ಮುಂಬೈ: ಹಿಂದಿಯ ಪ್ರಸಿದ್ಧ ‘ಅನುಪಮಾ’ ಧಾರವಾಹಿಯ ನಟಿ ರೂಪಾಲಿ ಗಂಗೂಲಿ(Rupali Ganguly) ಈ ಬಾರಿ ವಿಶೇವಾಗಿ ಫ್ರೆಂಡ್​ಶಿಪ್​ ಡೇ ಆಚರಿಸಿದ್ದಾರೆ. ಪ್ರಾಣಿಪ್ರೇಮಿಯಾಗಿರುವ ಅವರಿಗೆ ಶ್ವಾನಗಳೆಂದರೆ ಬಲು ಇಷ್ಟ. ತಮ್ಮ ಸೀರಿಯಲ್ ಸೆಟ್ ನಲ್ಲಿ ಬೀದಿನಾಯಿಗಳ ಜೊತೆಗೆ ಅವರು ಸ್ನೇಹಿತರ ದಿನವನ್ನು ಆಚರಿಸಿದ್ದಾರೆ. ಬೀದಿನಾಯಿಗಳ ಜೊತೆ ರೂಪಾಲಿ ಆತ್ಮಿಯತೆಯಿಂದ ಇರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.


COMMERCIAL BREAK
SCROLL TO CONTINUE READING

ತಮ್ಮ ಸೀರಿಯಲ್ ಸೆಟ್ ನಲ್ಲಿ ನಟಿ ರೂಪಾಲಿ ಅವರು ಕೆಲವು ಶ್ವಾನ(Street Dog)ಗಳ ಸ್ನೇಹ ಸಂಪಾದಿಸಿದ್ದಾರೆ. ಅವುಗಳ ಜೊತೆಗಿರುವ ಫೋಟೋಗಳು ಮತ್ತು ವಿಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಆಗಸ್ಟ್ 1ರ ಅಂತಾರಾಷ್ಟ್ರೀಯ ಸ್ನೇಹಿತರ ದಿನ(International Friendship Day)ದ ಅಂಗವಾಗಿ ತನ್ನ ವಿಶೇಷ ಸ್ನೇಹಿತರ ಜೊತೆಗೆ ರೂಪಾಲಿ ಫ್ರೆಂಡ್​ಶಿಪ್​ ಡೇ ಆಚರಿಸಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಬೀದಿ ನಾಯಿಗಳ ಜೊತೆಗೆ ರೂಪಾಲಿಯವರು ಅತ್ಯಂತ ಸಂತೋಷದಿಂದ ಇರುವ ದೃಶ್ಯಗಳನ್ನು ನಾವು ಕಾಣಬಹುದಾಗಿದೆ.


 

 

 

 



 

 

 

 

 

 

 

 

 

 

 

A post shared by Rups (@rupaliganguly)


ಇದನ್ನೂ ಓದಿ: Sandalwood: ಮತ್ತೊಂದು ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡ ಕಿಚ್ಚ ಸುದೀಪ್


‘ಅನುಪಮಾ ಸೀರಿಯಲ್(Anupama Serial) ಸೆಟ್‌ನಲ್ಲಿ  ವಿಶೇಷ ಸ್ನೇಹಿತರೊಂದಿಗೆ ನಾನು ಫ್ರೆಂಡ್​ಶಿಪ್​ ಡೇ ಆಚರಿಸುತ್ತಿದ್ದೇನೆ. ನನ್ನ ಸ್ನೇಹ ಹೀಗೆ ದಿನ ಮುಂದುವರಿದಿದೆ.. ಅದೂ ನನ್ನ ರೋಮಾಂಚಿತ ಸ್ನೇಹಿತರ ಜೊತೆ’ ಅಂತಾ ರೂಪಾಲಿ ಕ್ಯಾಪ್ಶನ್ ಬರೆದುಕೊಂಡಿದ್ದಾರೆ.


ನಟಿ ರೂಪಾಲಿ ಜನಪ್ರಿಯ ಧಾರಾವಾಹಿ ‘ಅನುಪಮಾ’ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ತಮ್ಮ ವಿಶಿಷ್ಟ ಅಭಿನಯದಿಂದ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಬೀದಿನಾಯಿಗಳ(Street Dog) ಜೊತೆಗೆ ಅನೋನ್ಯತೆಯಿಂದ ಇರುವ ನಟಿಯ ವಿಡಿಯೋ ಕಂಡು ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ರೂಪಾಲಿಯವರ ಶ್ವಾನಪ್ರೀತಿಯನ್ನು ಅನೇಕರು ಮೆಚ್ಚಿಕೊಂಡು ಕಾಮೆಂಟ್ ಮಾಡಿದ್ದಾರೆ. ನಿಜವಾದ ಸ್ನೇಹಿತರೊಂದಿಗೆ ನೀವು ಫ್ರೆಂಡ್​ಶಿಪ್​ ಡೇ(Friendship Day) ಆಚರಿಸಿದ್ದೀರಿ ಅಂತಾ ಕೆಲವರು ಹೇಳಿದ್ದಾರೆ.


ಇದನ್ನೂ ಓದಿ: ಸಾಕ್ಷ್ಯನಾಶ ಹಿನ್ನೆಲೆ ನಟಿ ಶಿಲ್ಪಾ ಶೆಟ್ಟಿ ಪತಿ ಬಂಧನ: ಹೈಕೋರ್ಟ್ ಗೆ ಮುಂಬೈ ಪೊಲೀಸರ ಹೇಳಿಕೆ


ಕೆಲ ದಿನಗಳ ಹಿಂದಷ್ಟೇ ರೂಪಾಲಿಯವರು ಪ್ರಾಣಿಗಳ ಮೇಲೆ ನಡೆಯುವ ಕ್ರೌರ್ಯವನ್ನು ನಿಲ್ಲಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದರು. ‘ಪ್ರಾಣಿಗಳ ಮೇಲೆ ಯಾವುದೇ ರೀತಿ ಕ್ರೂರತೆ ತೋರಿಸಬಾರದು. ಅವು ಮೂಕಪ್ರಾಣಿಗಳು(Animals), ಅವುಗಳಿಗೂ ಬದುಕುವ ಹಕ್ಕಿದೆ. ಅವುಗಳ ಮೇಲೆ ಹಲ್ಲೆ ನಡೆಸುವುದು, ಕಲ್ಲಿನಿಂದ ಹೊಡೆದು ಹಿಂಸೆ ನೀಡುವುದು ಮಾಡಬಾರದು. ಪ್ರಾಣಿಗಳೊಂದಿಗೆ ಮನುಷ್ಯನು ಹೃದಯದಿಂದ ವರ್ತಿಸಬೇಕು ಎಂದು ಮನವಿ ಮಾಡಿದ್ದ ಅವರು, ನೀವು ಏನಾದರೂ ಮೂಕಪ್ರಾಣಿಗಳಿಗೆ ಹಿಂಸೆ ಮಾಡಿದರೆ ನಾನು ನಿಮ್ಮ ಜೊತೆಗೆ ಮಾತನಾಡುವುದಿಲ್ಲ’ ಅಂತಾ ಹೇಳಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