುಕ್‌ ರಿಲೀಸ್ ಮಾಡಿದ ಶಿವಣ್ಣ..!

ನಮ್ಮ ಭಾರತೀಯ ಚಿತ್ರರಂಗ ಇತ್ತೀಚಿಗೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದ್ಭುತ ಸಂದೇಶ ಮತ್ತು ಸಖತ್ ಮನರಂಜನೆ ನೀಡೋ ಸಿನಿಮಾಗಳು ರಿಲೀಸ್ ಆಗೋ ಮೂಲಕ ಸಿಕ್ಕಾಪಟ್ಟೆ ಸಾಗರದಾಚೆಯೂ ಪ್ರೇಕ್ಷಕ, ವಿಮರ್ಶಕರ ಗಮನ ಸೆಳೆಯುತ್ತಿವೆ. ಇದೀಗ ಅದೇ ಸಾಲಿಗೆ ಮತ್ತೊಂದು ಸಿನಿಮಾ ಸೇರ್ಪಡೆಯಾಗೋ ಎಲ್ಲಾ ಲಕ್ಷಣ ಕಂಡುಬರುತ್ತಿದೆ.

Written by - YASHODHA POOJARI | Edited by - Krishna N K | Last Updated : Feb 4, 2023, 02:23 PM IST
  • ಭಾರತೀಯ ಚಿತ್ರರಂಗ ಇತ್ತೀಚಿಗೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
  • ಅದ್ಭುತ ಸಂದೇಶ ಮತ್ತು ಸಖತ್ ಮನರಂಜನೆ ನೀಡೋ ಸಿನಿಮಾಗಳು ರಿಲೀಸ್ ಜಗತ್ತಿನಾದ್ಯಂತ ಮೋಡಿ ಮಾಡುತ್ತಿವೆ.
  • ಇದೀಗ ಅದೇ ಸಾಲಿಗೆ ಪ್ರಭುದೇವ ನಟನೆಯ ʼವೊಲ್ಫ್‌ʼ ಸಿನಿಮಾ ಸೇರುವ ನಿರೀಕ್ಷೆ ಮೂಡಿಸುತ್ತಿದೆ.
Wolf Teaser | ಪ್ರಭುದೇವ ʼವೂಲ್ಫ್‌ʼ ಚಿತ್ರದ ಫಸ್ಟ್‌ ಲುಕ್‌ ರಿಲೀಸ್ ಮಾಡಿದ ಶಿವಣ್ಣ..! title=

Prabhudeva Wolf Teaser : ನಮ್ಮ ಭಾರತೀಯ ಚಿತ್ರರಂಗ ಇತ್ತೀಚಿಗೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದ್ಭುತ ಸಂದೇಶ ಮತ್ತು ಸಖತ್ ಮನರಂಜನೆ ನೀಡೋ ಸಿನಿಮಾಗಳು ರಿಲೀಸ್ ಆಗೋ ಮೂಲಕ ಸಿಕ್ಕಾಪಟ್ಟೆ ಸಾಗರದಾಚೆಯೂ ಪ್ರೇಕ್ಷಕ, ವಿಮರ್ಶಕರ ಗಮನ ಸೆಳೆಯುತ್ತಿವೆ. ಇದೀಗ ಅದೇ ಸಾಲಿಗೆ ಮತ್ತೊಂದು ಸಿನಿಮಾ ಸೇರ್ಪಡೆಯಾಗೋ ಎಲ್ಲಾ ಲಕ್ಷಣ ಕಂಡುಬರುತ್ತಿದೆ.

ಹೌದು.. ಕನ್ನಡ ಚಿತ್ರರಂಗಕ್ಕೆ ಸದಭಿರುಚಿ ಚಿತ್ರಗಳನ್ನು ನೀಡಿರುವ ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ಲಾಂಛನದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಿರ್ಮಾಪಕ ಸಂದೇಶ್ ನಾಗರಾಜ್‌ ನಿರ್ಮಿಸುತ್ತಿರುವ, ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ನಾಯಕರಾಗಿ ನಟಿಸಿರುವ ʼವೂಲ್ಫ್‌ʼ (wolf) ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಸಿನಿಮಾದ ಫರ್ಸ್ಟ್ ಲುಕ್ ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರು ಫಸ್ಟ್ ಲುಕ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಜೊತೆಗೆ ಸಿನಿಮಾ ದೊಡ್ಡ ಮಟ್ಟದಲ್ಲೇ ಮ್ಯಾಜಿಕ್ ಮಾಡುತ್ತೆ ಅನ್ನೋ ಸಂದೇಶ ರವಾನಿಸಿದ್ದಾರೆ.

ಇದನ್ನೂ ಓದಿ: Kabza : ಉಪ್ಪಿ ʼಕಬ್ಜʼ ಸಾಂಗ್‌ ರಿಲೀಸ್‌... ರಾಜಮೌಳಿ, ಮೆಗಾಸ್ಟಾರ್ ಗೆಸ್ಟ್‌..!

ಬಹುಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.  ವಿನು ವೆಂಕಟೇಶ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಕನ್ನಡ, ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ.  ಪ್ರಭುದೇವ, ಅಂಜು ಕುರಿಯನ್, ಲಕ್ಷ್ಮೀ ರೈ, ಅನಸೂಯ(ಪುಷ್ಪ ಖ್ಯಾತಿ) ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. 

ಅಂಬರೀಶ್ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಅರುಳ್ ವಿನ್ಸೆಂಟ್ ಅವರ ಛಾಯಾಗ್ರಹಣವಿದೆ. ಲಾರೆನ್ಸ್ ಕಿಶೋರ್ ಸಂಕಲನ, ಪ್ರದೀಪ್ ದಿನೇಶ್ ಸಾಹಸ ನಿರ್ದೇಶನ, ಮಣಿ ಮೌಳಿ ಕಲಾ ನಿರ್ದೇಶನ ಹಾಗೂ ಗಣೇಶ್, ಶ್ರೀಧರ್, ಭೂಪತಿ ರಾಜ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಪ್ತಸಾದ್ ನಿರ್ಮಾಣ ಮೇಲ್ವಿಚಾರಣೆ ಹಾಗೂ ಶಂಕರ್ ಲಿಂಗಂ, ಮೈಸೂರು ಸುರೇಶ್ ನಿರ್ಮಾಣ ನಿರ್ವಹಣೆ ವೂಲ್ಫ್‌ ಚಿತ್ರದ ನಿರ್ಮಾಣ ನಿರ್ವಾಹಕರು. ಚಿತ್ರೀಕರಣ ಮುಕ್ತಾಯವಾಗಿದೆ. ಸಿನಿಮಾ ರಿಲೀಸ್ ಬಗ್ಗೆ ಸಿನಿಮಾ ತಂಡ ಯಾವಾಗ ಮಾಹಿತಿ ಕೊಡುತ್ತೆ ಅನ್ನೋದನ್ನ ಕಾದುನೋಡೋಣ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News