‘ಗುಮ್ಮಾ ಬಂದ ಗುಮ್ಮಾ..’ ವಿಕ್ರಾಂತ್‌ ರೋಣ ಚಿತ್ರದ ಮತ್ತೊಂದು ಸಾಂಗ್‌ ರಿಲೀಸ್‌

Gumma Banda Gumma: ವಿಕ್ರಾಂತ್ ರೋಣ ಸದ್ಯ ದೇಶ ವಿದೇಶಗಳಲ್ಲಿ ಅತೀ ಹೆಚ್ಚು ನಿರೀಕ್ಷೆ ಹಾಗೂ ಕುತೂಹಲ ಮೂಡಿಸಿರುವ ಚಿತ್ರ. ವಿಕ್ರಾಂತ್ ರೋಣ ಸಿನಿಮಾ ವಿದೇಶದಲ್ಲಿ 1200ಕ್ಕೂ ಅಧಿಕ ಪರದೆಗಳಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ. ಇದೀಗ ಬಹಳ ಕುತೂಹಲ ಮೂಡಿಸಿದ್ದ ಹಾಡು ‘ಗುಮ್ಮಾ ಬಂದ ಗುಮ್ಮಾ..’ ಈ ಹಾಡು ಇದೀಗ ಬಿಡುಗಡೆಯಾಗಿದೆ. 

Written by - K Karthik Rao | Edited by - Chetana Devarmani | Last Updated : Jul 21, 2022, 11:48 AM IST
  • ವಿಕ್ರಾಂತ್‌ ರೋಣ ಚಿತ್ರ ಮತ್ತೊಂದು ಸಾಂಗ್‌ ರಿಲೀಸ್‌
  • ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ
  • ಪ್ರೇಕ್ಷಕನಿಗೆ ರೋಮಾಂಚನ ಗೊಳಿಸುವಂತಿದೆ ಸಾಂಗ್
‘ಗುಮ್ಮಾ ಬಂದ ಗುಮ್ಮಾ..’ ವಿಕ್ರಾಂತ್‌ ರೋಣ ಚಿತ್ರದ ಮತ್ತೊಂದು ಸಾಂಗ್‌ ರಿಲೀಸ್‌  title=
ವಿಕ್ರಾಂತ್‌ ರೋಣ

Vikrant Rona New Song: ವಿಕ್ರಾಂತ್ ರೋಣ ಸದ್ಯ ದೇಶ ವಿದೇಶಗಳಲ್ಲಿ ಅತೀ ಹೆಚ್ಚು ನಿರೀಕ್ಷೆ ಹಾಗೂ ಕುತೂಹಲ ಮೂಡಿಸಿರುವ ಚಿತ್ರ. ವಿಕ್ರಾಂತ್ ರೋಣ ಸಿನಿಮಾ ವಿದೇಶದಲ್ಲಿ 1200ಕ್ಕೂ ಅಧಿಕ ಪರದೆಗಳಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ. ಈ ಚಿತ್ರ 3ಡಿ, 2ಡಿ ಎರಡರಲ್ಲೂ ಮೂಡಿ ಬರ್ತಾಯಿದ್ದು, ಈಗಾಗಲೇ ಟ್ರೇಲರ್ ಮೂಲಕ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ. ಈ ಮಧ್ಯೆ ಚಿತ್ರತಂಡದವರು ಒಂದಾದ ಮೇಲೆ ಒಂದರಂತೆ ಸಾಂಗ್​ಗಳನ್ನು ರಿಲೀಸ್ ಮಾಡುತ್ತಿದ್ದಾರೆ. ಈಗಾಗಲೇ ಮೂರು ಹಾಡುಗಳನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು. ಈಗ ಮತ್ತೊಂದು ಹಾಡು ರಿಲೀಸ್​ ಆಗಿದೆ. 

ಇದನ್ನೂ ಓದಿ: ಕಿಚ್ಚನಿಗೆ ಕೊರೊನಾ..! ಸುದೀಪ್ ಆರೋಗ್ಯದ ಬಗ್ಗೆ ಜಾಕ್ ಮಂಜು ಹೇಳಿದ್ದೇನು?

