Vikrant Rona: ವಿಕ್ರಾಂತ್ ರೋಣ ಮುಂಗಡ ಟಿಕೆಟ್ ಬುಕಿಂಗ್ಗಾಗಿ ಕಾಯ್ತಿದ್ದೀರಾ? ಇಲ್ಲಿದೆ ಮಹತ್ವದ ಅಪ್ಡೇಟ್
Vikrant Rona Advance Booking: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಇದೇ ಜುಲೈ 28 ರಂದು ಬಿಡುಗಡೆಯಾಗಲಿದೆ. ಈಗಾಗಲೇ ಟ್ರೇಲರ್, ಪೋಸ್ಟರ್ ಮತ್ತು ಪ್ರಚಾರ ಚಟುವಟಿಕೆಗಳ ಮೂಲಕ ಸಿನಿ ರಸಿಕರಲ್ಲಿ ಸಾಕಷ್ಟು ಕುತೂಹಲ ಸೃಷ್ಟಿಸಿದೆ ಈ ಸಿನಿಮಾ.
Vikrant Rona Ticket Booking: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಇದೇ ಜುಲೈ 28 ರಂದು ಬಿಡುಗಡೆಯಾಗಲಿದೆ. ಈಗಾಗಲೇ ಟ್ರೇಲರ್, ಪೋಸ್ಟರ್ ಮತ್ತು ಪ್ರಚಾರ ಚಟುವಟಿಕೆಗಳ ಮೂಲಕ ಸಿನಿ ರಸಿಕರಲ್ಲಿ ಸಾಕಷ್ಟು ಕುತೂಹಲ ಸೃಷ್ಟಿಸಿದೆ ಈ ಸಿನಿಮಾ. ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ದೇಶೀಯವಾಗಿ ಆರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ, ಮೂಲ ಆವೃತ್ತಿ ಕನ್ನಡ ಮತ್ತು ಡಬ್ಬಿಂಗ್ ಆವೃತ್ತಿ ಹಿಂದಿ, ಇಂಗ್ಲಿಷ್, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಗ ಬರಲಿದೆ.
ಕಿಚ್ಚ ಕ್ರಿಯೇಷನ್ಸ್, ಶಾಲಿನಿ ಆರ್ಟ್ಸ್ ಮತ್ತು ಇನ್ವೆನಿಯೊ ಫಿಲ್ಮ್ಸ್ ಇಂಡಿಯಾ ಬ್ಯಾನರ್ ಅಡಿಯಲ್ಲಿ ಜಾಕ್ ಮಂಜು ಮತ್ತು ಅಲಂಕಾರ್ ಪಾಂಡಿಯನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರ ತಂಡವು ಇತ್ತೀಚೆಗೆ ವಿಶ್ವಾದ್ಯಂತ ವಿತರಕರ ಪಟ್ಟಿಯನ್ನು ಅನಾವರಣಗೊಳಿಸಿದೆ. ಸಲ್ಮಾನ್ ಖಾನ್ ಫಿಲ್ಮ್ಸ್ ಪ್ರೆಸೆಂಟ್ಸ್, ಪಿವಿಆರ್ ಪಿಕ್ಚರ್ಸ್ ಡಿಸ್ಟ್ರಿಬ್ಯೂಷನ್ ಹಿಂದಿ ಆವೃತ್ತಿಯನ್ನು ವಿತರಿಸಲಿದೆ. ಯೋಗೇಶ್ ದ್ವಾರಕೀಶ್ ಬಂಗಲೆ ಅವರ ಒನ್‌ಟ್ವೆಂಟಿ 8 ಮತ್ತು ಮೀಡಿಯಾ ಸಾಗರೋತ್ತರ ಮಾರುಕಟ್ಟೆಯನ್ನು ನೋಡಿಕೊಳ್ಳಲಿದೆ.
ಇದನ್ನೂ ಓದಿ: Exclusive: ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿಗೆ ಫ್ರೈಡ್ ಚಿಕನ್ ಅಂದ್ರೆ ಪಂಚಪ್ರಾಣವಂತೆ!!
