ನಟ ಕಿಚ್ಚ ಸುದೀಪ್‌ ಅಭಿನಯದ 'ವಿಕ್ರಾಂತ್‌ ರೋಣ' ಸಿನಿಮಾ ಜಗತ್ತಿನಾದ್ಯಂತ ಹೈಪ್‌ ಕ್ರಿಯೇಟ್‌ ಮಾಡಿದ್ದು, ಕನ್ನಡ ಸಿನಿಮಾ ಹಾಲಿವುಡ್‌ ಅಂಗಳದಲ್ಲೂ ಸಂಚಲನ ಸೃಷ್ಟಿಸುತ್ತಿದೆ. ಈ ಹೊತ್ತಲ್ಲೇ ಸುದೀಪ್‌ ಸಿನಿಮಾ ಟೀಸರ್ ನೋಡಿ ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದಾರೆ.


COMMERCIAL BREAK
SCROLL TO CONTINUE READING

ಅಭಿಮಾನಿಗಳು ಮಾತ್ರವಲ್ಲ ಬಾಲಿವುಡ್‌ ನಟರು ಕೂಡ 'ವಿಕ್ರಾಂತ್‌ ರೋಣ' ಟೀಸರ್‌ ನೋಡಿ ಫುಲ್‌ ಖುಷ್‌ ಆಗಿದ್ದಾರೆ. ಇದೇ ರೀತಿ ಬಾಲಿವುಡ್‌ ನಟ ರಿತೇಶ್‌ ದೇಶ್‌ಮುಖ್ 'ವಿಕ್ರಾಂತ್‌ ರೋಣ' ಟೀಸರ್‌ಗೆ ಫುಲ್‌ ಮಾರ್ಕ್ಸ್‌ ಕೊಟ್ಟಿದ್ದಾರೆ.


ಇದನ್ನೂ ಓದಿ:Golden Star Ganesh: ‘ಬಾನದಾರಿಯಲ್ಲಿ’ ಪಯಣಿಸಲು ಸಜ್ಜಾದ ಗೋಲ್ಡನ್ ಸ್ಟಾರ್ ಗಣೇಶ್!


ಅಷ್ಟಕ್ಕೂ ನಟ ಕಿಚ್ಚ ಸುದೀಪ್‌ ಹಾಗೂ ನಟ ರಿತೇಶ್‌ ದೇಶ್‌ಮುಖ್ ನಡುವಿನ ಸ್ನೇಹ-ಬಾಂಧವ್ಯ ಹಲವು ದಶಕಗಳಿಂದ ಗಟ್ಟಿಯಾಗಿದೆ. 2010ರಲ್ಲಿ ರಿಲೀಸ್‌ ಆಗಿದ್ದ 'ರಣ್' ಸಿನಿಮಾದಲ್ಲಿ ನಟ ಕಿಚ್ಚ ಸುದೀಪ್‌ (Kiccha Sudeep) ಹಾಗೂ ರಿತೇಶ್‌ ಒಟ್ಟಿಗೆ ನಟಿಸಿದ್ದರು. 'ರಣ್' ಸಿನಿಮಾದಲ್ಲಿ ಇಬ್ಬರ ಜೋಡಿ ಮೋಡಿ ಮಾಡಿತ್ತು. ಇದೀಗ ತಮ್ಮ ಗೆಳೆಯನ ಸಿನಿಮಾ ಟೀಸರ್ ರಿಲೀಸ್‌ ಹಿನ್ನೆಲೆಯಲ್ಲಿ ರಿತೇಶ್‌ ದೇಶ್‌ಮುಖ್ ಟ್ವೀಟ್‌ ಮಾಡಿ ಸಂತಸ ಹಂಚಿಕೊಂಡಿದ್ದಾರೆ.


'ವಿಕ್ರಾಂತ್‌ ರೋಣ' ಟೀಸರ್‌ ನೋಡಿ ಯಾವ ಯಾವ ಸ್ಟಾರ್‌ ನಟರು ಹೇಗೆ ವಿಶ್‌ ಮಾಡಿದ್ರು..?


ಏನಂದ್ರು ರಿತೇಶ್..?
'ವಿಕ್ರಾಂತ್‌ ರೋಣ (Vikrant Rona)' ಟೀಸರ್‌‌ ನೋಡಿ ಟ್ವೀಟ್‌ ಮಾಡಿರುವ ಬಾಲಿವುಡ್‌ ನಟ ರಿತೇಶ್‌ ದೇಶ್‌ಮುಖ್, How awesome is this teaser - absolutely proud of you my friend my dearest @KicchaSudeep - can’t wait for the trailer - bring it fast man !!! ಎಂದು ಬರೆದುಕೊಂಡಿದ್ದಾರೆ. ಈ ಮೂಲಕ 'ವಿಕ್ರಾಂತ್‌ ರೋಣ' ಟೀಸರ್‌ಗೆ ನಟ ರಿತೇಶ್‌ ದೇಶ್‌ಮುಖ್ ಫಿದಾ ಆಗಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.