‘ವಿಕ್ರಾಂತ್ ರೋಣ’ ಚಿತ್ರದ ಮೊದಲ ಹಾಡು ‘ರಾ ರಾ ರಕ್ಕಮ್ಮ..’ ಈ ಸಾಂಗ್ ಸೂಪರ್ ಹಿಟ್ ಕೂಡ ಆಗಿದೆ. ಇದಾದ ಬಳಿಕ ‘ರಾಜಕುಮಾರಿ..’ ಹೆಸರಿನ ಮೆಲೋಡಿ ಸಾಂಗ್ ಬಿಡುಗಡೆ ಮಾಡಲಾಯಿತು. ನಂತರ ರಿಲೀಸ್ ಆಗಿದ್ದು ‘ಹೇ ಫಕೀರಾ..’ ಹಾಡು. ಇದೀಗ ಬಹಳ ಕುತೂಹಲ ಮೂಡಿಸಿದ್ದ ಹಾಡು ‘ಗುಮ್ಮಾ ಬಂದ ಗುಮ್ಮಾ..’ ಈ ಹಾಡು ಇದೀಗ ಬಿಡುಗಡೆಯಾಗಿದೆ. 'ರಾತ್ರಿ ಕುದುರೆ ಬೆನ್ನ ಹೇರಿ ಬೀಸೊ ಗಾಳಿ ಜೊತೆಗೆ ಸೇರಿ' ಎಂಬ ಸಾಹಿತ್ಯದ ಮೂಲಕ ಶುರು ಆಗೊ ಈ ಹಾಡು ಆಲಿಸುವ ಪ್ರೇಕ್ಷಕನಿಗೆ ರೋಮಾಂಚನ ಗೊಳಿಸುವಂತಿದೆ.

;

ಅಜನೀಶ್ ಲೋಕನಾಥ್ ಅವರು ವಿಕ್ರಾಂತ್ ರೋಣ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅವರು ಒಂದಕ್ಕಿಂತ ಒಂದು ಭಿನ್ನ ಹಾಡುಗಳನ್ನು ಕಟ್ಟಿಕೊಟ್ಟಿದ್ದಾರೆ. ಸುದೀಪ್ ರವರ ಕಿಚ್ಚಿನ ನಟನೆಗೆ ಈ ಸಿನಿಮಾದ ಹಾಡುಗಳು ಕಿಕ್ಕ್ ನೀಡೋದಂತು ಸುಳ್ಳಲ್ಲ. ಸಿನಿಮಾ ಹಾಡುಗಳಿಂದಲೂ ಚಿತ್ರದ ಮೇಲಿರುವ ನಿರೀಕ್ಷೆ ದುಪ್ಪಟ್ಟಾಗಿದೆ. ಈ ಚಿತ್ರಕ್ಕೆ ಅನೂಪ್ ಭಂಡಾರಿ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಜಾಕ್ ಮಂಜು ಅವರು ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕಾಗಿ ಅವರು ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಹೀಗಾಗಿ, ಸಿನಿಮಾ ಅದ್ದೂರಿಯಾಗಿ ಮೂಡಿ ಬಂದಿದೆ ಎಂಬುದಕ್ಕೆ ಟ್ರೇಲರ್ ಸಾಕ್ಷ್ಯ ನೀಡಿದೆ.

ಇದನ್ನೂ ಓದಿ: ಶೀಘ್ರದಲ್ಲೇ ಜೀ ಕನ್ನಡದಲ್ಲಿ ಅಬ್ಬರಿಸಲಿದ್ದಾನೆ ರಾಕಿ ಭಾಯ್...!

ಇನ್ನೇನೂ ಕೆಲವೇ ದಿನಗಳಲ್ಲಿ ವಿಕ್ರಾಂತ್‌ ರೋಣ ಬೆಳ್ಳಿ ಪರದೆ ಮೇಲೆ ಅಬ್ಬರಿಸಲಿದೆ. ಈ ಹಿನ್ನೆಲೆ ಪ್ರಮೋಷನ್‌ ಕೆಲಸ ಭರ್ಜರಿಯಾಗಿ ನಡೆಯುತ್ತಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅಭಿನಯದ ವಿಕ್ರಾಂತ್‌ ರೋಣ ಬಿಡುಗಡೆಗೆ ಅಭಿಮಾನಿಗಳು ಕಾತುರರಾಗಿದ್ದಾರೆ. ಸದ್ಯ, ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ವಿಶ್ವಾದ್ಯಂತ ರಿಲೀಸ್‌ ಆಗಲಿರುವ ಈ ಸಿನಿಮಾದ ಹಾಡುಗಳು ಎಲ್ಲೆಡೆ ಟ್ರೆಂಡ್‌ ಕ್ರಿಯೇಟ್‌ ಮಾಡಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News