ದಕ್ಷಿಣ ಭಾರತದಲ್ಲಿ ಕಿಚ್ಚ ಕ್ರಿಯೇಷನ್ಸ್ ಪ್ರೆಸೆಂಟ್ಸ್, ಶಾಲಿನಿ ಆರ್ಟ್ಸ್ (ಕರ್ನಾಟಕ), ಕಾಸ್ಮೋಸ್ ಎಂಟರ್ಟೈನ್ಮೆಂಟ್ (ತೆಲುಗು ಆವೃತ್ತಿ), ಜೀ ಸ್ಟುಡಿಯೋಸ್ (ತಮಿಳು ಆವೃತ್ತಿ), ದುಲ್ಕರ್ ಸಲ್ಮಾನ್ಸ್ ಮತ್ತು ವೇಫೇರರ್ ಫಿಲ್ಮ್ಸ್ (ಮಲಯಾಳಂ ಆವೃತ್ತಿ) ಯನ್ನು ವಿತರಿಸಲಿವೆ.
ಮುಂಗಡ ಬುಕಿಂಗ್:
ವಿಕ್ರಾಂತ್ ರೋಣ ಸಿನಿಮಾದ ಕನ್ನಡ ಆವೃತ್ತಿಯ ಮುಂಗಡ ಬುಕಿಂಗ್‌ಗಳು ಇಂದು ಮಧ್ಯಾಹ್ನ 12 ಗಂಟೆಯಿಂದ ಆರಂಭವಾಗಲಿವೆ. ವಿಕ್ರಾಂತ್ ರೋಣ ಬಿಡುಗಡೆಗೆ ನಾಲ್ಕು ದಿನಗಳ ಮುಂಚೆ ಕನ್ನಡ ಆವೃತ್ತಿಯ ಟಿಕೆಟ್ ಬುಕಿಂಗ್ ಆರಂಭವಾಗುತ್ತಿದೆ. ವರದಿಯ ಪ್ರಕಾರ, ಈ ಸಿನಿಮಾವನ್ನು 15 ಕೋಟಿ ರೂಪಾಯಿ ಬಜೆಟ್‌ನಲ್ಲಿ ಮಾಡಬೇಕಿತ್ತು. ಆದರೆ ನಿರ್ಮಾಪಕರು ಚಿತ್ರದ ಪ್ರಮಾಣದಿಂದಾಗಿ ಬಜೆಟ್ ಅನ್ನು 95 ಕೋಟಿ ರೂಪಾಯಿಗಳಿಗೆ ಹೆಚ್ಚಿಸಿದ್ದಾರೆ.
‘ಗುಮ್ಮಾ ಬಂದ ಗುಮ್ಮಾ..’ ವಿಕ್ರಾಂತ್ ರೋಣ ಚಿತ್ರದ ಮತ್ತೊಂದು ಸಾಂಗ್ ರಿಲೀಸ್
ಈಗ, ವಿಕ್ರಾಂತ್ ರೋಣ 3D ಮತ್ತು 2D ಆವೃತ್ತಿಗಳು ಬರುತ್ತಿವೆ. ಇದೀಗ ಮತ್ತೊಮ್ಮೆ ಇಡೀ ವಿಶ್ವವೇ ಕನ್ನಡ ಚಿತ್ರರಂಗದತ್ತ ಮುಖಮಾಡುವ ನಿರೀಕ್ಷೆ ದುಪ್ಪಟ್ಟಾಗಿದೆ. ವರದಿಗಳ ಅಂದಾಜಿನ ಪ್ರಕಾರ, ಬಾಕ್ಸ್ ಆಫೀಸ್ ಪ್ರದರ್ಶನದಲ್ಲಿ 'ವಿಕ್ರಾಂತ್ ರೋಣ' 1 ನೇ ದಿನದಂದು 15-20 ಕೋಟಿ ರೂಪಾಯಿಗಳಷ್ಟು ಸಂಗ್ರಹಿಸಬಹುದು. ಇದು ವಾರದ ಮಧ್ಯದಲ್ಲಿ ಬಿಡುಗಡೆಯಾಗುತ್ತಿರುವ ಕಾರಣ 4-ದಿನಗಳ ವಿಸ್ತೃತ ಆರಂಭಿಕ ವಾರಾಂತ್ಯದಲ್ಲಿ 50-75 ಕೋಟಿಗಳನ್ನು ಕಲೆ ಹಾಕಬುದುಎಂಬ ನಿರೀಕ್ಷಿಯಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.